Asianet Suvarna News Asianet Suvarna News

ಐಪಿಎಲ್ 2020: ಶಾರ್ಜಾ ಸ್ಟೇಡಿಯಂಗೆ ಸೌರವ್ ಗಂಗೂಲಿ ಭೇಟಿ, ಪರಿಶೀಲನೆ

13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಯಾವ ರೀತಿಯ ಸಿದ್ದತೆ ನಡೆಸಲಾಗಿದೆ ಎನ್ನುವುದನ್ನು ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಶಾರ್ಜಾ ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

BCCI President Sourav Ganguly inspects Sharjah stadium ahead of IPL 2020 kvn
Author
Dubai - United Arab Emirates, First Published Sep 16, 2020, 8:18 AM IST
  • Facebook
  • Twitter
  • Whatsapp

ದುಬೈ(ಸೆ.16): ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಯುಎಇಯಲ್ಲಿ ಸಾಂಸ್ಥಿಕ ಕ್ವಾರೈಂಟನ್‌ ಅವಧಿ ಮುಗಿಸಿದ್ದಾರೆ. ಮಂಗಳವಾರ ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು. 

ಸೆಪ್ಟೆಂಬರ್19 ರಿಂದ ಇಲ್ಲಿನ 3 ಕ್ರೀಡಾಂಗಣಗಳಲ್ಲಿ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿ ನಡೆಯಲಿದೆ. ಹೀಗಾಗಿ ಗಂಗೂಲಿ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಂದ್ಯಗಳ ಆಯೋಜನೆ ಕುರಿತು ಗಂಗೂಲಿ ಮಾಹಿತಿ ಪಡೆದಿದ್ದಾರೆ. 

 
 
 
 
 
 
 
 
 
 
 
 
 

Famous Sharjah stadium all set to host IPL 2020

A post shared by SOURAV GANGULY (@souravganguly) on Sep 14, 2020 at 9:57am PDT

ಐಪಿಎಲ್ 2020: ಈ 4 ತಂಡಗಳಲ್ಲಿದ್ದಾರೆ ಸೂಪರ್ ಓವರ್ ಗೆಲ್ಲಿಸಬಲ್ಲ ಸ್ಫೋಟಕ ಬ್ಯಾಟ್ಸ್‌ಮನ್‌ಗಳು..!

ಶಾರ್ಜಾ ಕ್ರೀಡಾಂಗಣದಲ್ಲಿ 12 ಪಂದ್ಯಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಗಂಗೂಲಿ, ದುಬೈ ಹಾಗೂ ಅಬುದಾಬಿಗೆ ಭೇಟಿ ನೀಡಲಿದ್ದು ಸಿದ್ಧತೆಗಳ ಬಗ್ಗೆ ಪರಿಶೀಲಿಸಲಿದ್ದಾರೆ.

ಐಪಿಎಲ್‌ ಆಟಗಾರರ ಸಾಂಸ್ಥಿಕ ಕ್ವಾರಂಟೈನ್‌ ಅವಧಿ 6 ದಿನಗಳಿಗೆ ಕಡಿತ

ನವದೆಹಲಿ: ಆಸ್ಪ್ರೇಲಿಯಾ ಮತ್ತು ಇಂಗ್ಲೆಂಡ್‌ ಆಟಗಾರರ ಮನವಿ ಮೇರೆಗೆ ಐಪಿಎಲ್‌ನಲ್ಲಿ ಆಡಲು ಯುಎಇಗೆ ಆಗಮಿಸುವ ಆಟಗಾರರ ಕ್ವಾರಂಟೈನ್‌ ಅವಧಿಯನ್ನು ಬಿಸಿಸಿಐ 6 ದಿನಕ್ಕೆ ಕಡಿತಗೊಳಿಸಿದೆ. 

ಯುಎಇಗೆ ಆಗಮಿಸಿದ ಬಳಿಕ 9 ದಿನ ಕ್ವಾರಂಟೈನ್‌ ಆಗಬೇಕೆಂದು ನಿಯಮ ಜಾರಿಗೊಳಿಸಿತ್ತು. ಆದರೆ ಇದರಿಂದ ಆಸ್ಪ್ರೇಲಿಯಾ ಮತ್ತು ಇಂಗ್ಲೆಂಡ್‌ನ ಪ್ರಮುಖ ಆಟಗಾರರೇ ಆರಂಭಿಕ ಪಂದ್ಯಗಳಿಂದ ದೂರ ಉಳಿಯಬೇಕಾಗಿ ಬರುತ್ತದೆನ್ನುವ ಕಾರಣಕ್ಕಾಗಿ ಕಡಿತಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. 

ಏಕದಿನ ಸರಣಿ ಆಡುತ್ತಿರುವ ಇಂಗ್ಲೆಂಡ್‌ ಮತ್ತು ಆಸ್ಪ್ರೇಲಿಯಾದ 21 ಮಂದಿ ಆಟಗಾರರು ಮ್ಯಾಂಚೆಸ್ಟರ್‌ನಿಂದ ದುಬೈಗೆ ಸೆ.17ರಂದು ಆಗಮಿಸುತ್ತಿದ್ದು, ಈ ಎಲ್ಲಾ ಆಟಗಾರರು ಸೆ.23ರ ಬಳಿಕವೇ ಐಪಿಎಲ್‌ ಪಂದ್ಯಗಳಲ್ಲಿ ಆಡಬೇಕಿದೆ. ಸೆ.19ರಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ.
 

Follow Us:
Download App:
  • android
  • ios