ಶಾರ್ಜಾ(ಅ.17): ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಹೋರಾಟಕ್ಕೆ ಶಾರ್ಜಾ ಕ್ರಿಕೆಟ್ ಮೈದಾನ ಸಜ್ಜಾಗಿದೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಚೆನ್ನೈ ತಂಡದಲ್ಲಿ 1 ಬದಲಾವಣೆ ಮಾಡಿದೆ. ಪಿಯೂಷ್ ಚಾವ್ಲಾ ಬದಲು ಕೇದಾರ್ ಜಾಧವ್ ತಂಡ ಸೇರಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಿಷಬ್ ಪಂತ್ ಇಂಜುರಿಯಿಂದ ಚೇತರಿಸಿಕೊಂಡಿದ್ದರೂ, ಹೆಚ್ಚಿನ ವಿಶ್ರಾಂತಿ ನೀಡುವ ಕಾರಣದಿಂದ ಇಂದಿನ ಪಂದ್ಯದಿಂದ ಪಂತ್ ಹೊರಗಿಡಲಾಗಿದೆ.

ಸೋಲಿನಿಂದ ಬಸವಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ 20  ರನ್ ಗೆಲುವು ದಾಖಲಿಸಿತ್ತು. ಈ ಮೂಲಕ ಸೋಲಿನ ಸರಮಾಲೆಯಿಂದ ಹೊರಬಂದಿತ್ತು. ಚೆನ್ನೈ ಅಡಿದ 8 ಪಂದ್ಯದಲ್ಲಿ 3 ಗೆಲುವು 5 ಸೋಲು ಕಂಡಿದೆ. ಇತ್ತ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್  6 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.