Asianet Suvarna News Asianet Suvarna News

ರಸ್ತೆಯಲ್ಲೇ ಯುವತಿಯರ ರಸ್ಲಿಂಗ್: ಹುಡುಗನಿಗಾಗಿ ಜುಟ್ಟು ಜುಟ್ಟು ಹಿಡಿದು ಕಿತ್ತಾಡಿಕೊಂಡ ಗರ್ಲ್ಸ್

ಇತ್ತೀಚೆಗೆ ಬೀದಿಯಲ್ಲೇ ಮಹಿಳೆಯರು ಕಿತ್ತಾಡಿಕೊಳ್ಳುತ್ತಿರುವುದು ಸಾಮಾನ್ಯ ಎನಿಸಿದೆ. ಹಾಗೆಯೇ ಒಬ್ಬ ಹುಡುಗನಿಗಾಗಿ ನಡು ಬೀದಿಯಲ್ಲಿ ನಾಲ್ವರು ಹುಡುಗಿಯರು ಫೈಟ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

wrestling on Road, girls fighting for a boy in bihars sonepur, video goes viral akb
Author
First Published Nov 29, 2022, 6:03 PM IST

ಇತ್ತೀಚೆಗೆ ಬೀದಿಯಲ್ಲೇ ಮಹಿಳೆಯರು ಕಿತ್ತಾಡಿಕೊಳ್ಳುತ್ತಿರುವುದು ಸಾಮಾನ್ಯ ಎನಿಸಿದೆ. ಹಿಂದೆಲ್ಲಾ ಹುಡುಗರಿಗೆ ಮೀಸಲಾದ ಈ ಬೀದಿ ಕಾಳಗಗಳಲ್ಲಿ ಈಗ ಯುವತಿಯರು ಕೂಡ ಭಾಗಿಯಾಗುತ್ತಿದ್ದು, ಎಲ್ಲದರಲ್ಲೂ ಸಮಾನತೆ ಸಾಧಿಸಲು ಯತ್ನಿಸುತ್ತಿದ್ದಾರೋ ಎಂಬುದಂತು ಗೊತ್ತಿಲ್ಲ. ಅಂದಹಾಗೆ ಈ ಗಲಾಟೆ ನಡೆದಿರುವುದು ಬಿಹಾರದ ಸೊನೆಪುರ್‌ ಎಂಬಲ್ಲಿ. ಒಬ್ಬಳು ಹುಡುಗಿಯ ಮೇಲೆ ಮೂರು ಜನ ಮುಗಿಬಿದ್ದಿದ್ದು, ಆಕೆಯ ಜುಟ್ಟು ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ಆಕೆಯ ಬಟ್ಟೆಯನ್ನು ಕೂಡ ಹರಿಯಲು ಯತ್ನಿಸಿದ್ದಾರೆ. ಈ ವೇಳೆ ಯುವಕನೋರ್ವ ಹುಡುಗಿಯರ ಈ ಬೀದಿ ಕಾಳಗವನ್ನು ಬಿಡಿಸಲು ಹರಸಾಹಸ ಪಟ್ಟಿದ್ದಾನೆ.

ಹಲವು ನಿಮಿಷಗಳ ಕಾಲ ಆತ ಪರಿಶ್ರಮ ಪಟ್ಟು ನಾಲ್ವರು ಯುವತಿಯರ ಕೈಯಿಂದ ಒಬ್ಬಳು ಹುಡುಗಿಯನ್ನು ಬಿಡಿಸಿ ದೂರ ಕಳುಹಿಸಿದ್ದಾನೆ. ಮೂಲಗಳ ಪ್ರಕಾರ ಓರ್ವ ಹುಡುಗನಿಗಾಗಿ ಈ ಕಿತ್ತಾಟ ನಡೆದಿದೆ ಎಂದು ತಿಳಿದು ಬಂದಿದೆ. ಒಬ್ಬಳು ಹುಡುಗಿ ತನ್ನ ಸ್ನೇಹಿತೆಯರನ್ನು ಕರೆದುಕೊಂಡು ಬಂದು ತನ್ನ ಗೆಳೆಯನ ಜೊತೆ ಇದ್ದ ಹುಡುಗಿಯ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಒಬ್ಬ ಹುಡುಗ (Boy) ತನ್ನ ಗೆಳತಿಯ ಜೊತೆ ಸುತ್ತಾಡಲು ಬಂದಿದ್ದು, ಈ ವೇಳೆ ಆತನ ಜೊತೆ ಸಂಬಂಧದಲ್ಲಿದ್ದ ಮತ್ತೊಬ್ಬ ಗೆಳತಿ ತನ್ನ ನಾಲ್ವರು ಗೆಳತಿಯರೊಂದಿಗೆ ಅಲ್ಲಿಗೆ ಬಂದಿದ್ದಾಳೆ. ಬಂದವಳಿಗೆ ತನ್ನ ತನಿಯ ಇನ್ನೊಬ್ಬಳೊಂದಿಗೆ ಸುತ್ತುತ್ತಿರುವುದು ಗಮನಕ್ಕೆ ಬಂದಿದ್ದು, ಆಕೆ ಹಾಗೂ ಆಕೆಯ ಗೆಳತಿಯರೆಲ್ಲಾ ಸೇರಿ ಬಾಯ್‌ಫ್ರೆಂಡ್ ((Boyfriend) ಜೊತೆ ಇದ್ದವಳಿಗೆ ಸರಿಯಾಗಿ ಬಾರಿಸಿದ್ದಾರೆ. 

ಯುವತಿಯರ ಪರಸ್ಪರ ಹೊಡೆದಾಟದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಬ್ಬನಿಗಾಗಿ ಐವರು ಹುಡುಗಿಯರು ಗಲಾಟೆ ಮಾಡುತ್ತಿದ್ದಾರಾ? 1000 ಹುಡುಗರಿಗೆ 1050 ಹುಡುಗಿಯರಿದ್ದಾಗ ಭಾರತದಲ್ಲಿ ಈ ರೀತಿಯ ಅನಾಹುತಗಳು ಸಂಭವಿಸುತ್ತವೆ. ಹುಡುಗರಿಗಾಗಿ ಗಲಾಟೆ ಮಾಡುವುದನ್ನು ನಿಲ್ಲಿಸಿ, ಇಲ್ಲಿ ಬೇಕಾದಷ್ಟು ಹುಡುಗರಿದ್ದಾರೆ ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇಂದು ಲಿಂಗ ಅಸಮಾನತೆಗೆ (gender inequality) ದೊಡ್ಡ ಉದಾಹರಣೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅವನೆಂಥಾ ಅದೃಷ್ಟಶಾಲಿ ಆಗಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಜಡೆ ಜಗಳ: ಟೋಲ್ ಪ್ಲಾಜಾ ಮುಂದೆ ಜುಟ್ಟು ಹಿಡಿದು ಹೊಡೆದಾಡಿದ ಇಬ್ಬರು ಮಹಿಳೆಯರು

ಹಿಂದೆಲ್ಲಾ ಹೀಗೆ ಹುಡುಗರು ಮಾಡುತ್ತಿದ್ದರು. ಈಗಲೂ ಮಾಡುತ್ತಾರೆ. ಆದರೆ ಹೀಗೆ ಮಾಡುವವರ ಸಂಖ್ಯೆ ಕಡಿಮೆ ಆಗಿದೆ. ಆದರೆ ಇತ್ತೀಚೆಗೆ ಹುಡುಗಿಯರು ಕೂಡ ಉಪಯುಕ್ತವಾದುದ್ದನ್ನು ಏನನ್ನಾದರು ಮಾಡುವುದರ ಬದಲು ಸಂಸ್ಕೃತಿ ಮರೆತು ಇಂತಹ ಕೆಟ್ಟ ಕೆಲಸಕ್ಕೆ ಇಳಿದಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಹುಡುಗರಿಗೆ ಹುರುಪು ನೀಡಿದ್ದು, ಹುಡುಗರಿಗಾಗಿಯೂ ಫೈಟ್ (Fighting) ಮಾಡುವವರಿದ್ದಾರೆ ಎಂದು ಒಳಗೊಳಗೆ ಖುಷಿ ಪಡ್ತಿರುವುದಂತೂ ಸುಳ್ಳಲ್ಲ. 

ಒಬ್ಬ ಹುಡುಗನಿಗಾಗಿ, ಇಬ್ಬರು ಹುಡುಗಿಯರ ಫೈಟ್, ಪೊಲೀಸ್ ಠಾಣೆ ಮೆಟ್ಟಿಲೇರಿತು ಜಡೆ ಜಗಳ!

ಹುಡುಗಿಯರ ನಡುವಿನ ಇಂತಹ ಫೈಟಿಂಗ್ ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ ಮುಂಬೈನ (Mumbai) ಲೋಕಲ್ ಟ್ರೈನೊಂದರಲ್ಲಿ ಹೆಂಗಸರು ಸೀಟಿಗಾಗಿ ಪರಸ್ಪರ ಕಿತ್ತಾಡುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಹಾಗೆಯೇ ಕಳೆದ ಅಕ್ಟೋಬರ್‌ನಲ್ಲಿ ಲಕ್ನೋದ ಹೊಟೇಲ್‌ವೊಂದರ ಎದುರು ಇಬ್ಬರು ಹುಡುಗಿಯರು ಜುಟ್ಟು ಹಿಡಿದು ಕಿತ್ತಾಡಿಕೊಂಡ ವಿಡಿಯೋ ವೈರಲ್ ಆಗಿತ್ತು. ಇವರಿಬ್ಬರ ಫೈಟಿಂಗ್ ನೋಡಿ ಜನ ದಂಗಾಗಿ ಹೋಗಿದ್ದರು. ಕಾರಿನಲ್ಲಿ ಬಂದ ಯುವತಿಯೊಬ್ಬಳು ಯುವಕನಿಗಾಗಿ ಕಾಯುತ್ತಾ ನಿಂತಿದ್ದಳು. ಅದೇ ವೇಳೆ ಕಾರಿನಲ್ಲಿ ಬಂದ ಯುವಕ ಬೇರೊಂದು ಯುವತಿಯ ಜೊತೆ ಹೊಟೇಲ್‌ನಿಂದ ಹೊರ ಬರುತ್ತಿರುವ ದೃಶ್ಯ ಈ ಯುವತಿಯ ಕಣ್ಣಿಗೆ ಬಿದ್ದಿತ್ತು. ಇದನ್ನು ನೋಡಿದ್ದೇ ತಡ ಹಳೆಯ ಗೆಳತಿ ಜಗಳಕ್ಕೆ ನಿಂತಿದ್ದಳು. ಈ ಜಗಳದಲ್ಲಿ ಯುವತಿಯೊಬ್ಬಳು ಎಚ್ಚರ ತಪ್ಪಿ ಬಿದ್ದಿದ್ದು, ಯುವಕ ಆಸ್ಪತ್ರೆಗೆ ದಾಖಲಿಸಿದ್ದ. ಎಚ್ಚರವಾದ ಬಳಿಕ ಆ ಯುವತಿ ದೂರು ದಾಖಲಿಸಿದ್ದಳು.

Follow Us:
Download App:
  • android
  • ios