ರೈಲು ಪ್ರಯಾಣದಲ್ಲಿ ಇನ್ನು ಊಟ-ತಿಂಡಿ ತಲೆ ಬಿಸಿ ಇಲ್ಲ; ಕುಳಿತಲ್ಲಿಗೆ ಜೊಮ್ಯಾಟೋ ಡೆಲಿವರಿ!
ರೈಲು ಪ್ರಯಾಣದ ವೇಳೆ ಊಟ, ತಿಂಡಿ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಕಾರಣ ಜೋಮ್ಯಾಟೋ ಇದೀಗ ನೀವು ಕುಳಿತಲ್ಲಿಗೆ ಡೆಲಿವರಿ ಮಾಡಲಿದೆ. ಇದರೊಂದಿಗೆ ರೈಲು ಪ್ರಯಾಣಿಕರು ಸುಲಭವಾಗಿ ಹಾಗೂ ಅಷ್ಟೇ ವೇಗದಲ್ಲಿ ಆಹಾರ ಆರ್ಡರ್ ಮಾಡಬಹುದು.
ದೆಹಲಿ(ಸೆ.13) ರೈಲು ಪ್ರಯಾಣದ ವೇಳೆ ಪ್ರಮುಖವಾಗಿ ಆಹಾರದ್ದೇ ಸಮಸ್ಯೆ. ರೈಲಿನಲ್ಲಿ ಮಾರಾಟ ಮಾಡುತ್ತಾ ಬರವು ಆಹಾರ ಖರೀದಿಸಿ ಸಂಕಷ್ಟಕ್ಕೆ ಸಿಲುಕುವುದು ಬೇಡ ಎಂದೇ ನಿರ್ಧರಿಸುತ್ತಾರೆ. ಪ್ರಯಾಣದ ವೇಳೆ ಆಹಾರ ಸಿಗದೆ ಪರದಾಡಿದವರೂ ಇದ್ದಾರೆ. ಇದೀಗ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದೆ. ಇದೀಗ ಬಿಸಿ ಬಿಸಿಯಾದ ಊಟ ತಿಂಡಿ ಇದೀಗ ರೈಲಿನ ಕೋಚ್ ಒಳಗೆ ಕುಳಿತಲ್ಲಿಗೆ ಡೆಲಿವರಿ ಆಗಲಿದೆ. ಹೌದು, ಜೋಮ್ಯಾಟೋ ಇದೀಗ ರೈಲು ಪ್ರಯಾಣಿಕರಿಗೆ ಫುಡ್ ಡೆಲಿವರಿ ಆರಂಭಿಸಿದೆ.
ಭಾರತೀಯ ರೈಲ್ವೇ ಇಲಾಖೆಯೊಂದಿಗೆ ಜೊಮ್ಯಾಟೋ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಬರೋಬ್ಬರಿ 100ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಜೋಮ್ಯಾಟೋ ಆಹಾರ ಸೇವೆ ಒದಗಿಸಲಿದೆ. ರೈಲು ಪ್ರಯಾಣದ ವೇಳೆ ಆರ್ಡರ್ ಮಾಡಿದರೆ ಸಾಕು, ನಿಲ್ದಾಣದಲ್ಲಿ ನಿಮಗೆ ಡೆಲಿವರಿ ಆಗಲಿದೆ. ಈಗಾಗಲೇ ಜೊಮ್ಯಾಟೋ ಬರೋಬ್ಬರಿ 10 ಲಕ್ಷ ಆರ್ಡರ್‌ಗಳನ್ನು ರೈಲಿನಲ್ಲಿ ಡೆಲಿವರಿ ಮಾಡಿದ ಸಾಧನೆ ಮಾಡಿದೆ.
ಮನ ಕಲುಕಿದ ಡೆಲಿವರಿ ಬಾಯ್ ಪರಿಸ್ಥಿತಿ: 2 ವರ್ಷದ ಮಗಳ ಕೂರಿಸಿಕೊಂಡೆ ಎಲ್ಲೆಡೆ ಡೆಲವರಿ!
ರೈಲು ಪ್ರಯಾಣಿಕರಿಗೆ ಡೆಲಿವರಿ ಕುರಿತು ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಸಂತಸ ಹಂಚಿಕೊಂಡಿದ್ದಾರೆ. ಇದೀಗ ಜೊಮ್ಯಾಟೋ ರೈಲು ಕೋಚ್‌ಗಳಿಗೆ, ಪ್ರಯಾಣಿಕರು ಕುಳಿತ ಸೀಟಿಗೆ ಆಹಾರ ಡೆಲಿವರಿ ಮಾಡಲಿದೆ. ಇದಕ್ಕಾಗಿ ರೈಲು ಇಲಾಖೆ ಜೊತೆಗಿನ ಯಶಸ್ವಿ ಡೀಲ್ ಕಾರಣವಾಗಿದೆ. 10 ಲಕ್ಷ ಆರ್ಡರ್ ರೈಲಿನಲ್ಲಿ ಡೆಲಿವರಿ ಮಾಡಿದ್ದೇವೆ. ಮುಂದಿನ ಪ್ರಯಾಣದಲ್ಲಿ ನೀವು ಪ್ರಯತ್ನಿಸಿ ಎಂದು ದೀಪಿಂದರ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ಜೋಮ್ಯಾಟೋ ಹೊಸ ನಡೆಗೆ ಹಲವರು ಪ್ರಶಂಸಿದ್ದಾರೆ. ರೈಲಿನಲ್ಲಿ ಆಹಾರಗಳದ್ದೇ ದೊಡ್ಡ ಸಮಸ್ಯೆ. ಇದೀಗ ನಮಗಿಷ್ಟ ಬಂದ ಆಹಾರ ಆರ್ಡರ್ ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ. ಇದೇ ವೇಳೆ ಹಲವರು ರೈಲು ಹೆಚ್ಚಿನ ಸಂದರ್ಭದಲ್ಲಿ ತಡವಾಗಿ ನಿಲ್ದಾಣಕ್ಕೆ ಆಗಮಿಸುತ್ತದೆ. ಈ ವೇಳೆ ಡೆಲಿವರಿ ಬಾಯ್ ಕಾಯಬೇಕಾದ ಪರಿಸ್ಥಿತಿ ಇದೆ. ಇದರ ಜೊತೆಗೆ ಹಲವು ಸವಾಲುಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೊಮ್ಯಾಟೋ ಇತ್ತೀಚೆಗ ತನ್ನ ವ್ಯವಹಾರ ಹಾಗೂ ವಹಿವಾಟು ವಿಸ್ತರಿಸುತ್ತಿದೆ. ಇದೀಗ ಫುಡ್ ಡೆಲಿವರಿಯನ್ನು ರೈಲು ಕೋಚ್‌ಗಳಿಗೆ ತಲುಪಿಸಿದೆ. ಇದಕ್ಕೂ ಮುನ್ನ ಜೊಮ್ಯಾಟೋ ಪೇಟಿಎಂ ಸಂಸ್ಥೆಯ ಟಿಕೆಟ್ ಬ್ಯೂಸಿನೆಸ್ ವೆಂಚರ್ ಖರೀದಿ ಮಾಡಿತ್ತು. ಬರೋಬ್ಬರಿ 2,048 ಕೋಟಿ ರೂಪಾಯಿಗೆ ಮನೋರಂಜನಾ ಟಿಕೆಟ್ ಉದ್ಯಮ ಖರೀದಿಸಿತ್ತು.
ಜಲಾವೃತ ಸ್ಥಳದಲ್ಲಿ ಪ್ರಾಣ ಪಣಕ್ಕಿಟ್ಟು ಪಾರ್ಸೆಲ್ ತಲುಪಿಸಿದ ಡೆಲವರಿ ಬಾಯ್, ಮನಗೆದ್ದ ದೃಶ್ಯ ಸೆರೆ!
ಇತ್ತ ಜೊಮ್ಯಾಟೋ ಫುಡ್ ಡೆಲಿವರಿ ಬಾಯ್‌ಗಳ ಹೃದಯಸ್ಪರ್ಶಿ ನಡೆಗಳಿಂದ ಭಾರಿ ಸದ್ದು ಮಾಡಿದೆ. 2 ವರ್ಷಗಳ ಮಗಳನ್ನು ಕೂರಿಸಿಕೊಂಡು ಡೆಲಿವರಿ ಮಾಡುತ್ತಿದ್ದ ಎಜೆಂಟ್, ಸೈಕಲ್‌ನಲ್ಲಿ ಫುಡ್ ಡೆಲಿವರಿಯಿಂದ ತಡವಾದ ಡೆಲಿವರಿ ಬಾಯ್‌ಗೆ ಗ್ರಾಹಕನ ಅಚ್ಚರಿ ಉಡುಗೊರೆ ಸೇರಿದಂತೆ ಹಲವು ಕಾರಣಗಳಿಂದ ಜೊಮ್ಯಾಟೋ ಸದಾ ಸುದ್ದಿಯಲ್ಲಿದೆ.