ಲಕ್ನೋ(ಏ.14): ಉತ್ತರ ಪ್ರದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ. ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್‌ಗೆ ಕೊರೋನಾ ಸೋಂಕು ತಗುಲಿದ ಬೆನ್ನಲ್ಲೇ, ಸದ್ಯ ಸಿಎಂ ಯೋಗಿ ಆದಿತ್ಯನಾಥ್‌ರವರ ಕೊರೋನಾ ವರದಿ ಪಾಸಿಟಿವ್ ಬಂದಿದೆ. ಖುದ್ದಿ ಯೋಗಿ ಈ ಬಗ್ಗೆ ಟಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್ 'ಆರಂಭಿಕ ಲಕ್ಷಣ ಕಂಡು ಬಂದ ಹಿನ್ನೆಲೆ ನಾನು ಕೊರೋನಾ ಟೆಸ್ಟ್‌ ಮಾಡಿಸಿಕೊಂಡೆ. ನನ್ನ ವರದಿ ಪಾಸಿಟಿವ್ ಬಂದಿದೆ. ಸದ್ಯ ನಾನು ಸ್ವಯಂ ಐಸೋಲೇಷನ್‌ನಲ್ಲಿದ್ದೇನೆ ಹಾಗೂ ಎಲ್ಲಾ ಕ್ರಮಗಳನ್ನು ಪಾಲಿಸುತ್ತಿದ್ದೇನೆ. ಎಲ್ಲಾ ಕಾರ್ಯಕ್ರಮಗ ಹಾಗೂ ಸಭೆಯನ್ನು ವರ್ಚುವಲಿ ನಡೆಸುಉತ್ತಿದ್ದೇನೆ. ಸರ್ಕಾರದ ಎಲ್ಲಾ ಕಾರ್ಯಗಳು ಯಾವುದೇ ಅಡಚಣೆ ಇಲ್ಲದೇ ನಡೆಯುತ್ತಿದೆ. ಈ ನಡುವೆ ನನ್ನ ಸಂಪರ್ಕದಲ್ಲಿ ಬಂದ ಎಲ್ಲರೂ ಖಡ್ಡಾಯವಾಗಿ ಕೊರೋನಾ ಟೆಸ್ಟ್‌ ಮಾಡಿಸಿ, ಎಚ್ಚರದಿಂದಿರಿ' ಎಂದಿದ್ದಾರೆ.

ಇನ್ನು ಮಂಗಳವಾರದಂದು ಉತ್ತರ ಪ್ರದೇಶದಲ್ಲಿ ಹದಿನೆಂಟು ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಅಲ್ಲದೇ ಎಂಬತ್ತೈದಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.