ನೀನು ನಿಷ್ಪ್ರಯೋಜಕ ಎಂದು ಹೊರ ಕಳಿಸಿದರು, ಚಂದ್ರಯಾನ-3 ಬಗ್ಗೆ ಕೆ.ಶಿವನ್ ಮಾತು
ಇಸ್ರೋದ ಮಾಜಿ ಅಧ್ಯಕ್ಷ ಕೆ ಶಿವನ್ ಅವರು, ಇಸ್ರೋದಲ್ಲಿ ನನ್ನನ್ನು 'ನಿಷ್ಪ್ರಯೋಜಕ' ಎಂದು ಕರೆದು ಹೊರ ನಡೆಯುವಂತೆ ಹೇಳಿದ್ದರು ಎಂಬ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ಇಸ್ರೋ ಮಾಜಿ ಅಧ್ಯಕ್ಷ ಕೆ ಶಿವನ್ ಅವರು ಇತ್ತೀಚೆಗೆ ಗೋವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ್ದು, ತಮ್ಮ ಜೀವನದಲ್ಲಿ ಸಂಬಂಧಿಸಿದ ಅನೇಕ ಸಿಹಿ-ಕಹಿ ಘಟನೆಗಳನ್ನು ಹಂಚಿಕೊಂಡರು. ನಾನು ಶಾಲಾ ಶಿಕ್ಷಕನಾಗಲು ಬಯಸಿದ್ದೆ ಮತ್ತು ವಿಜ್ಞಾನಿಯಾಗಲು ಅಲ್ಲ ಎಂದು ಬಹಿರಂಗಪಡಿಸಿದ್ದಾರೆ. ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ ಕೆಲಸ ಕೇಳಲು ಇಸ್ರೋದ ಉಪಗ್ರಹ ಕೇಂದ್ರಕ್ಕೆ ಹೋಗಿದ್ದೆ, ಅಲ್ಲಿ ನನ್ನನ್ನು 'ನಿಷ್ಪ್ರಯೋಜಕ' ಎಂದು ಕರೆದು ಹೊರ ನಡೆಯುವಂತೆ ಹೇಳಿದ್ದರು ಎಂಬ ಅಂಶವನ್ನು ಶಿವನ್ ಬಿಚ್ಚಿಟ್ಟಿದ್ದಾರೆ.
ಶ್ರೀಮಂತಿಕೆಯಲ್ಲಿ ಸುಂದರ್ ಪಿಚೈ, ಸತ್ಯ ನಾಡೆಲ್ಲಾರನ್ನು ಹಿಂದಿಕ್ಕಿದ ಭಾರತೀಯ ಮೂಲದ ಮಹಿಳಾ ಉದ್ಯಮಿ!
ಕೆ.ಶಿವನ್ ಅವರು ಬಿಇ ನಂತರ ಉದ್ಯೋಗ ಮಾಡಲು ಮನಸ್ಸು ಮಾಡಿದರು, ಆದರೆ ಕೆಲಸ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಅವರು ಸ್ನಾತಕೋತ್ತರ ಪದವಿಗೆ ಸೇರಿಕೊಂಡರು. ಸ್ನಾತಕೋತ್ತರ ಪದವಿಯ ನಂತರ, ಶಿವನ್ ಕೆಲಸ ಕೇಳಲು ಇಸ್ರೋದ ಉಪಗ್ರಹ ಕೇಂದ್ರಕ್ಕೆ ಹೋದರು. “ನನಗೆ ಇಸ್ರೋದ ಉಪಗ್ರಹ ಕೇಂದ್ರದಲ್ಲಿ ಹೇಳಲಾಯಿತು - ನೀವು ಯಾವುದೇ ಪ್ರಯೋಜನವಿಲ್ಲ ಮತ್ತು ನಿಮಗೆ ಕೆಲಸ ಸಿಗುವುದಿಲ್ಲ. ಇಲ್ಲಿಂದ ಹೊರಡಿ ಎಂದು ಹೇಳಿಬಿಟ್ಟರು. ನಂತರ ಅದೇ ನಾನು ಸಂಸ್ಥೆಯ ಅಧ್ಯಕ್ಷನಾದೆ. ನನಗೆ ಉಪಗ್ರಹ ಕೇಂದ್ರದಲ್ಲಿ ಕೆಲಸ ಸಿಗಲಿಲ್ಲ, ಆದರೆ ರಾಕೆಟ್ ಕೇಂದ್ರದಲ್ಲಿ ಕೆಲಸ ಸಿಕ್ಕಿತು ಎಂದು ಶಿವನ್ ಬಹಿರಂಗಪಡಿಸಿದ್ದಾರೆ.
ಮಾಜಿ ಇಸ್ರೋ ಮುಖ್ಯಸ್ಥ ಕೆ ಶಿವನ್ ಅವರು ತಮ್ಮ ವೃತ್ತಿಜೀವನದಲ್ಲಿ ಅವರು ಬಯಸಿದ್ದನ್ನು ಎಂದಿಗೂ ಪಡೆಯಲಿಲ್ಲ. ಆದರೆ ಅದೃಷ್ಟ ಯಾವಾಗಲೂ ಅವರಿಗೆ ಹೊಸ ಬಾಗಿಲುಗಳನ್ನು ತೆರೆಯುತ್ತಲೇ ಇತ್ತು ಎಂಬುದನ್ನು ಹೇಳಿದ್ದಾರೆ. ಶಿವನ್ ಪ್ರಕಾರ, ಅವರು ಜಿಎಸ್ಎಲ್ವಿ (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ನಿರ್ದೇಶಕರಾಗಿ ನೇಮಕಗೊಂಡಾಗ ಈ ಯೋಜನೆಯನ್ನು ಸಂಪೂರ್ಣ ಯಶಸ್ವಿಗೊಳಿಸಲು ನಿರ್ಧರಿಸಿದರು. ಇದಕ್ಕಾಗಿ ಅನೇಕ ಸವಾಲು, ಅಪಾಯಗಳನ್ನು ಎದುರಿಸಿದರು. ಈ ಮೂಲಕ ಇಸ್ರೋ ಅಧಿಕಾರಿಗಳ ಗಮನವನ್ನು ಸೆಳೆದರು. ಜಿಎಸ್‌ಎಲ್‌ವಿ ಯೋಜನೆ ಮತ್ತೆ ಮತ್ತೆ ವಿಫಲವಾಗುತ್ತಿದ್ದು, 4 ಬಾರಿ ವಿಫಲವಾಗಿರುವ ನನ್ನನ್ನು ಯೋಜನೆಯ ನಿರ್ದೇಶಕರನ್ನಾಗಿ ಮಾಡಲಾಗಿದೆ ಎಂದು ಶಿವನ್ ಹೇಳಿದ್ದಾರೆ.
ಖೇಶ್ ಅಂಬಾನಿಯನ್ನು ಮೀರಿ ಬೆಳೆದು ಜಗತ್ತಿನ 6ನೇ ಅತಿದೊಡ್ಡ ಸಿರಿವಂತ ಎನಿಸಿಕೊಂಡಾತನ ಆಸ್ತಿ ಇಂದು ಶೂನ್ಯ!
ನಾನು ಜಿಎಸ್‌ಎಲ್‌ವಿ ಯೋಜನೆಯ ನಿರ್ದೇಶಕನಾದಾಗ, ನನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳೆಲ್ಲರೂ ನನ್ನನ್ನು ಅಭಿನಂದಿಸುವ ಬದಲಾಗಿ ಸಹಾನುಭೂತಿ ತೋರಿಸುತ್ತಿದ್ದರು. ನಿರ್ದೇಶಕ ಹುದ್ದೆಯನ್ನು ಸ್ವೀಕರಿಸಲು ಒಪ್ಪಿದ್ದು ನಿಮ್ಮ ಮೂರ್ಖ ತನ ಎಂದು ಹೇಳಿದರು, ಆದರೆ ನಾನು ಬಲವಾದ ನಂಬಿಕೆಯನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದೆ ಮತ್ತು ಜಿಎಸ್ಎಲ್ವಿ ಯೋಜನೆಯನ್ನು ಯಶಸ್ವಿಗೊಳಿಸಿದ್ದೇನೆ ಎಂದು ಶಿವನ್ ಹೇಳಿದರು.
ಶಿವನ್ ಅವರ ನೇತೃತ್ವದಲ್ಲಿ ಭಾರತವು ಚಂದ್ರಯಾನ-2 ಮಿಷನ್ ಅನ್ನು ಪ್ರಾರಂಭಿಸಿತು, ಅದು ಯಶಸ್ವಿಯಾಗಲಿಲ್ಲ. ಆ ಘಟನೆಯನ್ನು ನೆನಪಿಸಿಕೊಂಡ ಶಿವನ್, ಚಂದ್ರಯಾನ-2 ವಿಫಲವಾದ ನಂತರ ನಾವು ಮೌನವಾಗಿ ಕುಳಿತುಕೊಳ್ಳಲಿಲ್ಲ ಮತ್ತು ಮರು ದಿನವೇ ಚಂದ್ರಯಾನ-3 ಗಾಗಿ ತಯಾರಿ ಆರಂಭಿಸಿದ್ದೇವೆ ಎಂದು ಹೇಳಿದರು. ಮರುದಿನವೇ ಚಂದ್ರಯಾನ-3 ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದರು ಎಂದು ಇಸ್ರೋ ಮಾಜಿ ಮುಖ್ಯಸ್ಥರು ತಿಳಿಸಿದ್ದಾರೆ.
ಇನ್ನು ಕಳೆದ ಸೆಪ್ಟೆಂಬರ್ ನಲ್ಲಿ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ಮತ್ತು ಮಾಜಿ ಇಸ್ರೋ ಅಧ್ಯಕ್ಷ ಡಾ ಕೆ ಶಿವನ್ ಅವರನ್ನು ಮೂರು ವರ್ಷಗಳ ಕಾಲ ಐಐಟಿ ಇಂದೋರ್‌ನ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಡಾ ಶಿವನ್ ಅವರ ಮಾರ್ಗದರ್ಶನದಲ್ಲಿ ಐಐಟಿ ಇಂದೋರ್ ಬಾಹ್ಯಾಕಾಶ ಎಂಜಿನಿಯರಿಂಗ್‌ನ ಬಳಕೆಯಾಗದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮೂಲಕ ದೇಶದ ಬಾಹ್ಯಾಕಾಶ ಕಾರ್ಯಾಚರಣೆಗೆ ಕೊಡುಗೆ ನೀಡಲು ಅವಕಾಶವನ್ನು ಪಡೆಯುತ್ತದೆ.