Asianet Suvarna News Asianet Suvarna News

ಪ್ರಪಂಚದ ಅತಿ ಎತ್ತರದ ರಸ್ತೆ ಮಾರ್ಗ ಉದ್ಘಾಟನೆ!

* ಲೇಹ್‌- ಪ್ಯಾಂಗಾಂಗ್‌ ಸರೋವರ ಸಂಪರ್ಕ ರಸ್ತೆ

* ಸಮುದ್ರ ಮಟ್ಟದಿಂದ 18,600 ಅಡಿ ಎತ್ತರದ ರಸ್ತೆ

* ಪ್ರಪಂಚದ ಅತಿ ಎತ್ತರದ ರಸ್ತೆ ಮಾರ್ಗ ಉದ್ಘಾಟನೆ

World highest motorable road at 18600 ft inaugurated in Ladakh pod
Author
Bangalore, First Published Sep 1, 2021, 8:51 AM IST

ಲೇಹ್‌(ಸೆ.01): ಲಡಾಖ್‌ನ ಲೇಹ್‌ ಮತ್ತು ಪ್ಯಾಂಗಾಂಗ್‌ ಸರೋವರವನ್ನು ಜೋಡಿಸುವ, ಸಮುದ್ರಮಟ್ಟದಿಂದ 18,600 ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ರಸ್ತೆಯನ್ನು ಮಂಗಳವಾರ ಉದ್ಘಾಟಿಸಲಾಯಿತು. ಲಡಾಖ್‌ ಸಂಸದ ಜ್ಯಾಮ್ಯಾಂಗ್‌ ತ್ಸೇರಿಂಗ್‌ ನ್ಯಾಮ್‌ಗೆಲ್‌ ರಸ್ತೆ ಉದ್ಘಾಟಿಸಿದರು.

ಈ ರಸ್ತೆಯನ್ನು ಭಾರತೀಯ ಸೇನೆಯ 58ನೇ ಇಂಜಿನಿಯರ್‌ ರೆಜಿಮೆಂಟ್‌ ನಿರ್ಮಾಣ ಮಾಡಿದೆ. ಈ ರಸ್ತೆ ಖೇಲಾ ಪಾಸ್‌ ಮೂಲಕ ಹಾದು ಹೋಗುವ ಮೂಲಕ 41 ಕಿ.ಮೀನಷ್ಟುಪ್ರಯಾಣದ ದೂರವನ್ನು ಕಡಿಮೆ ಮಾಡಿದೆ. ‘ಇಂದು ಉದ್ಘಾಟನೆ ಮಾಡಿರುವ ಈ ರಸ್ತೆ ಪ್ರಪಂಚದಲ್ಲೆ ಅತೀ ಎತ್ತರದ ರಸ್ತೆ ಮಾರ್ಗ ಮಾರ್ಗವಾಗಲಿದೆ. ಪ್ರವಾಸಿಗರು ಸಹಾ ಈ ಎತ್ತರದ ರಸ್ತೆಯ ಮೂಲಕ ಪ್ರಯಾಣ ಮಾಡುವ ಮೂಲಕ ಅಪರೂಪವಾದ ಔಷಧಿಯ ಸಸ್ಯಗಳನ್ನು ನೋಡಬಹುದು. ಇಲ್ಲಿ ಬೀಳುವ ಹಿಮ, ಅಲೆಮಾರಿಗಳ ಬದುಕು, ಸರೋವರಗಳು ಆಕರ್ಷಕ ತಾಣಗಳಾಗಲಿವೆ’ ಎಂದು ನ್ಯಾಮ್‌ಗೆಲ್‌ ಹೇಳಿದರು.

ಇಲ್ಲಿಯವರೆಗೆ 18,380 ಅಡಿ ಎತ್ತರದಲ್ಲಿದ್ದ ಖಾರ್ದುಂಗಲಾ ಪಾಸ್‌ ಜಗತ್ತಿನ ಎತ್ತರದ ರಸ್ತೆ ಮಾರ್ಗ ಎನ್ನುವ ಕೀರ್ತಿ ಹೊಂದಿತ್ತು.

Follow Us:
Download App:
  • android
  • ios