ದುಬೈ(ನ.10): ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ.

ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬರೋಬ್ಬರಿ 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಐಪಿಎಲ್ ಗೆಲ್ಲುವ ಕನವರಿಕೆಯಲ್ಲಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, 5ನೇ ಐಪಿಎಲ್ ಟ್ರೋಫಿ ಮೇಲೆ ರೋಹಿತ್ ಶರ್ಮಾ ಪಡೆ ಕಣ್ಣಿಟ್ಟಿದೆ.

ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಯಾವ ತಂಡ ಈ ಬಾರಿ ಚಾಂಪಿಯನ್ ಆಗಬಹುದು ಎನ್ನುವ ಚರ್ಚೆ ಜೋರಾಗಿದ್ದು, ಇದೀಗ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ಖ್ಯಾತ ಕ್ರಿಕೆಟ್‌ ವಿಶ್ಲೇಷಕ ಆಕಾಶ್ ಚೋಪ್ರಾ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಚಾಂಪಿಯನ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ ಪಯಣ ಹೇಗಿತ್ತು..?

ಮಾರ್ಕಸ್ ಸ್ಟೋಯ್ನಿಸ್ ಅವರಿಗೆ ಆರಂಭಿಕನಾಗಿ ಭಡ್ತಿ ನೀಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಮತ್ತೋರ್ವ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರೋನ್ ಹೆಟ್ಮೇಯರ್ ಯಾವುದೇ ಒತ್ತಡವಿಲ್ಲದೇ ಬ್ಯಾಟಿಂಗ್ ಮಾಡಲು ಅನುಕೂಲವಾಗಲಿದೆ. ಹೀಗಾದಲ್ಲಿ ಡೆಲ್ಲಿ ದೊಡ್ಡ ಮೊತ್ತ ಕಲೆಹಾಕಲು ಇಲ್ಲವೇ ಚೇಸ್‌ ಮಾಡಲು ಈ ಸ್ಟ್ರಾಟರ್ಜಿ ನೆರವಾಗಲಿದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಶಿಖರ್ ಫೈನಲ್ ಪಂದ್ಯದಲ್ಲಿ ಪ್ರದರ್ಶನ ಸಾಕಷ್ಟು ಮಹತ್ವದ್ದಾಗಿರಲಿದೆ ಎಂದು ಆಕಾಶ್ ಹೇಳಿದ್ದಾರೆ. ಧವನ್ ಯಾವಾಗೆಲ್ಲ ಉತ್ತಮವಾಗಿ ಆಡಿದ್ದಾರೋ ಆಗೆಲ್ಲಾ ಡೆಲ್ಲಿಗೆ ಒಳ್ಳೆಯದ್ದೇ ಆಗಿದೆ. ಇದರ ಜತೆಗೆ ಶ್ರೇಯಸ್ ಅಯ್ಯರ್ ಹಾಗೂ ಮುಂಬೈ ಇಂಡಿಯನ್ಸ್‌ ಫಾರ್ಮ್‌ಗೆ ಮರಳಿದರೆ ಡೆಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ತಿರುಗೇಟು ನೀಡಬಹುದು ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.