IPL 2020 ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಿಗೆ ಕೊರೋನಾ ನೆಗೆಟಿವ್
ಕೊರೋನಾ ಸೋಂಕಿಗೆ ತುತ್ತಾಗಿದ್ದ ಮೂರು ಬಾರಿಯ ಐಪಿಎಲ್ ಚಾಂಪಿಯನ್ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ನಿಟ್ಟುಸಿರು ಬಿಟ್ಟಿದೆ. 13 ಮಂದಿಯ ಟೆಸ್ಟ್ ನೆಗೆಟಿವ್ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದುಬೈ(ಸೆ.05): ಸೋಂಕಿಗೆ ತುತ್ತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರು ಹಾಗೂ 11 ಸಿಬ್ಬಂದಿಗೆ ಸೋಮವಾರ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ.
ಸೆಪ್ಟೆಂಬರ್ 3ರಂದು ಮತ್ತೊಮ್ಮೆ ಪರೀಕ್ಷೆ ನಡೆಯಲಿದೆ. ಸೆ.4ರಿಂದ ಸಿಎಸ್‌ಕೆ ತಂಡ ಅಭ್ಯಾಸ ಶಿಬಿರ ಆರಂಭಿಸುವ ಸಾಧ್ಯತೆಯಿದೆ. ಆದರೆ ದೀಪಕ್ ಚಹರ್ ಹಾಗೂ ಋುತುರಾಜ್ ಗಾಯಕ್ವಾಡ್ ಅವರ ನಿರ್ಬಂಧ ಅವಧಿ ಮುಂದುವರಿಯಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರು ಹಾಗೂ 11 ಸಿಬ್ಬಂದಿ ಸೇರಿದಂತೆ 13 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಸೋಮವಾರ ನಡೆದ ಕೊರೋನಾ ಪರೀಕ್ಷೆಯಲ್ಲಿ ಈ ಎಲ್ಲಾರ ವರದಿ ನೆಗೆಟಿವ್ ಬಂದಿದೆ ಎಂದು ಸಿಇಒ ಕೆಎಸ್ ವಿಶ್ವನಾಥನ್ ಹೇಳಿದ್ದಾರೆ. ಅಭ್ಯಾಸಕ್ಕೂ ಮುನ್ನ ಸೆ.3 ರಂದು ಮತ್ತೊಂದು ಕೊರೋನಾ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ನೆಗೆಟಿವ್ ವರದಿ ಖಾತ್ರಿಪಡಿಸಿಕೊಳ್ಳಬೇಕಿದೆ. ಆ ನಂತರವೇ ಸಿಎಸ್‌ಕೆ ತಂಡದ ಆಟಗಾರರು ಬಯೋ ಸೆಕ್ಯೂರ್ ಬಬಲ್ ಸೇರಿಕೊಳ್ಳಲಿದ್ದಾರೆ.
ಕೊರೋನಾ ಪರೀಕ್ಷೆಗೆ ಬಿಸಿಸಿಐ 10 ಕೋಟಿ
ನವದೆಹಲಿ: ಯುಎಇಯಲ್ಲಿ ಸೆ.19 ರಿಂದ ನ.10 ರವರೆಗೆ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ವೇಳೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 20000 ಕ್ಕೂ ಹೆಚ್ಚು ಕೊರೋನಾ ಪರೀಕ್ಷೆ ನಡೆಸಲು ಯೋಜನೆ ರೂಪಿಸಿದೆ.
ಸುರೇಶ್ ರೈನಾರಿಂದ ತೆರವಾದ ಸ್ಥಾನಕ್ಕೆ ಕರ್ನಾಟಕದ ಆಟಗಾರ ಆಯ್ಕೆ..?
ಐಪಿಎಲ್‌ಗೆ ಸಂಬಂಧಿಸಿದಂತೆ ಭಾರತದಲ್ಲಿ ನಡೆದ ಪರೀಕ್ಷೆಗಳ ಖರ್ಚನ್ನು 8 ಫ್ರಾಂಚೈಸಿಗಳು ನೋಡಿಕೊಂಡಿದ್ದವು. ಆ.20 ರಿಂದ ಬರುವ ಪರೀಕ್ಷಾ ಖರ್ಚನ್ನು ಬಿಸಿಸಿಐ ನೋಡಿಕೊಳ್ಳಲಿದೆ. ಇದಕ್ಕಾಗಿ ಬಿಸಿಸಿಐ .10 ಕೋಟಿ ಬಜೆಟ್ ಹೊಂದಿದೆ ಎಂದು ಐಪಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊರೋನಾ (ರ‍್ಯಾಂಡಮ್ ಟೆಸ್ಟ್-ಪಿಸಿಆರ್ ಟೆಸ್ಟ್) ಪರೀಕ್ಷೆಗಾಗಿ ಬಿಸಿಸಿಐ, ಯುಎಇ ಮೂಲದ ವಿಪಿಎಸ್ ಹೆಲ್ತ್‌ಕೇರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಕಂಪೆನಿ ಪ್ರತಿ ಪರೀಕ್ಷೆಗೆ 200 ಎಇಡಿ, ಅಂದಾಜು 4000 ರು.ಗಳನ್ನು ನಿಗದಿಪಡಿಸಿದೆ.