ಅಬು ಧಾಬಿ(ನೆ.02):  ದೇವದತ್ ಪಡಿಕ್ಕಲ್ ಅರ್ಧಶತಕ, ಎಬಿ ಡಿವಿಲಿಯರ್ಸ್ 35 ರನ್ ಸಿಡಿಸಿದರೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬೃಹತ್ ಮೊತ್ತ ಪೇರಿಸಲು ವಿಫಲವಾಗಿದೆ. ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿತು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿ 25 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಜೋಶುವಾ ಫಿಲಿಪ್ 12 ರನ್ ಸಿಡಿಸಿ ಔಟಾದರು. ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಬೆಂಗಳೂರು ತಂಡ ಚೇತರಿಸಿಕೊಂಡಿತು. ಕೊಹ್ಲಿ 29 ರನ್ ಸಿಡಿಸಿ ಔಟಾದರು.

ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ದೇವದತ್ ಪಡಿಕ್ಕಲ್  ಹಾಫ್ ಸೆಂಚುರಿ ಸಿಡಿಸಿದರು. ಆದರೆ 50 ರನ್ ಸಿಡಿಸಿದ ಬೆನ್ನಲ್ಲೇ ಪಡಿಕ್ಕಲ್ ವಿಕೆಟ್ ಪತನಗೊಂಡಿತು. ಕ್ರಿಸ್ ಮೊರಿಸ್ ಡಕೌಟ್ ಆದರು. ಇದು ಆರ್‌ಸಿಬಿ ತಂಡಕ್ಕೆ ತೀವ್ರ ಹೊಡೆತ ಬಿದ್ದಿತು. 

ಎಬಿ ಡಿವಿಲಿಯರ್ಸ್ ಹಾಗೂ ಶಿವಂ ದುಬೆ ಜೊತೆಯಾಟ ಆರ್‌ಸಿಬಿ ತಂಡದಲ್ಲಿ ಬೃಹತ್ ಮೊತ್ತದ ಸಣ್ಣ ಆಸೆ ಚಿಗುರೊಡೆಸಿತು. ಆದರೆ ಡಿವಿಲಿರ್ಸ್ 35 ರನ್ ಸಿಡಿಸಿ ಔಟಾದರು. ಶಿವಂ ದುಬೆ ಆಟ 17 ರನ್‌ಗೆ ಅಂತ್ಯವಾಯಿತು. ಅಂತಿಮ ಹಂತದಲ್ಲಿ ಆರ್‌ಸಿಬಿ ರನ್‌ಗಿಂತ ಹೆಚ್ಚು ವಿಕೆಟ್ ಕಳೆದುಕೊಂಡಿತು. 7 ವಿಕೆಟ್ ಕಳೆದುಕೊಂಡು 152 ರನ್ ಸಿಡಿಸಿತು.