ಬೇಕಾಬಿಟ್ಟಿ ಪಬ್‌, ಬೀಚ್‌ ಸುತ್ತಾಟ: ಮೈಮರೆತ ಯುವಜನರಿಂದ ಕೊರೋನಾ ಎರಡನೇ ಅಲೆ!

ಮೈಮರೆತ ಯುವಜನರಿಂದ ಕೊರೋನಾ ಎರಡನೇ ಅಲೆ!| ಬೇಕಾಬಿಟ್ಟಿ ಪಬ್‌, ಬೀಚ್‌ ಸುತ್ತಾಟ| ಯುರೋಪಲ್ಲಿ ಸೋಂಕು ಹೆಚ್ಚಳ|ತಾವು ತುತ್ತಾಗುವುದಲ್ಲದೆ ವೃದ್ಧರಿಗೂ ಹಬ್ಬಿಸುತ್ತಿರುವ ಯುವಸಮೂಹ| ವೈರಸ್‌ ಹತ್ತಿಕ್ಕಲು ಫ್ರಾನ್ಸ್‌, ಜರ್ಮನಿ, ಸ್ಪೇನ್‌, ನೆದರ್ಲೆಂಡ್‌ ಹರಸಾಹಸ| ಭಾರತದಲ್ಲೂ ಇದೇ ಪರಿಸ್ಥಿತಿ ಇದೆ| ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಿದೆ

Youths are spreading second wave of covid 19

ಲಂಡನ್‌/ವಾಷಿಂಗ್ಟನ್(ಸೆ.13)‌: ಕೊರೋನಾ ಇಳಿಮುಖದ ಸುಳಿವಿನಲ್ಲಿ ನಿಯಂತ್ರಣ ಕ್ರಮಗಳು ಸಡಿಲಗೊಂಡ ಬೆನ್ನಲ್ಲೇ ಹಲವು ದೇಶಗಳಲ್ಲಿ 2ನೇ ಹಂತದ ಕೊರೋನಾ ಸೋಂಕು ಸ್ಫೋಟಗೊಂಡಿದ್ದು ಆತಂಕ ಮೂಡಿಸಿವೆ. ಆಘಾತಕಾರಿ ಸಂಗತಿಯೆಂದರೆ ಹೀಗೆ 2ನೇ ಹಂತದಲ್ಲಿ, ಸೋಂಕಿತರ ಪೈಕಿ ಯುವಸಮೂಹ ಪ್ರಮಾಣ ಕಳವಳಕಾರಿಕಷ್ಟುಹೆಚ್ಚಿದೆ. ‘ಕೊರೋನಾ ವೈರಸ್‌ ವೃದ್ಧರಿಗೆ ಮಾತ್ರ ಮಾರಕ. ಯುವಕರಿಗೆ ಏನೂ ಆಗಲ್ಲ’ ಎಂದು ಭಾವನೆಯಲ್ಲಿ ಮೈಮರೆತ ಯುವ ಸಮೂಹ, ತನಗೆ ಅರಿವಿಲ್ಲದೇ ಸೋಂಕು ವಾಹಕರಾಗುತ್ತಿರುವುದು ಜಾಗತಿಕ ಅಂಕಿ ಅಂಶಗಳಿಂದ ಖಚಿತಪಟ್ಟಿದೆ.

ಅಷ್ಟುಮಾತ್ರವಲ್ಲ. ಇಂಥ ಯುವಸಮೂಹ ತನಗೆ ಅರಿವಿಲ್ಲದಂತೆಯೇ ಸೋಂಕಿಗೆ ತುತ್ತಾಗುವುದರ ಜೊತೆಗೆ, ಬಲುಬೇಗ ಸೋಂಕಿಗೆ ತುತ್ತಾಗುವ ಅಪಾಯ ಎದುರಿಸುತ್ತಿರುವ ವೃದ್ಧರಿಗೂ ಸೋಂಕು ಹಬ್ಬಿಸುತ್ತಿದೆ. ಪರಿಣಾಮ ಸೋಂಕು ತಗುಲಿ ಸಾವನ್ನಪ್ಪುವ ಯುವಕರು ಮತ್ತು ವೃದ್ಧರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅಮೆರಿಕದಲ್ಲಿ ಆರಂಭವಾದ ಈ ಅನಿರೀಕ್ಷಿತ ಬೆಳವಣಿಗೆಗಳು ಫ್ರಾನ್ಸ್‌, ಸ್ಪೇನ್‌, ಜಪಾನ್‌ ಸೇರಿದಂತೆ ಹಲವು ಯುರೋಪಿಯನ್‌ ಸರ್ಕಾರಗಳಿಗೆ ಹೊಸ ಸಮಸ್ಯೆಯನ್ನು ತಂದಿಟ್ಟಿದ್ದು, ಪರಿಹಾರಕ್ಕಾಗಿ ಅವು ಮತ್ತೆ ಸೀಮಿತ ಲಾಕ್ಡೌನ್‌ ಸೇರಿದಂತೆ ಹಲವು ನಿಯಂತ್ರಣಾ ಕ್ರಮಗಳಿಗೆ ಮೊರೆ ಹೋಗಿವೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಫ್ರಾನ್ಸ್‌, ಜರ್ಮನಿ, ನೆದರ್ಲೆಂಡ್‌ ಹಾಗೂ ಸ್ಪೇನ್‌ನ ಒಟ್ಟು ಕೊರೋನಾ ಸೋಂಕಿತರಲ್ಲಿ 20ರಿಂದ 39 ವರ್ಷದ ನಡುವಿನವರು ಶೇ.40 ಜನರಿದ್ದಾರೆ. ಇತರೆ ಹಲವು ದೇಶಗಳಲ್ಲಿ ಸೋಂಕಿಗೆ ತುತ್ತಾಗುತ್ತಿರುವ ಯುವಸಮೂಹದ ಪ್ರಮಾಣ ದಿನೇ ದಿನೇ ಏರುತ್ತಲೇ ಇದೆ.

ಹೀಗಾಗಿ ಸೋಂಕು ನಿಯಂತ್ರಿಸಲು ಹಸರಾಹಸ ನಡೆಯುತ್ತಿರುವ ಭಾರತಕ್ಕೆ ಇದನ್ನು ಎಚ್ಚರಿಕೆ ಗಂಟೆ ಎಂದೇ ಹೇಳಬಹುದಾಗಿದೆ. ಭಾರತದಲ್ಲಿ ಲಾಕ್‌ಡೌನ್‌ ಬಹುತೇಕ ಅಂತ್ಯಗೊಂಡು ಎಲ್ಲ ಮುಕ್ತವಾಗಿದ್ದು, ಬಾರ್‌, ರೆಸ್ಟೋರೆಂಟ್‌, ಕ್ಲಬ್‌ ತೆರೆಯಲಾಗಿದೆ. ಹಂತ ಹಂತವಾಗಿ ಶಾಲಾ-ಕಾಲೇಜುಗಳ ಆರಂಭಕ್ಕೂ ಸಿದ್ಧತೆ ನಡೆದಿದೆ. ಹೀಗಾಗಿ ಭಾರತಕ್ಕೆ ಕಟ್ಟೆಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಇದರಲ್ಲಿ ಸರ್ಕಾರದ ಪಾತ್ರದ ಜೊತೆಗೆ ಜನರ ಸಹಕಾರವೂ ಪ್ರಮುಖವಾಗಿದೆ.

ಯುವಕರೇಕೆ ವಾಹಕರು?:

ಯುವ ಸಮೂಹ ಸಾಮಾಜಿಕ ಅಂತರ ಪಾಲಿಸದೇ ಕಾಲೇಜು, ಮತ್ತಿತರೆಡೆ ಪಾರ್ಟಿ ನಡೆಸುವುದು. ಮಾಸ್ಕ್‌ ಧರಿಸದೇ ಸಂಚರಿಸುವುದು. ಬಾರ್‌-ರೆಸ್ಟೋರೆಂಟ್‌ಗಳಲ್ಲಿ ನಿಯಮ ಪಾಲಿಸದೇ ಧೂಮಪಾನ, ಮದ್ಯಪಾನದ ಮೋಜು. ಬೀಚ್‌ ಹಾಗೂ ಇತರ ಪ್ರವಾಸಿ ಸ್ಥಳಗಳಲ್ಲಿ ಮೈಮರೆತು ಗುಂಪುಗೂಡಾಗಿ ತಿರುಗಾಡುವುದು- ಇದು ಯುವಕರಲ್ಲಿ ಕೊರೋನಾ ಹೆಚ್ಚಲು ಕಾರಣವಾಗಿದೆ ಎಂಬುದು ತಜ್ಞರು ಹೇಳಿಕೆ. ಜೊತೆಗೆ ಮೇಲಾಗಿ ಇವರಲ್ಲಿ ಅನೇಕರಿಗೆ ಸೋಂಕು ಲಕ್ಷಣವೇ ಇರುವುದಿಲ್ಲ. ಹೀಗಾಗಿ ಪೂರ್ವರೋಗಗಳು ಹಾಗೂ ರೋಗ ನಿರೋಧಕ ಶಕ್ತಿ ಕ್ಷೀಣಿಸಿರುವ ವೃದ್ಧರಿಗೆ ತಮಗೆ ಗೊತ್ತೇ ಆಗದಂತೆ ಈ ಯುವಕರು ಸೋಂಕು ಹರಡಿಸುತ್ತಿದ್ದಾರೆ. ಇಂತಹ ಯುವಕರಿಂದಾಗಿ ವೃದ್ಧರಿಗೂ ಕಂಟಕ ಎದುರಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಸೇರಿದಂತೆ ವಿವಿಧ ದೇಶಗಳ ತಜ್ಞರು ಎಚ್ಚರಿಸಿದ್ದಾರೆ.

Latest Videos
Follow Us:
Download App:
  • android
  • ios