ಟ್ರಾಫಿಕ್ ಮಧ್ಯೆ ಯುಪಿಎಸ್ಸಿ ಪರೀಕ್ಷೆಗೆ ತಯಾರಾಗ್ತಿರೋ ಜೊಮ್ಯಾಟೋ ಡೆಲಿವರಿ ಬಾಯ್; ಬಡವರ್ ಮಕ್ಳು ಬೆಳೀಬೇಕು ಗುರೂ..
ಆಹಾರ ಡೆಲಿವರಿ ಮಾಡುವ ಕೆಲಸದ ಮಧ್ಯೆ ಸಿಗ್ನಲ್‌ನಲ್ಲಿ ನಿಂತಾಗ ಯುಪಿಎಸ್ಸಿ ಪರೀಕ್ಷೆಗೆ ರೆಡಿಯಾಗ್ತಿರುವ ಜೊಮ್ಯಾಟೋ ಡೆಲಿವರಿ ಹುಡುಗನ ವಿಡಿಯೋವೊಂದು ವೈರಲ್ ಆಗಿದೆ..
ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದಾಗ ಸಾಮಾನ್ಯವಾಗಿ ಜನರು ಏನು ಮಾಡುತ್ತಾರೆ? ಫೋನ್‌ನಲ್ಲಿ ಮೆಸೇಜ್ ಚೆಕ್ ಮಾಡ್ತಾರೆ, ಕಾಲ್ ಮಾಡ್ತಾರೆ, ಸುತ್ತಮುತ್ತ ನೋಡ್ತಾರೆ, ಟೈಂ ವೇಸ್ಟ್ ಅಂತ ಸಿಡಿಸಿಡಿ ಅಂತಿರ್ತಾರೆ. ಆದೆರೆ, ಈ ವ್ಯಕ್ತಿ ಮಾಡುತ್ತಿರುವ ಕೆಲಸ ನೋಡಿ..
ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಜೊಮಾಟೊ ಡೆಲಿವರಿ ಏಜೆಂಟ್ ಯುನೈಟೆಡ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಉಪನ್ಯಾಸಗಳನ್ನು ವೀಕ್ಷಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಬಳಕೆದಾರ ಆಯುಷ್ ಸಂಘಿ ಅವರು ಮಾರ್ಚ್ 29 ರಂದು X ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್‌ನಲ್ಲಿ, ಗದ್ದಲದ ಟ್ರಾಫಿಕ್ ಜಾಮ್ ನಡುವೆ ಕೂಡಾ Zomato ಡೆಲಿವರಿ ಎಕ್ಸಿಕ್ಯೂಟಿವ್ ಓರ್ವ ತನ್ನ UPSC ಪಾಠಗಳನ್ನು ಆಲಿಸುವಲ್ಲಿ ಮುಳುಗಿದ್ದಾನೆ. ಕರ್ತವ್ಯದಲ್ಲಿರುವಾಗಲೂ ಸಹ ಸ್ವಯಂ-ಸುಧಾರಣೆಗಾಗಿ ಸವಾರನ ಸಮರ್ಪಣೆಯನ್ನು ವೀಡಿಯೊ ತೋರಿಸುತ್ತದೆ. ಕೆಲಸ ಮಾಡಿಕೊಂಡಿದ್ದರೂ ಆತನೊಳಗಿರುವ ದೊಡ್ಡ ಕನಸುಗಳಿಗಾಗಿ ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.
ಹೇರ್ ಸ್ಟ್ರೈಟನಿಂಗ್ ಮಾಡಿಸಿದ ಮಹಿಳೆಯ ಕಿಡ್ನಿಗೆ ಹಾನಿ, ಮೂತ್ರದಲ್ಲಿ ರಕ್ತ!
'ಈ ವೀಡಿಯೊವನ್ನು ನೋಡಿದ ನಂತರ, ನೀವು ಕಷ್ಟಪಟ್ಟು ಅಧ್ಯಯನ ಮಾಡಲು ಬೇರೆ ಯಾವುದೇ ಪ್ರೇರಣೆಗೆ ತಡಕಾಡಬೇಕಿಲ್ಲ' ಎಂದು ಸಂಘಿ ಪೋಸ್ಟ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಹಂಚಿಕೊಂಡ ನಂತರ, ವೀಡಿಯೊ 62,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 1,500 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ.
ಕಾಮೆಂಟ್‌ಗಳಲ್ಲಿ, ಕೆಲವು ಬಳಕೆದಾರರು ವೀಡಿಯೊವನ್ನು 'ಸ್ಫೂರ್ತಿದಾಯಕ' ಎಂದು ಕಂಡುಕೊಂಡರೆ, ಇತರರು ಬಿಡುವಿಲ್ಲದ ರಸ್ತೆಗಳಲ್ಲಿ ನ್ಯಾವಿಗೇಟ್ ಮಾಡುವಾಗ ಈ ರೀತಿ ಬೇರೆಡೆ ಗಮನ ಹಾಕುವುದರಿಂದ ಎದುರಾಗುವ ಸಂಭವನೀಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Bengaluru: ಬನ್ನೇರುಘಟ್ಟ ರಸ್ತೆ 2 ಜಂಕ್ಷನ್‌ಗಳಲ್ಲಿ ಒಂದು ವರ್ಷ ವಾಹನ ಸಂಚಾರ ನಿಷೇಧಿಸಿದ ಬಿಎಂಆರ್‌ಸಿಎಲ್
ಆದರೆ, ಬಹಳಷ್ಟು ಜನರು ಈ ಜೊಮ್ಯಾಟೋ ಹುಡುಗ ಯುಪಿಎಸ್ಸಿ ಪಾಸಾಗಲೇಬೇಕು. ಬಡವರ್ ಮಕ್ಳು ಬೆಳೀಬೇಕು ಗುರೂ.. ಅಂತಿದಾರೆ.
ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, 'ಮಾರ್ಗವು ಕಠಿಣವಾಗಿರಬಹುದು, ಆದರೆ ಪ್ರತಿಫಲ - ಅಮೂಲ್ಯವಾಗಿರಲಿದೆ' ಎಂದಿದ್ದಾರೆ. 'ಈ ವೀಡಿಯೋ ತುಂಬಾ ಸ್ಪೂರ್ತಿದಾಯಕವಾಗಿದೆ, ಇದು ಹಿಂದೆಂದಿಗಿಂತಲೂ ಹೆಚ್ಚು ಶ್ರಮ ವಹಿಸುವಂತೆ ಪ್ರೇರೇಪಿಸುತ್ತದೆ' ಎಂದು ಮತ್ತೊಬ್ಬರು ಬರೆದಿದ್ದಾರೆ.