Asianet Suvarna News Asianet Suvarna News

World Lion Day: ಟ್ವೀಟ್‌ ಮಾಡಿ ಹಳೇ ದಿನಗಳನ್ನು ನೆನಪಿಸಿಕೊಂಡ ಪಿಎಂ ಮೋದಿ!

* ವಿಶ್ವ ಸಿಂಹಗಳ ದಿನ, ಕಾಡಿನ ರಾಜನ ಸಂರಕ್ಷಣೆಗೆ ಮೋದಿ ಪಣ

* ಟ್ವೀಟ್‌ ಮಾಡಿ ಹಳೇ ದಿನಗಳನ್ನು ನೆನಪಿಸಿಕೊಂಡ ಪಿಎಂ ಮೋದಿ

* ಸಿಂಹಗಳ ಸಂಖ್ಯೆ ಏರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಮೋದಿ

World Lion Day Last few years saw steady increase in India lion population says PM Modi pod
Author
Bangalore, First Published Aug 10, 2021, 4:17 PM IST

ಅಹಮದಾಬಾದ್(ಆ.10): World Lion Day ಪ್ರಯುಕ್ತ ಟ್ವೀಟ್ ಮಾಡಿರುವ ಮೋದಿ, ಭಾರತದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚುತ್ತಿರುವ ವಿಚಾರವಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪಿಎಂ ಮೋದಿ 'ಸಿಂಹ ಕಾಡಿನ ರಾಜ ಹಾಗೂ ಧೈರ್ಯಶಾಲಿ ಪ್ರಾಣಿ. ಭಾರತ ಏಷಿಯಾಟಿಕ್ ಸಿಂಹಗಳ ತವರು ಎಂಬುವುದು ಹೆಮ್ಮೆಯ ವಿಚಾರ. ವಿಶ್ವ ಸಿಂಹ ದಿನದಂದು, ಸಿಂಹ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಿರುವ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಕಳೆದ ಕೆಲ ವರ್ಷಗಳಲ್ಲಿ ಭಾರತದಲ್ಲಿ ಸಿಂಹಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದು ಬಹಳ ಖುಷಿಯ ವಿಚಾರ ಎಂದಿದ್ದಾರೆ.

ಗುಜರಾತ್ ನೆನಪಿಸಿಕೊಂಡ ಮೋದಿ

ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಿಂಹಗಳ ಸಂರಕ್ಷಣೆ ಸಂಬಂಧ ಸಾಕಷ್ಟು ಕೆಲಸ ಮಾಡಿದ್ದರು. ಈ ಬಗ್ಗೆ ಅವರು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದು, ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ, ಅದು ಗಿರ್ ಸಿಂಹಗಳಿಗೆ ಸುರಕ್ಷಿತ ಆವಾಸ ಸ್ಥಾನವಾಗಿ ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ನನಗೆ ಸಿಕ್ಕಿತು. ಈ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಸ್ಥಳೀಯ ಸಮುದಾಯ ಮತ್ತು ಸಿಂಹಗಳ ಆವಾಸ ಸ್ಥಾನವನ್ನು ರಕ್ಷಿಸಲು ಮತ್ತು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಬಹಳಷ್ಟು ಸಹಾಯಕವಾಯ್ತು ಎಂದಿದ್ದಾರೆ.

ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನ ಆಚರಣೆ

ಕಾಡಿನ ರಾಜ ಸಿಂಹಗಳ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ವನ್ಯಜೀವಿ ಅಂದರೆ ಸಿಂಹಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

ನಿಮಗಿದು ತಿಳಿದಿದೆಯಾ?

2015 ರಲ್ಲಿ ಭಾರತದಲ್ಲಿ 523 ಸಿಂಹಗಳಿದ್ದು, ಅದು 2020 ರಲ್ಲಿ 674 ಕ್ಕೆ ಏರಿದೆ. ಅಂದರೆ, ಶೇ. 29ರಷ್ಟು ಏರಿಕೆಯಾಘಿದೆ. ಇದಕ್ಕೆ ಸಂಬಂಧಿಸಿದ ವರದಿಯಲ್ಲಿ 2015 ರಲ್ಲಿ 22,000 ಚದರ ಕಿಮೀ ಇದ್ದ ಸಿಂಹಗಳ ಸಂಖ್ಯೆಯು 2020 ರಲ್ಲಿ 30,000 ಚದರ ಕಿಮೀಗೆ ವ್ಯಾಪಿಸಿದೆ ಎಂದು ಉಲ್ಲೇಖಿಸಲಾಗಿದೆ. ಇನ್ನು ಕೇವಲ ಗಿರ್ ಬಗ್ಗೆ ಮಾತ್ರ ಹೇಳುವುದಾದರೆ, ಇಲ್ಲಿ ಏಷ್ಯಾಟಿಕ್ ಸಿಂಹಗಳು ಮಾತ್ರ ಕಂಡುಬರುತ್ತವೆ. ಏಷಿಯಾಟಿಕ್ ಸಿಂಹಗಳಿಗೆ ಪ್ರಸಿದ್ಧವಾದ ಗಿರ್ ರಾಷ್ಟ್ರೀಯ ಉದ್ಯಾನವನವು 412 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ.

Follow Us:
Download App:
  • android
  • ios