ಲಖನೌ(ನ.12): ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪ್ರಚಾರ ಮಾಡಿದ ಕ್ಷೇತ್ರಗಳ ಪೈಕಿ ಶೇ.67 ಕಡೆ ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಮೂರು ಹಂತದ ಬಿಹಾರ ಚುನಾವಣೆ ಸಂದರ್ಭದಲ್ಲಿ 18 ಕ್ಷೇತ್ರಗಳಲ್ಲಿ ಯೋಗಿ ಆದಿತ್ಯನಾಥ್‌ ಅವರು ಮತ ಯಾಚನೆ ಮಾಡಿದ್ದರು. ಈ ಪೈಕಿ 12 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆದ್ದಿದ್ದಾರೆ. ಯೋಗಿ ಅವರ ಸ್ಟೆ್ರೖಕ್‌ ರೇಟ್‌ ಶೇ.67ರಷ್ಟಿದೆ. ಉಳಿದ 6 ಕ್ಷೇತ್ರಗಳ ಪೈಕಿ 4 ಸಿಪಿಐ (ಎಂಎಲ್‌) ಪಾಲಾಗಿದ್ದರೆ, ಉಳಿದ ಎರಡು ಆರ್‌ಜೆಡಿಗೆ ಒಲಿದಿವೆ.

ಉತ್ತರಪ್ರದೇಶ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್‌ ಅವರು ಸ್ಟಾರ್‌ ಪ್ರಚಾರಕರಾಗಿದ್ದರು. ಅವರು ಪ್ರಚಾರ ಮಾಡಿದ ಕಡೆ ಉತ್ತಮ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲೂ ಅವರನ್ನು ಬಿಜೆಪಿ ಪ್ರಚಾರಕ್ಕೆ ಹೆಚ್ಚಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.