Asianet Suvarna News Asianet Suvarna News

IPL 2020: ಬಲಿಷ್ಠ ಡೆಲ್ಲಿಗೆ ಕೋಲ್ಕತ ನೈಟ್‌ ರೈಡರ್ಸ್ ಚಾಲೆಂಜ್..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 42ನೇ ಪಂದ್ಯದಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 Delhi Capitals vs Kolkata Knight Riders faces in Abu Dhabi match Preview kvn
Author
Abu Dhabi - United Arab Emirates, First Published Oct 24, 2020, 1:58 PM IST

ಅಬುಧಾಬಿ(ಅ.24): ಪಟ್ಟಿಯ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಇಲ್ಲಿ ಶನಿವಾರ ನಡೆಯಲಿರುವ ಐಪಿಎಲ್‌ ಮಧ್ಯಾಹ್ನದ ಪಂದ್ಯದಲ್ಲಿ ಎದುರಾಗಲಿದೆ. 

ಕಳೆದ ಪಂದ್ಯದಲ್ಲಿ ಪಂಜಾಬ್‌ ಎದುರು ಸೋತಿದ್ದ ಡೆಲ್ಲಿ, ಆ ತಪ್ಪನ್ನು ತಿದ್ದಿಕೊಂಡು, ಕೋಲ್ಕತಾ ವಿರುದ್ಧ ಗೆದ್ದು ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಡೆಲ್ಲಿ 10 ಪಂದ್ಯಗಳಿಂದ 7ರಲ್ಲಿ ಗೆದ್ದು 14 ಅಂಕಗಳಿಸಿದೆ. ಡೆಲ್ಲಿ ತನ್ನ ಬ್ಯಾಟಿಂಗ್‌ ಶಕ್ತಿಯನ್ನು ಒಗ್ಗೂಡಿಸಿ, ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಗೆಲುವಿಗಾಗಿ ವಿಭಿನ್ನ ರಣತಂತ್ರ ಹೆಣೆದಿದೆ. 

IPL 2020: ಮುಂಬೈ ಎದುರು ಸಿಎಸ್‌ಕೆ ಮುಗ್ಗರಿಸಿದ್ದು ಹೇಗೆ?

ಮತ್ತೊಂದೆಡೆ ಕೆಕೆಆರ್‌ ಉಳಿದ 4 ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ ಹಂತಕ್ಕೇರುವ ಉತ್ಸಾಹದಲ್ಲಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧದ ಸೋಲಿನ ಆಘಾತಕ್ಕೊಳಗಾಗಿರುವ ಕೆಕೆಆರ್‌, ಇದೀಗ ಡೆಲ್ಲಿ ಎದುರು ಗೆದ್ದು ಜಯದ ಲಯಕ್ಕೆ ಮರಳುವ ಲೆಕ್ಕಾಚಾರದಲ್ಲಿದೆ.

ಪಿಚ್‌ ರಿಪೋರ್ಟ್‌: ಅಬುಧಾಬಿ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 160-170. ಟಾಸ್‌ ಪ್ರಮುಖ ಪಾತ್ರವಹಿಸಲಿದೆ. ವೇಗದ ಬೌಲರ್‌ಗಳು ನಿರ್ಣಾಯಲ ಎನಿಸಲಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್‌, ಶ್ರೇಯಸ್‌  ಅಯ್ಯರ್ (ನಾಯಕ), ರಿಷಭ್ ಪಂತ್‌, ಮಾರ್ಕಸ್ ಸ್ಟೋಯ್ನಿಸ್‌, ಶಿಮ್ರೋನ್ ಹೆಟ್ಮೇಯರ್‌, ಆನ್ರಿಚ್ ನೊಕಿಯೆ,  ಅಕ್ಷರ್ ಪಟೇಲ್‌, ಆರ್. ಅಶ್ವಿನ್‌, ಕಗಿಸೋ ರಬಾಡ, ತುಷಾರ್ ದೇಶ್‌ಪಾಂಡೆ‌.

ಕೆಕೆಆರ್‌: ಶುಭ್‌ಮನ್ ಗಿಲ್‌, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಸುನಿಲ್ ನರೈನ್‌, ದಿನೇಶ್ ಕಾರ್ತಿಕ್‌, ಇಯಾನ್ ಮಾರ್ಗನ್‌ (ನಾಯಕ), ಪ್ಯಾಟ್ ಕಮಿನ್ಸ್‌, ಕುಲ್ದೀಪ್ ಯಾದವ್‌, ಲೂಕಿ ಫಗ್ರ್ಯೂಸನ್‌, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ.

ಸ್ಥಳ: ಅಬುಧಾಬಿ 
ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

Follow Us:
Download App:
  • android
  • ios