‘ಮನೆಯ ಜವಾಬ್ದಾರಿಗಳನ್ನೇ ನಿರ್ವಹಿಸಲಾಗದವರು ದೇಶವನ್ನು ಹೇಗೆ ನಿರ್ವಹಿಸುತ್ತಾರೆ?,’ ಎನ್ನುವ ಮೂಲಕ ಮತ್ತೊಮ್ಮೆ ನಿತೀಶ್ ಗಡ್ಕರಿ ಬಿಜೆಪಿಗೆ ತಿವಿದಿದ್ದಾರೆ.
ನಾಗ್ಪುರ[ಫೆ.04]: ‘ಮನೆಯ ಜವಾಬ್ದಾರಿಗಳನ್ನೇ ನಿರ್ವಹಿಸಲಾಗದವರು ದೇಶವನ್ನು ಹೇಗೆ ನಿರ್ವಹಿಸುತ್ತಾರೆ?,’ ಹೀಗೆಂದು ಬಿಜೆಪಿ ಕಾರ್ಯಕರ್ತರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿವಿಮಾತು ಹೇಳಿದ್ದಾರೆ. ಈ ಮೂಲಕ ಅವರ ಇತ್ತೀಚಿನ ಗೂಢಾರ್ಥದ ಮಾತುಗಳಿಗೆ ಇದೂ ಒಂದು ಸೇರಿಕೊಂಡಿದೆ.
ಬಿಜೆಪಿಯ ವಿದ್ಯಾರ್ಥಿ ಘಟಕವಾದ ಎಬಿವಿಪಿ ಮಾಜಿ ಕಾರ್ಯಕರ್ತರನ್ನುದ್ದೇಶಿಸಿ ಭಾನುವಾರ ಮಾತನಾಡಿದ ಅವರು, ‘ನಾನು ಭೇಟಿ ಮಾಡುವ ಹಲವರು ತಾವು, ಬಿಜೆಪಿ ಮತ್ತು ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಡಬೇಕು ಎನ್ನುತ್ತಾರೆ. ಅವರಿಗೆ ನಿಮ್ಮ ಕುಟುಂಬಕ್ಕಾಗಿ ನೀವೇನು ಮಾಡಿದ್ದೀರಿ ಮೊದಲು ಹೇಳಿ ಎಂಬುದಾಗಿ ಕೇಳುತ್ತೇನೆ. ಅವರಲ್ಲಿ ನಮ್ಮ ಮನೆಯಲ್ಲಿ ಆ ಸಮಸ್ಯೆ ಇದೆ, ಈ ಸಮಸ್ಯೆ ಇದೆ ಎನ್ನುತ್ತಾರೆ. ಅಂಥವರಿಗೆ ನಾನು ಮೊದಲು ನಿಮ್ಮ ಕುಟುಂಬವನ್ನು ಸರಿಯಾಗಿ ನಿರ್ವಹಿಸಿ ಎಂದು ಸೂಚಿಸುತ್ತೇನೆ’ ಎಂದರು.
