Asianet Suvarna News Asianet Suvarna News

ಭಾರತ ನಿರಂತರ ಹೋರಾಡುತ್ತಿರುವ ಭಯೋತ್ಪಾದನೆ ವಿರುದ್ಧ ವಿಶ್ವವೇ ಒಗ್ಗಟ್ಟಾಗಬೇಕಿದೆ: ಮೋದಿ!

ಅತ್ಯಂತ ಭೀಕರ ಹಾಗೂ ಘನಘೋರ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನ ಮಾಡಿದೆ ಅನ್ನೋದು ಇದೀಗ ಜಗಜ್ಜಾಹೀರಾಗಿದೆ. ಇಷ್ಟು ದಿನ ನಮಗೇನು ಸಂಬಂಧವಿಲ್ಲ ಎಂದಿದ್ದ ಪಾಕಿಸ್ತಾನ ಇದೀಗ ಸಂಸತ್ತಿನಲ್ಲೇ  ಪುಲ್ವಾಮಾ ದಾಳಿ ಕುರಿತು ಸತ್ಯ ಹೊರಹಾಕಿದೆ. ಗುಜರಾತ್ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಭಯೋತ್ಪಾದಕತೆ ಹಾಗೂ ಭಾರತದಲ್ಲಿನ ರಾಜಕೀಯ ಕುತಂತ್ರಕ್ಕೆ ಇದೀಗ ತಕ್ಕ ಉತ್ತರ ನೀಡಿದ್ದಾರೆ.
 

World need to unite against terrorism PM modi during  Gujarat visit ckm
Author
Bengaluru, First Published Oct 31, 2020, 9:17 PM IST

ಸಬರಮತಿ(ಅ.31):  ಒಂದಲ್ಲ, ಎರಡಲ್ಲ, 40 ಸಿಆರ್‌ಪಿಎಫ್ ಯೋಧರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಈ ನೋವು ಭಾರತೀಯರಿಂದ ಯಾವತ್ತೂ ಮಾಸುವುದಿಲ್ಲ. ಇಷ್ಟು ದಿನ ತನಗೆ ಸಂಬಂಧವಿಲ್ಲ ಎಂದು ಬೊಗಳೇ ಬಿಡುತ್ತಿದ್ದ ಪಾಕಿಸ್ತಾನ ಇದೀಗ ಸಂಸತ್ತಿನಲ್ಲೇ ಪುಲ್ವಾಮಾ ದಾಳಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಮುಗಿಸಿದೆ ಎಂದು ಹೇಳಿಕೊಂಡಿದೆ.  ಇದೀಗ ಗುಜರಾತ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪುಲ್ವಾಮಾ ದಾಳಿ ಹಾಗೂ ಭಯೋತ್ಪಾದಕತೆ ಕುರಿತು ಪಾಕಿಸ್ತಾನ ಹಾಗೂ ಈ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡಿದ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಪುಲ್ವಾಮಾದಲ್ಲಿ ರಾಜಕೀಯ ಹುಡುಕಿದರು, ಮೌನವಾಗಿ ಸಹಿಸಿಕೊಂಡೆ: ಭಾವುಕರಾದ ಮೋದಿ

ಭಯೋತ್ಪಾದನೆ ವಿರುದ್ಧ ವಿಶ್ವವೇ ಒಗ್ಗಟ್ಟಾಗಿ ಹೋರಾಟಬೇಕಿದೆ. ಭಾರತ ನಿರಂತರವಾಗಿ ಭಯೋತ್ವಾದನೆ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದೆ. ಭಯೋತ್ಪಾದನೆ ಹಾಗೂ ಹಿಂಸೆಯಿಂದ ಯಾರಿಗೂ ಒಳಿತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸರ್ದಾರ್ ವಲ್ಲಭಾಯಿ ಪಟೇಲ್ ಜಯಂತಿ ಆಚರಣೆ ವೇಳೆ ಮೋದಿ ಈ ಮಾತು ಹೇಳಿದ್ದಾರೆ.

ಪುಲ್ವಾಮಾ;  'ಆರೋಪ ಮಾಡಿದ್ದವರು ಮೋದಿ ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಿ

ಪುಲ್ವಾಮಾ ದಾಳಿ ಯಾರೂ ಮರೆತಿಲ್ಲ. ನೋವು ಮಾಸುವುದಿಲ್ಲ. ಆದರೆ ಕೆಲವರಿಗೆ ಮಾತ್ರ ಇದ್ಯಾವುದರ ಪರಿವೇ ಇಲ್ಲ. ಪುಲ್ವಾಮಾ ದಾಳಿಯ ಬೆನ್ನಲ್ಲೇ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡಿದರು. ಇದೀಗ ಸತ್ಯ ಬಹಿರಂಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Follow Us:
Download App:
  • android
  • ios