ಅಬು ಧಾಬಿ(ಅ.11): ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೋರಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ 2 ಪ್ರಮುಖ ಬದಲಾವಣೆ ಮಾಡಲಾದೆ. ರಿಷಬ್ ಪಂತ್ ಬದಲು ಅಜಿಂಕ್ಯ ರಹಾನೆಗೆ ಅವಕಾಶ ನೀಡಲಾಗಿದೆ. ಶಿಮ್ರೊನ್ ಹೆಟ್ಮೆಯರ್ ಬದಲು ಅಲೆಕ್ಸ್ ಕ್ಯಾರಿ ತಂಡ ಸೇರಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ಪರ 150ನೇ ಪಂದ್ಯ ಆಡುತ್ತಿರುವ ನಾಯಕ ರೋಹಿತ್ ಶರ್ಮಾ‌ಗೆ ಜಹೀರ್ ಖಾನ್ ನೂತನ ಜರ್ಸಿ ನೀಡಿದರು. ಮುಂಬೈ ತಂಡದಲ್ಲಿ  ಯಾವುದೇ ಬದಲಾವಣೆ ಮಾಡಿಲ್ಲ.

2020ನೇ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಆಡಿದ 6 ಪಂದ್ಯದಲಲಿ 5 ಗೆುವು ದಾಖಲಿಸೋ ಮೂಲಕ 10 ಅಂಕ ಸಂಪಾದಿಸಿದೆ. ಇನ್ನು ಮುಂಬೈ ಇಂಡಿಯನ್ಸ್ 4 ಗೆಲುವು 2 ಸೋಲಿನೊಂದಿಗೆ 8 ಅಂಕ ಸಂಪಾದಿಸಿದೆ.