ಸರ್ಕಾರದ ದಿಟ್ಟ ತೀರ್ಮಾನ, ಚೀನಾ ಮೇಡ್ ವಿದ್ಯುತ್ ಉಪಕರಣ ಬ್ಯಾನ್!

ಯೋಗಿ ಸರ್ಕಾರದ ದಿಟ್ಟ ನಿರ್ಧಾರ/ ಚೀನಾ ಮೂಲದ ವಿದ್ಯುತ್ ಉಪಕರಣಗಳು ಬ್ಯಾನ್/ ರಾಜ್ಯದ ವಿದ್ಯುತ್ ಇಲಾಖೆ ಇನ್ನು ಮುಂದೆ ಬಳಸಲ್ಲ/ ಅಧಿಕೃತ ಆದೇಶ ಹೊರಬೀಳಬೇಕಿದೆ

Yogi Adityanath govt bans use of China-made electricity meters

ನವದೆಹಲಿ(ಜೂ. 24)  ಚೀನಾ ವಸ್ತುಗಳ ಬಳಕೆ ನಿಲ್ಲಿಸಬೇಕು ಎಂಬ ಕೂಗು ದೊಡ್ಡದಾಗಿ ಕೇಳಿಬರುತ್ತಿರುವಾಗಲೇ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದೆ. ದಿಟ್ಟ ಕ್ರಮ ತೆಗೆದುಕೊಂಡಿರುವುದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ. 

ಚೀನಾ ತಯಾರಿಸಿರುವ ವಿದ್ಯುತ್ ಉಪಕರಣಗಳ ಅಳವಡಿಕೆಯನ್ನು ಯೋಗಿ ಸರ್ಕಾರ ಬ್ಯಾನ್ ಮಾಡಿದೆ. ಇನ್ನು ಮುಂದೆ ಚೀನಾ ತಯಾರುಮಾಡಿರುವ ವಿದ್ಯುತ್ ಸಲಕರಣೆಯನ್ನು ಉತ್ತರ ಪ್ರದೇಶ ವಿದ್ಯುತ್ ಇಲಾಖೆ ಬಳಕೆ ಮಾಡುವುದಿಲ್ಲ.

ಚೀನಾ ಉತ್ಪನ್ನ ಬಹಿಷ್ಕಾರ; ಸದ್ದಿಲ್ಲದೆ ನಡೆದಿದೆ ಕಾರ್ಯತಂತ್ರ

ಭಾರತ ಮತ್ತು ಚೀನಾ ಗಡಿಯಲ್ಲಿನ ಸಂಘರ್ಷದ ನಂತರದಲ್ಲಿ ಯೋಗಿ ಸರ್ಕಾರ ಈ ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಚೀನಾ ಮೀಟರ್ ಅಳವಡಿಕೆ ಮಾಡುವುದನ್ನು ನಿಷೇಧಿಸಲಾಗಿದ್ದು ಅಧಿಕೃತ ಆದೇಶ ಹೊರಬೀಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಆಲ್ ಇಂಡಿಯಾ ಪವರ್ ಫೆಡರೇಶನ್ ಅಧ್ಯಕ್ಷ ಶೈಲೇಂದ್ರ ದುಭೆ ಈ ತೀರ್ಮಾನ ಸ್ವಾಗತ ಮಾಡಿದ್ದಾರೆ.  ಆತ್ಮ ನಿರ್ಭರ ಭಾರತ್ ಹೇಳುವಂತೆ ಭಾರತೀಯ ಕಂಪನಿ ಬಿಎಚ್‌ಎಎಲ್ ನಿಂದ ಉತ್ಪನ್ನ ಪಡೆದುಕೊಳ್ಳಿ ಎಂಬ ಸಲಹೆ ನೀಡಿದ್ದಾರೆ.

ಕಳೆದ ವಾರ ಯುಪಿ ಸ್ಪೆಶಲ್ ಟಾಸ್ಕ್ ಪೋರ್ಸ್ ತನ್ನ ಸಿಬ್ಬಂದಿಗೆ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಐವತ್ತೆರಡು ಆಪ್ ಡಿಲೀಟ್ ಮಾಡಲು ತಿಳಿಸಿತ್ತು.  ಮಹಾರಾಷ್ಟ್ರ ಸರ್ಕಾರ ಸಹ ವಿವಿಧ ಯೋಜನೆಗಳ ಮೇಲೆ ಚೀನಾ ಹೂಡಿಕೆಗೆ ಬ್ರೇಕ್ ಹಾಕಿದೆ.

Latest Videos
Follow Us:
Download App:
  • android
  • ios