ನವದೆಹಲಿ(ಅ. 12) ಯುವ ಗಾಲ್ಫ್ ಆಟಗಾರ ಅರ್ಜುನ್ ಭಾಟಿ  ಮತ್ತು ಅವರ ಅಜ್ಜಿ ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಗಾಂಧಿಗೆ ದೇಶಭಕ್ತಿಯ ಪಾಠ  ಹೇಳಿದ್ದಾರೆ. ಟ್ವಿಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.

ರಾಹುಲ್ ಗಾಂಧಿಯವರೆ ನಿಮಗೆ ನೇರವಾಗಿ ಕೇಳುತ್ತಿದ್ದೇವೆ, ನೀವು ದೇಶಭಕ್ತಿ ಬಗ್ಗೆ ಮಾತನಾಡುತ್ತೀರಿ, ಭಾರತದ ಸೇನೆ ಬಗ್ಗೆ ಮಾತನಾಡುತ್ತೀರಿ, ಹದಿನೈದು ನಿಮಿಷ ಕೊಟ್ಟು ನೋಡಿ ಚೀನಾ ಧ್ವಂಸ ಮಾಡುತ್ತೇವೆ ಎನ್ನುತ್ತೀರಿ.. ಅರವತ್ತು ವರ್ಷ ಆಳಿದ ನಿಮಗೆ ಹದಿನೈದು ನಿಮಿಷ ಸಿಗಲಿಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ. 

'ಎಲೆ ನೋಡಿ ರಾಹುಲ್-ಪ್ರಿಯಾಂಕಾ ಬೆಳೆ ಹೇಳಿದ್ರೆ ರಾಜಕೀಯ ನಿವೃತ್ತಿ'

ವಿದೇಶ ಹೊಗಳುವ  ನೀವು ದಯವಿಟ್ಟು ವರ್ತನೆ ಬದಲಾಯಿಸಿಕೊಳ್ಳಿ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.  ಕೊರೋನಾ ಸಂದರ್ಭದಲ್ಲಿ ಯುವ ಗಾಲ್ಫರ್ ಅರ್ಜುನ್ ನೊಂದವರ ನೆರವಿಗೆ ನಿಂತ ಹಲವಾರು ಉದಾಹರಣೆಗಳಿವೆ.