ದುಬೈ(ನ.10): 13ನೇ ಆವೃತ್ತಿ ಐಪಿಎಲ್ ಟೂರ್ನಿ ಯಾರ ಪಾಲಾಗಲಿದೆ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಮುಂಬೈ ಹಾಗೂ ಡೆಲ್ಲಿ ಜಿದ್ದಾ ಜಿದ್ದಿನ ಹೋರಾಟ ನಡೆಸುತ್ತಿದೆ. ಆರಂಭಿಕ ಹಂತದಲ್ಲಿ ಮುಂಬೈ ತಂಡ ಡೆಲ್ಲಿಗೆ ತ್ರಿಬಲ್ ಶಾಕ್ ನೀಡಿದೆ.

IPL 2020 ಫೈನಲ್: ಡೆಲ್ಲಿ ವಿರುದ್ಧ ಟಾಸ್ ಗೆದ್ದ ಡೆಲ್ಲಿ

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಟ್ರೆಂಟ್ ಬೋಲ್ಟ್ ಹಾಗೂ ಜಯಂತ್ ಯಾದವ್ ಬೌಲಿಂಗ್ ದಾಳಿಗೆ ಡೆಲ್ಲಿ 22 ರನ್ ಕಲೆಹಾಕುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡಿತು.

ಮಾರ್ಕಸ್ ಸ್ಟೊಯ್ನಿಸ್ ಡಕೌಟ್ ಆದರೆ, ಅಜಿಂಕ್ಯ ರಹಾನೆ ಕೇವಲ 2 ರನ್ ಸಿಡಿಸಿ ಔಟಾದರು. ಟ್ರೆಂಟ್ ಬೋಲ್ಟ್ ದಾಳಿ ಬಳಿಕ ಜಯಂತ್ ಯಾದವ್ 15 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಶಿಖರ್ ಧವನ್ ವಿಕೆಟ್ ಕಬಳಿಸಿದರು.

ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಜೊತೆಯಾಟದಿಂದ ಡೆಲ್ಲಿ ಕೊಂಚ ಚೇತರಿಸಿಕೊಂಡಿದೆ. ಆದರೆ ಆರಂಭಿಕ ಹಂತದಲ್ಲಿ 3 ವಿಕೆಟ್ ಕಳೆದುಕೊಂಡ ಡೆಲ್ಲಿ ಸಂಕಷ್ಟಕ್ಕೆ ಸಿಲುಕಿದೆ.