ಅಬುದಾಬಿ(ಅ. 14)  ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಹಂತಕ್ಕೆ ಹತ್ತಿರ  ಹೋಗಿ ನಿಂತಿದೆ.  ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ರೋಚಕ 13  ರನ್ ಜಯ ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ  161  ರನ್ ಕಲೆಹಾಕಿತ್ತು.  ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಅರ್ಧ ಶತಕದ ಕೊಡುಗೆ ನೀಡಿದ್ದರು. ಇದಕ್ಕೆ ಉತ್ತರವಾಗಿ ಚೇಸಿಂಗ್ ಇಳಿದ ರಾಜಸ್ಥಾನ ಆರಂಭ ಉತ್ತಮವಾಗಿಯೇ ಇತ್ತು. ಬಟ್ಲರ್ ಮತ್ತು ಸ್ಟೋಕ್ಸ್ ಒಳ್ಳೆಯ ಆರಂಭವನ್ನೇ ನೀಡಿದ್ದರು. 

ಕಟ್ಟಿದ ಮನೆಗೆ ಧೋನಿಯ ಹೆಸರಿಟ್ಟ ಅಭಿಮಾನಿ

ಆದರೆ ಹದಿನೈದು ಓವರ್ ನಂತರ ಪಂದ್ಯದ ಗತಿ ಬದಲಾಯಿತು. ಅತ್ಯುತ್ತಮ ಬೌಲಿಂಗ್ ಸಂಘಟನೆ ಮಾಡಿದ ಡೆಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ರಬಾಡಾ, ನೊರ್ಟಜೆ,  ತುಷಾರ್ ದೇಶಪಾಂಡೆ ಎಸೆದ ಕೊನೆ ಓವರ್‌ ಗಳನ್ನು ರಾಜಸ್ಥಾನ ಎದುರಿಸಲು ವಿಫಲವಾಗಿ ತಲೆಬಾಗಿತು. ರಾಜಸ್ಥಾನದ ನಾಐಕ ಸ್ಟೀವನ್ ಸ್ಮಿತ್  ಕೇವಲ ಒಂದು ರನ್ ಗೆ ವಿಕೆಟ್ ಒಪ್ಪಿಸಿದ್ದು ದೊಡ್ಡ ಹೊಡೆತ ನೀಡಿತು.  ಪದಾರ್ಪಣೆ ಪಂದ್ಯದಲ್ಲಿಯೇ ತುಷಾರ್ ದೇಶಪಾಂಡೆ ಡೆಲ್ಲಿ ಪರ ಮಿಂಚಿದರು.