Asianet Suvarna News Asianet Suvarna News

ವಾಜಪೇಯಿ ಸೊಸೆ ಕಾಂಗ್ರೆಸ್ ನಿಂದ ಸ್ಪರ್ಧೆ

ಬಿಜೆಪಿ ಮುಖಂಡ ಹಾಗೂ ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ಧ ವಾಜಪೇಯಿ ಅವರ ಸೊಸೆ ಕರುಣಾ ಶುಕ್ಲಾ ಕಾಂಗ್ರೆಸ್ ನಿಂದ ಕಣಕ್ಕೆ ಇಳಿಯುತ್ತಿದ್ದಾರೆ. 

Congress fields Vajpayees niece Karuna Shukla
Author
Bengaluru, First Published Oct 23, 2018, 10:55 AM IST
  • Facebook
  • Twitter
  • Whatsapp

ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆರಂಗೇರುತ್ತಿದ್ದು, ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆಕರುಣಾ ಶುಕ್ಲಾಗೆ ಕಾಂಗ್ರೆಸ್ ಟಿಕೆಟ್ ಲಭಿಸಿದೆ. 

ವಿಶೇಷವೆಂದರೆ ಅವರು ಬಿಜೆಪಿ ಮುಖಂಡ, ಸಿಎಂ ರಮಣ್ ಸಿಂಗ್ ವಿರುದ್ಧ ರಾಜ ನಂದಗಾಂವ್ ಕ್ಷೇತ್ರದಿಂದ ಕಣಕ್ಕಿಳಿ ಯಲಿದ್ದಾರೆ. ಹೀಗಾಗಿ ಕಣ ರಂಗೇರುವ ಸಾಧ್ಯತೆ ಇದೆ.

ಈಗಾಗಲೇ ಐದು ರಾಜ್ಯಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಗೆಲುವಿಗಾಗಿ ವಿವಿಧ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ನಡೆಯುತ್ತಿರುವ ಈ ಚುನಾವಣೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. 

Follow Us:
Download App:
  • android
  • ios