ಅಬು ಧಾಬಿ(ಅ.19): ಅಂಕಪಟ್ಟಿಯಲ್ಲಿ ಅಂತಿಮ 2 ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಹೋರಾಟಕ್ಕೆ ಅಬು ಧಾಬಿ ಕ್ರೀಡಾಂಗಣ ಸಜ್ಜಾಗಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

"

ಚೆನ್ನೈ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಜೋಶ್ ಹೇಜಲ್‌ವುಡ್ ಹಾಗೂ ಪಿಯೂಷ್ ಚಾವ್ಲಾ ತಂಡ ಸೇರಿಕೊಂಡಿದ್ದಾರೆ. ರಾಜಸ್ಥಾನ ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ. ಜಯದೇವ್ ಉನಾದ್ಕಟ್ ಬದಲು ಅಂಕಿತ್ ರಜಪೂತ್ ತಂಡ ಸೇರಿಕೊಂಡಿದ್ದಾರೆ.

ಚೆನ್ನೈ ಹಾಗೂ ರಾಜಸ್ಥಾನ ತಂಡಗಳು 6 ಪಂದ್ಯಗಳನ್ನು ಸೋತಿದೆ. ಆದರೆ ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಪ್ಲೇ ಆಫ್ ಅವಕಾಶವಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದು ಮಹತ್ವದ ಪಂದ್ಯವಾಗಿದೆ.

ಆಡಿದ 9 ಪಂದ್ಯದಲ್ಲಿ ಕೇವಲ 3 ಗೆಲುವು ದಾಖಲಿಸಿರುವ ಚೆನ್ನೈ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಇತ್ತ ರಾಜಸ್ಥಾನ ರಾಯಲ್ಸ್ ಕೂಡ 3 ಗೆಲುವು ದಾಖಲಿಸಿದೆ. ಆದರೆ ನೆಟ್ ರನ್‌ರೇಟ್‌ನಿಂದ ರಾಜಸ್ಥಾನ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.