ಪೊಲೀಸ್ ಬೂಟ್ ಕ್ಲೀನ್ ಮಾಡಿ, ಕಿಸ್ ಕೊಟ್ಟ ಸಂಸದ!| ಟಿಡಿಪಿ ನಾಯಕ ದಿವಾಕರ್ ರೆಡ್ಡಿಗೆ ತಿರುಗೇಟು ನೀಡಲು ಈ ನಡೆ
ಅಮರಾವತಿ[ಡಿ.21]: ಜನಪ್ರತಿನಿಧಿಯೋರ್ವ ಪೊಲೀಸರ ಬೂಟು ಸ್ವಚ್ಛ ಮಾಡುವುದನ್ನು ಊಹಿಸಿಕೊಳ್ಳುವುದಾದರೂ ಸಾಧ್ಯವೇ?
ಆದರೆ, ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಸಂಸದ ಗೋರಂಟ್ಲ ಮಾಧವ್ ಅವರು ಶುಕ್ರವಾರ ಕರ್ತವ್ಯ ನಿರ್ವಹಣೆ ವೇಳೆ ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿಯ ಬೂಟ್ ಕ್ಲೀನ್ ಮಾಡಿ ಅದಕ್ಕೆ ಕಿಸ್ ಕೊಟ್ಟ ಅಪರೂಪದ ಘಟನೆ ನಡೆದಿದೆ.
ಆಂಧ್ರದಲ್ಲಿ ತಾವು ಅಧಿಕಾರಕ್ಕೆ ಮರಳಿದರೆ, ಪೊಲೀಸರಿಂದ ನನ್ನ ಬೂಟ್ ನೆಕ್ಕಿಸುತ್ತೇನೆ ಎಂದು ಟಿಡಿಪಿ ನಾಯಕ ದಿವಾಕರ್ ರೆಡ್ಡಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಲು ಗೋರಂಟ್ಲ ಬೂಟ್‌ಗೆ ಕಿಸ್ ಮಾಡಿ ಗಮನಸೆಳೆದಿದ್ದಾರೆ!. ಇಂಥವರಿಗೆ ಬುದ್ಧಿ ಕಲಿಸಲು ಪೊಲೀಸ್ ಇಲಾಖೆಗೆ ಸೇರಲು ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ ಗೋರಂಟ್ಲ ಮಾಧವ್.
