ಅಬು ಧಾಬಿ(ಅ.18) ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಪಂದ್ಯದಲ್ಲಿ ಕೆಕೆಆರ್ ಸೂಪರ್ ಓವರ್ ಮೂಲಕ ಗೆಲುವು ಸಾಧಿಸಿದೆ. ಕೆಕೆಆರ್ 163 ರನ್ ಸಿಡಿಸಿತ್ತು. ಇತ್ತ ಸನ್‌ರೈಸರ್ಸ್ ಹೈದರಾಬಾದ್ ಕೂಡ 163 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು. ಹೀಗಾಗಿ ಸೂಪರ್ ಓವರ್ ಮೂಲಕ ಗೆಲುವಿ ಸಿಹಿ ಕಂಡಿತು. ಕೆಕೆಆರ್ ಗೆಲುವಿಗೆ ಪ್ರಮುಖ ಕಾರಣ ಲ್ಯೂಕಿ ಫರ್ಗ್ಯೂಸನ್ ಎಸೆದ ಸೂಪರ್ ಓವರ್.  ಡೇವಿಡ್ ವಾರ್ನರ್ , ಅಬ್ದುಲ್ ಸಮಾದ್ ವಿಕೆಟ್ ಕಬಳಿಸಿದ ಫರ್ಗ್ಯೂಸನ್ ನೀಡಿದ್ದು ಕೇವಲ 2 ರನ್ ಮಾತ್ರ.

3 ರನ್ ಗುರಿಯನ್ನು ಕೆಕೆಆರ್ ಚೇಸ್ ಮಾಡಿತು. ಅದ್ಬುತ ಸೂಪರ್ ಓವರ್ ಇದೀಗ ಕ್ರಿಕೆಟ್ ದಿಗ್ಗಜರನ್ನೇ ಮೆಚ್ಚಿಸಿದೆ. ಡೆತ್ ಓವರ್ ಬೌಲಿಂಗ್ ಮಾಡಲು ಫರ್ಗ್ಯೂಸನ್ ಸೂಕ್ತ ಎಂಬ ಮಾತುಗಳು ಕೇಳಿ ಬಂದಿದೆ.