Asianet Suvarna News Asianet Suvarna News

CSK ವಿರುದ್ಧ RCBನೇ ಗೆಲ್ಲೋದು: ಕಮಲಜ್ಹಿ ಹೇಳಿದ್ಮೇಲೆ ಈ ಸಲ ಕಪ್ ನಮ್ದೆ!

ಐಪಿಎಲ್‌ ಭರಾಟೆ, ಅತ್ತ ಅಭಿಮಾನಿಗಳ ತರಾಟೆ| ಯಾರು ಗೆಲ್ತಾರೆ, ಯಾರು ಸೋಲ್ತಾರೆ? ಫ್ಯಾನ್‌ಸ್ಗಳಿಗೆ ಶುರುವಾಗಿದೆ ಟೆನ್ಶನ್| ಸೋತರೂ ಗೆದ್ದರೂ ನಾವ್ಯವಾತ್ತೂ ಆರ್‌ಸಿಬಿಗರೇ ಎನ್ನುತ್ತಿದ್ದಾರೆ ಕನ್ನಡಿಗರು| ಸಿಎಸ್‌ಕೆ, ಆರ್‌ಸಿಬಿ ಮ್ಯಾಚ್‌ಗೂ ಮುನ್ನ ವೈರಲ್ ಆಯ್ತು ಕಮಲಜ್ಜಿಯ ವಿಡಿಯೋ

CSK Vs RCB Video Right Before The Match Goes Viral pod
Author
Bangalore, First Published Oct 10, 2020, 5:33 PM IST

ಯುಎಇ(ಅ.10): ಈ ಬಾರಿಯ ಐಪಿಎಲ್ ಭಾರೀ ಕುತೂಹಲ ಮೂಡಿಸಿದೆ.ಭಾರತದಲ್ಲಿ ನಡೆಯಬೇಕಿದ್ದ ಪಂದ್ಯ  ಕೊರೋನಾತಂಕದಿಂದ ದುಬೈನಲ್ಲಿ ನಡೆಯುತ್ತಿದೆಯಾದರೂ, ಅಭಿಮಾನಿಗಳ ಉತ್ಸಾಹ ಮಾತ್ರ ಕುಂದಿಲ್ಲ. ಹೀಗಾಗೇ ಈ ಬಾರಿ ಪಂದ್ಯಗಳಿಗೂ ಮುನ್ನ ಫ್ಯಾನ್ಸ್‌ಗಳು ಮಾಡಿದ ಭಿನ್ನ ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತಿವೆ.

ಇನ್ನು ಐಪಿಎಲ್‌ ತಂಡದ ವಿಚಾರದಲ್ಲಿ ಆರ್‌ಸಿಬಿ ಕನ್ನಡಿಗರ ಮೋಸ್ಟ್‌ ಫೇವರಿಟ್ ತಂಡ. ಗೆದ್ದರೂ, ಸೋತರೂ ನಾವ್ಯಾವತ್ತೂ ಆರ್‌ಸಿಬಿ ಅಭಿಮಾನಿಗಳೇ ಅನ್ನೋದು ಬಹುತೇಕ ಎಲ್ಲಾ ಕನ್ನಡಿಗರ ಮಾತು. ಇನ್ನು ಅತ್ತ ಸಿಎಸ್‌ಕೆ ವಿಚಾರ ತೆಗೆದುಕೊಂಡರೆ ಅಭಿಮಾನಕ್ಕೆ ಯಾವುದೇ ಕುಂದು ಕೊರತೆ ಇಲ್ಲ. ವಿಸಿಲ್ ಪೋಡು ಎಂಬ ಮಾತಿನೊಂದಿಗೆ ತಮಿಳುನಾಡಿನ ಬಹುತೇಕ ಮಂದಿ ಧೋನಿ ನೇತೃತ್ವದ ಸಿಎಸ್‌ಕೆಯ ಹಾರ್ಡ್‌ಕೋರ್ ಫ್ಯಾನ್ಸ್. ಹೀಗಿರುವಾಗ ಇಂತಹ ತಂಡಗಳು ಮೈದಾನಕ್ಕಿಳಿದರೆ ಅಭಿಮಾನಿಗಳ ನಡುವೆ ಫೈಟ್ ಇರದಿರರು ಸಾಧ್ಯವೇ?

ಸದ್ಯ ಇಂದು ಶನಿವಾರ ಸಿಎಸ್‌ಕೆ ಹಾಗೂ ಆರ್‌ಸಿಬಿ ತಂಡಗಳು ಮೈದಾನಕ್ಕಿಳಿಯಲಿದ್ದು, ಅಭಿಮಾನಿಗಳು ಫುಲ್‌ ಜೋಶ್‌ನಲ್ಲಿದ್ದಾರೆ. ಅನೇಕ ಮಂದಿ 07.30 ಯಾವಾಗಾಗುತ್ತೋ ಎಂಬ ತವಕದಲ್ಲಿದ್ದಾರೆ. ಇವೆಲ್ಲದರ ನಡುವೆ ಸದ್ಯ ಕಲಾವಿದ ಧನರಾಜ್ ಆಚಾರ್ ಇದೇ ವಿಚಾರವನ್ನಿಟ್ಟುಕೊಂಡು ಮಾಡಿರುವ ವಿಡಿಯೋ ಒಂದು ಸಿಕ್ಕಾಪ್ಟೆ ವೈರಲ್ ಆಗಿದೆ. 

ವಿಡಿಯೋದಲ್ಲಿ ಇವತ್ತಿನ ಪಂದ್ಯ ಸಿಎಸ್‌ಕೆ ಗೆಲ್ಲಲಿದೆ ಎಂದು ಒಂದು ತಂಡ ವಾದಿಸಿದರೆ, ಮತ್ತೊಂದು ತಂಡ ಆರ್‌ಸಿಬಿ ಎಂದು ವಾದಿಸುತ್ತದೆ. ಆದರೆ ಅಷ್ಟರಲ್ಲೇ ಈ ಸೀನ್‌ಗೆ ಎಂಟ್ರಿ ಕೊಡುವ ಕಮಲಜ್ಜಿ 'ಈ ಸಲ ಕಪ್‌ ನಮ್ದೆ' ಎನ್ನುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೇ ಕಮಲಜ್ಜಿ ಆರ್‌ಬಿ ಅಭಿಮಾನಿಗಳ ಹೃದಯವನ್ನೂ ಗೆದ್ದಿದ್ದಾರೆ.

ಬಂಟ್ವಾಳ ಯುವಕನ ಟಿಕ್ ಟಾಕ್ ಕೊರೋನಾ ಜಾಗೃತಿ ಅದ್ಭುತ

ಅಭಿಮಾನಿಗಳ ನಡುವಿನ ಈ ಫೈಟ್ ಇಂದು ನಿನ್ನೆಯದಲ್ಲ, ಪ್ರತಿ ಬಾಯಿ ಐಪಿಎಲ್‌ ಸೀಜನ್ ವೇಳೆ ಆರಂಭವಾಗುವ ಅಭಿಮಾನಿಗಳ ನಡುವಿನ ಕೋಳಿ ಜಗಳ ಐಪಿಎಲ್ ಮುಗಿಯುತ್ತಿದ್ದಂತೆಯೇ ಸರಿಯಾಗುತ್ತದೆ. ಚಡ್ಡಿ ದೋಸ್ತ್‌ಗಳು ಎನ್ನುವವರೂ ತಮ್ಮ ಫೇವರಿಟ್‌ ತಂಡದಿಂದಾಗಿ ಶತ್ರುಗಳಂತಿರುತ್ತಾರೆ, ಆದರೆ ಯಾವತ್ತಿನಂತೆ ಐಪಿಎಲ್ ಮುಗಿಯುತ್ತಿದ್ದಂತೆಯೇ ಮತ್ತೆ ಯೇ ದೋಸ್ತಿ ಹಮ್ ನಹೀಂ ಛೋಡೇಂಗೆ ಎಂದು ಮತ್ತೆ ಒಂದಾಗುತ್ತಾರೆ.

ಧನರಾಜ್ ಚಮತ್ಕಾರ  ಇದೇ ಮೊದಲಲ್ಲ:

ಪತ್ರಿಕೋದ್ಯಮದ ಪದವಿ ಪೂರೈಸಿರುವ ಧನರಾಜ್ ಮೈಸೂರು ರಂಗಾಯಣದಲ್ಲಿ ಎರಡು ವರ್ಷ ರಂಗಪಾಠವನ್ನೂ ಕರಗತ ಮಾಡಿಕೊಂಡವರು. ಖಾಸಗಿ ವಾಹಿನಿಯಲ್ಲಿ  ಉದ್ಯೋಗಿಯಾಗಿರುವ ಇವರು, ತನ್ನಬೆಂಗಳೂರು ಸ್ನೇಹಿತರ ಜೊತೆ ಸೇರಿ ಈಗಾಗಲೇ ಅನೇಕ ಜಾಗೃತಿ ವಿಡಿಯೋಗಳನ್ನು ಮಾಡಿ ಗಮನ ಸೆಳೆದವರು. ಈವರೆಗೆ 188ಕ್ಕೂ ಅಧಿಕ ಟಿಕ್ ಟಾಕ್ ವಿಡಿಯೋ ನಿರ್ಮಿಸಿದ್ದಾರೆ.

ಪಂಪ್ವೆಲ್‌ ಫ್ಲೈಓವರ್ ಕುರಿತಾಗಿ ಇವರು ನಿರ್ಮಿಸಿದ‌ ಟಿಕ್ ಟಾಕ್ ಸಾಮಾಜಿಕ ಜಾಲತಾಣಗಳಲ್ಲಿ  ವಿಶೇಷ ಮನ್ನಣೆಗೆ ಪಾತ್ರವಾಗಿತ್ತು, ಅಲ್ಲದೆ ಬಳಿಕ ಉಳ್ಳಾಲದ ಒಂಭತ್ತು ಎಕ್ರೆ ಮನೆಗಳು, ಸುಳ್ಯದ ಕರೆಂಟ್ ಸಮಸ್ಯೆ ಕುರಿತಾದ ಟಿಕ್ ಟಾಕ್‌ ದೃಶ್ಯಾವಳಿಗಳು ಆಡಳಿತ ವ್ಯವಸ್ಥೆ ಗೆ ಚುರುಕುಮುಟ್ಟಿಸಿತ್ತು. ಹೀಗೆ ಸಾಮಾಜಿಕ ಸಮಸ್ಯೆಗಳಿಗೆ ಟಿಕ್‌ಟಾಕ್‌ ಮೂಲಕವೂ ಬಿಸಿಮುಟ್ಟಿಸಲು ಸಾಧ್ಯ ಎನ್ನುವುದನ್ನು ಧನರಾಜ್ ಸಾಧಿಸಿ ತೋರಿಸುತ್ತಿದ್ದಾರೆ. ಅವರ ಎಲ್ಲಾ ಪ್ರಯತ್ನಗಳಿಗೆ ಆಲ್ ದಿ ಬೆಸ್ಟ್ ಎನ್ನೋಣ..

Follow Us:
Download App:
  • android
  • ios