ಅಬು ಧಾಬಿ(ಅ.19): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ 36ನೇ ಲೀಗ್ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿಗೆ 200ನೇ ಐಪಿಎಲ್ ಪಂದ್ಯವಾಗಿದೆ. 200ನೇ ಪಂದ್ಯವಾಡುತ್ತಿರುವ ಏಕೈಕ ಹಾಗೂ ಮೊದಲ ಕ್ರಿಕೆಟಿಗ ಧೋನಿ. ಇದೀಗ ಇದೇ ಪಂದ್ಯದಲ್ಲಿ ಧೋನಿ ಮತ್ತೊಂದು ದಾಖಲೆ ಬರೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಧೋನಿ ಇದೀಗ 4000 ರನ್ ಪೂರೈಸಿದ್ದಾರೆ.

IPL ಟೂರ್ನಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಎಂ.ಎಸ್.ಧೋನಿ!...

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಬ್ಯಾಟ್ಸ್‌ಮನ್‌ಗಳೆಲ್ಲಾ ಬಹುಬೇನೆ ಪೆವಿಲಿಯನ್ ಸೇರಿಕೊಂಡರು. ಕಣಕ್ಕಿಳಿದ ಧೋನಿ 6 ರನ್ ಪೂರೈಸುತ್ತಿದ್ದಂತೆ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ನಾಯಕನಾಗಿ 4,000 ರನ್ ಸಿಡಿಸಿದ ಸಾಧನೆ ಮಾಡಿದರು. ಧೋನಿ 28 ರನ್ ಕಾಣಿಕೆ ನೀಡಿದರು. ಈ ಮೂಲಕ ನಾಯಕನಾಗಿ ಧೋನಿ 4,022ರನ್ ಸಿಡಿಸಿದ್ದಾರೆ. ಚೆನ್ನೈ ಪರ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗರ ಪೈಕಿ ಧೋನಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಸುರೇಶ್ ರೈನಾ ಅಲಂಕೃತರಾಗಿದ್ದಾರೆ. ರೈನಾ ಚೆನ್ನೈ ಪರ 4527 ರನ್ ಸಿಡಿಸಿದ್ದಾರೆ.

 

6 ಪಂದ್ಯ ಸೋತಿರುವ ಧೋನಿ ಸೈನ್ಯಕ್ಕೆ ಇನ್ನೂ ಇದೆ ಪ್ಲೇ ಆಫ್ ಸ್ಥಾನಕ್ಕೇರುವ ಅವಕಾಶ!.

ಐಪಿಎಲ್ ಆರಂಭವಾದ 2008ರಿಂದ ಧೋನಿ ಚೆನ್ನೈ ತಂಡದ ನಾಯಕನಾಗಿದ್ದಾರೆ. ಆದರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಕಾರಣ  2016 ಹಾಗೂ 2017ರಲ್ಲಿ ಚೆನ್ನೈ ತಂಡವನ್ನು ಬ್ಯಾನ್ ಮಾಡಲಾಗಿತ್ತು. ಈ ಎರಡು ಆವೃತ್ತಿಗಳಲ್ಲಿ ಧೋನಿ ಪುಣೆ ಸೂಪರ್‌ಜೈಂಟ್ಸ್ ತಂಡದ ಪರ ಆಡಿದ್ದರು. ಧೋನಿ ನಾಯಕತ್ವದಲ್ಲಿ ಚೆನ್ನೈ 3 ಬಾರಿ ಐಪಿಎಲ್ ಟ್ರೋಫಿ ಗೆದ್ದಕೊಂಡಿದೆ.