ದುಬೈ(ಸೆ.20): ಸೂಪರ್ ಬ್ಯಾಟಿಂಗ್ ಮಾಡಲು ಕಿಂಗ್ಸ್ ಇಲೆವೆನ್ ಪಂಜಾಬ್ ಕ್ರೀಸ್‌ಗಿಳಿಯಿತು. ನಾಯಕ ಕೆಎಲ್ ರಾಹುಲ್ ಹಾಗೂ ನಿಕೊಲಸ್ ಪೂರನ್ ಸೂಪರ್ ಓವರ್‌ನಲ್ಲಿ ಅಬ್ಬರಿಸಲು ಕಣಕ್ಕಿಲಿದರು. ಮೊದಲ ಎಸೆತದಲ್ಲಿ ರಾಹುಲ್ 2 ರನ್ ಚಚ್ಚಿದರು. 

IPL 2020: ಪಂಜಾಬ್ vs ಡೆಲ್ಲಿ ಪಂದ್ಯ ಟೈನಲ್ಲಿ ಅಂತ್ಯ, ಗೆಲುವಿಗಾಗಿ ಸೂಪರ್ ಓವರ್!.

ಕಾಗಿಸೋ ರಬಾಡ ಸೂಪರ್ ಓವರ್‌ಗೆ ಪಂಜಾಬ್‌ ಭಾರಿ ಬೆಲೆ ತೆರಬೇಕಾಯಿತು.  2ನೇ ಎಸೆತದಲ್ಲಿ ರಾಹುಲ್ ವಿಕೆಟ್ ಪತನಗೊಂಡಿತು. 3ನೇ ಎಸೆತದಲ್ಲಿ ಪೂರನ್ ವಿಕೆಟ್ ಕೂಡ ಪತನಗೊಂಡಿತು. ಅಲ್ಲಿಗೆ ಪಂಜಾಬ್ ಕತೆ ಮುಗಿಯಿತು. ಕೆೇವಲ 2 ರನ್ ಸಿಡಿಸಿದ ಪಂಜಾಬ್ ಡೆಲ್ಲಿ ಗೆಲುವಿಗೆ 3 ರನ್ ಟಾರ್ಗೆಟ್ ನೀಡಿತು.

3 ರನ್ ಗುರಿ ಬೆನ್ನಟ್ಟಲು ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಕಣಕ್ಕಿಳಿದರು. ಇತ್ತ ಮೊಹಮ್ಮದ್ ಶಮಿ, 3 ರನ್ ಡಿಫೆಂಡ್ ಮಾಡಿಕೊಳ್ಳೋ ಉತ್ಸಾಹದಲ್ಲಿದ್ದರು. ಮೊದಲ ಎಸೆತ ಡಾಟ್ ಬಾಲ್ ಆದರೆ ಎರಡನೇ ಎಸೆತ ವೈಡ್. ಹೀಗಾಗಿ 1 ರನ್ ಬಿಟ್ಟುಕೊಟ್ಟರು. ಮರು ಎಸೆತದಲ್ಲಿ 2 ರನ್ ಸಿಡಿಸಿದ ರಿಷಬ್ ಪಂತ್ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಕೆಚ್ಚೆದೆಯ ಹೋರಾಟ ನೀಡಿದ ಪಂಜಾಬ್ ತಂಡ ಸೂಪರ್ ಓವರ್‌ನಲ್ಲಿ ಸುಲಭವಾಗಿ ಪಂದ್ಯ ಕೈಚೆಲ್ಲಿತು.