Asianet Suvarna News Asianet Suvarna News

ಆಹಾರದಲ್ಲಿ ಕಲಬೆರಕೆ: ಯೋಗಿ ಸರ್ಕಾರದ ಕಟ್ಟುನಿಟ್ಟಿನ ಎಚ್ಚರಿಕೆ, ಸೂಚನೆಗಳೇನು ಗೊತ್ತಾ?

ಮಾನವನ ಬೆವರು ಮತ್ತು ಕೊಳಕು ವಸ್ತುಗಳೊಂದಿಗೆ ಆಹಾರ ಪದಾರ್ಥಗಳನ್ನು ಕಲಬೆರಕೆ ಮಾಡುವ ಘಟನೆಗಳ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ ಹೋಟೆಲ್‌ಗಳು, ಧಾಬಾಗಳು ಮತ್ತು ರೆಸ್ಟೋರೆಂಟ್‌ಗಳ ತೀವ್ರ ಪರಿಶೀಲನೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Yogi government strict warning on Adulteration in food know what are the instructions san
Author
First Published Sep 24, 2024, 4:26 PM IST | Last Updated Sep 24, 2024, 4:26 PM IST

ಲಖನೌ(ಸೆ.24): ಮಾನವನ ಬೆವರು, ಕೊಳಕು ವಸ್ತುಗಳೊಂದಿಗೆ ಆಹಾರ ಪದಾರ್ಥಗಳನ್ನು ಕಲಬೆರಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಇಂತಹ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಸ್ಥಾಪನೆ ಆಗಿರುವ ಎಲ್ಲಾ ಹೋಟೆಲ್‌ಗಳು/ಧಾಬಾಗಳು/ರೆಸ್ಟೋರೆಂಟ್‌ಗಳು ಇತ್ಯಾದಿಗಳ ಸಮಗ್ರ ತನಿಖೆ, ಪರಿಶೀಲನೆ ಇತ್ಯಾದಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.  ಇದರೊಂದಿಗೆ ಸಾರ್ವಜನಿಕರ ಆರೋಗ್ಯ ಸುರಕ್ಷತೆಯನ್ನು ಖಾತ್ರಿಪಡಿಸುವ ಜೊತೆಗೆ ಅಗತ್ಯಕ್ಕೆ ಅನುಗುಣವಾಗಿ ನಿಯಮಗಳನ್ನು ತಿದ್ದುಪಡಿ ಮಾಡಲು ಸೂಚನೆಗಳನ್ನು ನೀಡಿದರು.

ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಮುಖ್ಯ ಮಾರ್ಗಸೂಚಿಗಳು ಇಂತಿವೆ:-

  • ಇತ್ತೀಚಿನ ದಿನಗಳಲ್ಲಿ, ಜ್ಯೂಸ್, ದಾಲ್ ಮತ್ತು ರೊಟ್ಟಿಯಂತಹ ಆಹಾರ ಪದಾರ್ಥಗಳನ್ನು ಮಾನವನ ಬೆವರು/ತಿನ್ನಲಾಗದ/ಕೊಳಕು ಪದಾರ್ಥಗಳೊಂದಿಗೆ ಕಲಬೆರಕೆ ಮಾಡುವ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ಕಂಡುಬರುತ್ತಿವೆ. ಇಂತಹ ಘಟನೆಗಳು ಭೀಕರವಾಗಿದ್ದು, ಸಾಮಾನ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇಂತಹ ನೀಚ ಪ್ರಯತ್ನಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳನ್ನು ತಡೆಯಲು ಕಾಂಕ್ರೀಟ್ ವ್ಯವಸ್ಥೆ ಅಗತ್ಯ ಎಂದಿದ್ದಾರೆ.
  • ಅಂತಹ ಧಾಬಾಗಳು/ರೆಸ್ಟೋರೆಂಟ್‌ಗಳು ಮತ್ತು ಇತರ ಆಹಾರ ಸಂಸ್ಥೆಗಳನ್ನು ಪರಿಶೀಲಿಸುವುದು ಅವಶ್ಯಕ. ರಾಜ್ಯಾದ್ಯಂತ ತೀವ್ರ ಪ್ರಚಾರವನ್ನು ನಡೆಸುವ ಮೂಲಕ, ಈ ಸಂಸ್ಥೆಗಳ ನಿರ್ವಾಹಕರು ಸೇರಿದಂತೆ ಅಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳ ಪರಿಶೀಲನೆಯನ್ನು ಮಾಡಬೇಕು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಪೊಲೀಸ್ ಮತ್ತು ಸ್ಥಳೀಯ ಆಡಳಿತದ ಜಂಟಿ ತಂಡವು ಈ ಕ್ರಮವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
  • ಆಹಾರ ಸಂಸ್ಥೆಗಳಲ್ಲಿ ನಿರ್ವಾಹಕರು, ಮಾಲೀಕರು, ವ್ಯವಸ್ಥಾಪಕರು ಇತ್ಯಾದಿಗಳ ಹೆಸರು ಮತ್ತು ವಿಳಾಸವನ್ನು ಪ್ರಮುಖವಾಗಿ ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಗೂ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ತರಬೇಕು.
  • ಧಾಬಾ/ಹೋಟೆಲ್‌ಗಳು/ರೆಸ್ಟೋರೆಂಟ್‌ಗಳು ಇತ್ಯಾದಿ ಆಹಾರ ಸಂಸ್ಥೆಗಳಲ್ಲಿ ಸಿಸಿಟಿವಿ ವ್ಯವಸ್ಥೆ ಇರಬೇಕು. ಗ್ರಾಹಕರು ಕುಳಿತುಕೊಳ್ಳುವ ಸ್ಥಳ ಮಾತ್ರವಲ್ಲದೆ ಇತರ ಭಾಗಗಳನ್ನು ಸಿಸಿಟಿವಿಯಿಂದ ಆವೃತ್ತವಾಗಿರಬೇಕು. ಪ್ರತಿ ಅಂಗಡಿಗಳ ನಿರ್ವಾಹಕರು ಸಿಸಿಟಿವಿ ಫೀಡ್ ಅನ್ನು ಸುರಕ್ಷಿತವಾಗಿರಿಸುತ್ತಾರೆ ಮತ್ತು ಅಗತ್ಯವಿದ್ದರೆ ಪೋಲೀಸ್/ಸ್ಥಳೀಯ ಆಡಳಿತಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
  • ಆಹಾರ ಕೇಂದ್ರಗಳಲ್ಲಿ ಸ್ವಚ್ಛತೆ ಇರಬೇಕು. ಆಹಾರ ಪದಾರ್ಥಗಳನ್ನು ತಯಾರಿಸುವಾಗ ಮತ್ತು ಬಡಿಸುವಾಗ ಸಂಬಂಧಪಟ್ಟವರು ಕಡ್ಡಾಯವಾಗಿ ಮಾಸ್ಕ್/ಗ್ಲೌಸ್ ಬಳಸಬೇಕು, ಇದರಲ್ಲಿ ಯಾವುದೇ ನಿರ್ಲಕ್ಷ್ಯ ಇರಬಾರದು.
  • ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಗಳಿಗೆ ಯಾವುದೇ ರೀತಿಯ ಟ್ಯಾಂಪರಿಂಗ್ ಇರುವಂತಿಲ್ಲ. ಹಾಗೆ ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಹಾರ ಪದಾರ್ಥಗಳ ತಯಾರಿಕೆ, ಮಾರಾಟ ಅಥವಾ ಇತರ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಪ್ರಾಯೋಗಿಕತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಕಠಿಣಗೊಳಿಸಬೇಕು. ನಿಯಮ ಉಲ್ಲಂಘನೆಯ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು.
     

ಇದನ್ನೂ ಓದಿ: ವಿಶ್ವಕ್ಕೆ ಉತ್ತರ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿಲು ಸಜ್ಜಾಗಿದೆ UPITS 2024

ಇದನ್ನೂ ಓದಿ: ಉತ್ತರ ಪ್ರದೇಶದ ಬಳಿಯಲ್ಲಿದೆ ಅತ್ಯಧಿಕ GI ಟ್ಯಾಗ್ ಉತ್ಪನ್ನಗಳು; ಕರ್ನಾಟಕ ಹತ್ತಿರ ಎಷ್ಟಿದೆ?

 

Latest Videos
Follow Us:
Download App:
  • android
  • ios