ನವದೆಹಲಿ(ಅ.26): ಕೊರೋನಾತಂಕ ನಡುವೆಯೇ ಅಕ್ಟೋಬರ್ 25ರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭವಾಗಲಿದೆ. ಹೀಗಿದ್ದರೂ ಚಂಡೀಗಢದ ಇಂಟರ್‌ ನ್ಯಾಷನಲ್ ಏರ್‌ಪೋರ್ಟ್‌ನಿಂದ ಮಾರ್ಚ್ 2021ರವರೆಗೆ ಒಂದೇ ಒಂದು ಅಂತಾರಾಷ್ಟ್ರೀಯ ವಿಮಾನ ಕೂಡಾ ಹಾರಾಟ ನಡೆಸುವುದಿಲ್ಲ. ಅಲ್ಲದೇ ಇಲ್ಲಿಂದ ದೇಶದ ವಿವಿಧ ನಗರಗಳಿಗೆ ತೆರಳುವ ದೇಶೀಯ ವಿಮಾನಗಳ ಸಂಖ್ಯೆಯನ್ನೂ 36 ರಿಂದ 29ಕ್ಕೆ ಇಳಿಸಲಾಗಿದೆ. 

ಕಳೆದ ಕೆಲ ವರ್ಷಗಳಿಂದ ಚಂಡೀಗಢದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ಅನೇಕ ವಿಮಾನಗಳು ಚಳಿಗಾಲದಲ್ಲಿ ಇಬ್ಬನಿಯಿಂದಾಗಿ ಹಾರಾಟ ನಡೆಸುವುದಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯೂ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

ಇನ್ನು ಸೆಪ್ಟೆಂಬರ್ 18ರಂದು  DGCA ಭಾರತದ ಆರು ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್‌ಗೆ ಅನಿಗದಿತ ಕಾರ್ಗೋ ವಿಮಾನಗಳ ಹಾರಾಟ ನಡೆಸಬಹುದೆಂದಿತ್ತು.