ಅಬು ಧಾಬಿ(ಅ.28): ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ  ದೇವದತ್ ಪಡಿಕ್ಕಲ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು  6 ವಿಕೆಟ್ 164 ನಷ್ಟಕ್ಕೆ ರನ್ ಸಿಡಿಸಿದೆ. ಮುಂಬೈ ಬ್ಯಾಟಿಂಗ್ ಶಕ್ತಿಗೆ ಇದು ಬೃಹತ್ ಮೊತ್ತವಲ್ಲ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿಗೆ ಉತ್ತಮ ಆರಂಭ ಪಡೆಯಿತು. ಜೊಶ್ ಫಿಲಿಪ್ ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್‌ಗೆ 71 ರನ್ ಜೊತೆಯಾಟ ನೀಡಿದರು. ಜೋಶ್ ಫಿಲಿಪ್ 33 ರನ್ ಸಿಡಿಸಿ ಔಟಾದರು. ಇತ್ತ ದೇವದತ್ ಪಡಿಕ್ಕಲ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು.

ನಾಯಕ ವಿರಾಟ್ ಕೊಹ್ಲಿ ಕೇವಲ 9 ರನ್ ಸಿಡಿಸಿ ಔಟಾದರು. ಎಬಿ ಡಿವಿಲಿಯರ್ಸ್ 15 ರನ್ ಕಾಣಿಕೆ ನೀಡಿದರು. ಶಿವಂ ದುಬೆ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು. ಅಬ್ಬರಿಸಿದ ದೇವದತ್ ಪಡಿಕ್ಕಲ್ 74 ರನ್ ಸಿಡಿಸಿ ಔಟಾದರು.

ಬೃಹತ್ ಮೊತ್ತದ ನಿರೀಕ್ಷೆಯಲ್ಲಿದ್ದ ಆರ್‌ಸಿಬಿಗೆ ದೇವದತ್ ಪಡಿಕ್ಕಲ್ ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್ ಅಬ್ಬರಿಸಲಿಲ್ಲ. ಹೀಗಾಗಿ ಆರ್‌ಸಿಬಿ ವಿಕೆಟ್ 6 ನಷ್ಟಕ್ಕೆ 164 ರನ್ ಸಿಡಿಸಿತು.