ಜಗತ್ತಿನಲ್ಲೇ ಅತಿದೊಡ್ಡ ಲಸಿಕಾ ಅಭಿಯಾನ/ ದೇಶದ ವಿಜ್ಞಾನಿಗಳ ಶ್ರಮ ಶ್ಲಾಘಿಸಿದ ಮೋದಿ/ ಎಲ್ಲರೂ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಬೇಕು/ ಮೇಕ್ ಇನ್ ಇಂಡಿಯಾಕ್ಕೆ ಉತ್ಪನ್ನಗಳಿಗೆ ಜಾಗತಿಕ ಒಪ್ಪಿಗೆ ಸಿಗಬೇಕು
ನವದೆಹಲಿ (ಜ. 04) ಕೊರೋನಾ ಲಸಿಕೆ ಡ್ರೈ ರನ್ ಆರಂಭವಾಗಿದ್ದು ಪ್ರಧಾನಿ ಮೋದಿ ವಿಶ್ಲೇಷಣೆ ಮಾಡಿದ್ದಾರೆ. ಭಾರತ ವಿಶ್ವದಲ್ಲೇ ಅತಿದೊಡ್ಡ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಹೇಳಿದ್ದು ರೋಗದ ವಿರುದ್ಧ ಹೇಗೆ ಹೋರಾಟ ಮಾಡಬೇಕು ಎಂಬುದನ್ನು ಮತ್ತೆ ಹೇಳಿದ್ದಾರೆ.
"
ಭಾರತದ ವಿಜ್ಞಾನಿಗಳ ಕಾರ್ಯ ಶ್ಲಾಘನೆ ಮಾಡಿದ ಮೋದಿ ಒಂದು ವರ್ಷದಿಂದ ಜಗತ್ತನ್ನೇ ತಲ್ಲಣ ಮಾಡುತ್ತಿರುವ ಕೊರೋನಾ ದೂರವಾಗುವ ಕಾಲವೂ ಹತ್ತಿರದಲ್ಲಿದೆ ಎಂದಿದ್ದಾರೆ.
ಎರಡು ಲಸಿಕೆಗೆ ಒಪ್ಪಿಗೆ ಸಿಕ್ಕಿದರೂ ಒಂದೇ ಬಳಕೆ
ಮೇಕ್ ಇನ್ ಇಂಡಿಯಾ ಬಗ್ಗೆಯೂ ಮಾತನಾಡಿದ ಮೋದಿ ಜಗತ್ತಿನ ಎಲ್ಲ ಕಡೆ ನಮ್ಮ ಉತ್ಪನ್ನ ಇರಬೇಕು ಎಂಬುದಲ್ಲ.. ಆದರೆ ನಾವು ತಯಾರು ಮಾಡುವ ಉತ್ಪನ್ನ ಜನರ ಮನಸ್ಸು ಮತ್ತು ಹೃದಯ ಗೆಲ್ಲಬೇಕು ಎಂದು ಹೇಳಿದ್ದಾರೆ.
ನ್ಯಾಷನಲ್ ಮೆಟ್ರಾಲಜಿ ಸಮಾವೇಶದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಮಾತ್ರವಲ್ಲದೆ ಜಾಗತಿಕ ಅಂಗೀಕಾರ ದೊರೆಯುವಂತೆ ಆಗಬೇಕು ಎಂದರು.
ಆತ್ಮ ನಿರ್ಭರ್ ಭಾರತ್ ಅಡಿಯಲ್ಲಿ ಜಗತ್ತಿನಲ್ಲೇ ಅತಿದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ಶುರುವಾಗಿದ್ದು ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಮನವಿ ಮಾಡಿಕೊಂಡರು.
