ರಾಮ ಮಂದಿರ ಉದ್ಘಾಟನೆ ವಿಶ್ವಾದ್ಯಂತ ಹಬ್ಬದ ವಾತಾವರಣ ನಿರ್ಮಿಸಿದೆ. ಇದೀಗ ಬ್ಯಾಂಗ್‌ಕಾಕ್‌ನ 13,000 ಅಡಿ ಎತ್ತರದ ಆಗಸದಲ್ಲಿ ಜೈ ಶ್ರೀರಾಮ ಬಾವುಟ ಹಾರಾಡಿದೆ. ಮಹಿಳಾ ಸ್ಕೈಡೈವರ್ ವಿಡಿಯೋ ವೈರಲ್ ಆಗಿದೆ.
ಬ್ಯಾಂಗ್‌ಕಾಕ್(ಜ.04) ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ಜನವರಿ 22ರಂದು ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಹಾಗೂ ಉದ್ಘಾಟನೆ ನಡೆಯಲಿದೆ. ಈ ಸಂಭ್ರಮ ದೇಶ ವಿದೇಶದಲ್ಲಿ ಮನೆ ಮಾಡಿದೆ. ಇದೀಗ ಬ್ಯಾಂಗ್‌ಕಾಕ್‌ನಲ್ಲಿ ಮಹಿಳಾ ಸ್ಕೈಡೈವರ್ 13,000 ಅಡಿ ಎತ್ತರದಲ್ಲಿ ಜೈ ಶ್ರೀರಾಮ ಬಾವುಟ ಹಾರಿಸಿದ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದ ಮಹಿಳೆ ಥಾಯ್ಲೆಂಡ್‌ನ ಬ್ಯಾಂಗ್‌ಕಾಕ್‌ನಲ್ಲಿನ ಸ್ಕೈಡೈವ್ ಮೂಲಕ ಜೈ ಶ್ರೀರಾಮ ಭಾವುಟ ಹಾರಿಸಿ ಹೊಸ ಸಾಧನೆ ಮಾಡಿದ್ದಾರೆ.
22 ವರ್ಷದ ಯುವತಿ ಅನಾಮಿಕಾ ಶರ್ಮಾ ಬ್ಯಾಂಗ್‌ಕಾಕ್‌ನಲ್ಲಿ ಸ್ಕೈಡೈವ್ ಸಾಧನೆ ಮಾಡಿದ್ದಾರೆ. 13,000 ಅಡಿ ಎತ್ತರದಿಂದ ಶರ್ಮಾ ಜಿಗಿದಿದ್ದಾರೆ. ಸ್ಕೈ ಡೈವ್ ಮೂಲಕ ಆಗಸದಲ್ಲಿ ಹಾರಾಡಿದ ಅನಾಮಿಕ ಶರ್ಮಾ, ಜೈ ಶ್ರೀರಾಮ್ ಎಂದು ಬರೆದಿರುವ ಬಾವುಟವನ್ನು ಹಾರಿಸಿದ್ದಾರೆ. 13,000 ಅಡಿ ಎತ್ತರದಲ್ಲಿ ಶ್ರೀರಾಮ ಜಪ ಮೊಳಗಿದೆ.
ರಾಮ ಮಂದಿರ ಉದ್ಘಾಟನೆ ಮಾಡಲು ಮೋದಿ ಯಾರು? ಕೆರಳಿದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್!
ನನ್ನ ಧರ್ಮ ಹಾಗೂ ಸ್ಕೈಡೈವ್ ಎರಡನ್ನೂ ಜೊತೆ ಜೊತೆಯಾಗಿ ತೆಗೆದುಕೊಂಡು ಹೋಗುವುದು ನನ್ನ ಉದ್ದೇಶವಾಗಿತ್ತು. ಇದನ್ನು ಸಾಧಿಸಿರುವುದು ಅತೀವ ಸಂತಸವಾಗಿದೆ ಎಂದು ಅನಾಮಿಕ ಶರ್ಮಾ ಹೇಳಿದ್ದಾರೆ. ಯುವತಿ ಸಾಧನೆಯನ್ನು ಎಲ್ಲರು ಕೊಂಡಾಡಿದ್ದಾರೆ. ಭಾರತದ ಗರಿಮೆ ಜೊತೆಗೆ ಅಸ್ಮಿತೆ, ಸಂಸ್ಕೃತಿಯನ್ನು 13,000 ಅಡಿ ಎತ್ತರದಲ್ಲಿ ಪ್ರಚುರಪಡಿಸಿದ ನಿಮ್ಮ ಸಾಧನೆಗೆ ಸಲಾಂ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ರಾಮ ಮಂದಿರ ಉದ್ಘಾಟನೆ ಯನ್ನು ರಾಮ ಭಕ್ತರು ತಮ್ಮದೇ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಹಲವರು ರಾಮ ಮಂದಿರಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದರೆ, ಮತ್ತೆ ಕೆಲವರು ಐತಿಹಾಸಿಕ ಅಗರಬತ್ತಿ, 600 ಕೆಜಿ ತೂಕದ ಗಂಟೆ ಸೇರಿದಂತೆ ಹಲವು ಕೊಡುಗೆ ನೀಡುತ್ತಿದ್ದಾರೆ. ಇನ್ನು ವಿದೇಶದಲ್ಲಿ ಉದ್ಘಾಟನೆ ಹಿನ್ನಲೆಯಲ್ಲಿ ರಾಮಜಪ, ರ್ಯಾಲಿ, ಹಿಂದೂ ಮಂದಿರಗಳಲ್ಲಿ ರಾಮ ಭಜನೆಗಳು ನಡೆಯುತ್ತಿದೆ.
ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಜೈಪುರದ ಮದ್ಯ- ಮಾಂಸದ ಅಂಗಡಿ ಬಂದ್!
ಜನವರಿ 22ರಂದು ಆಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಪ್ರಾಣಪ್ರತಿಷ್ಠೆ ಬಳಿಕ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಾಣಪ್ರತಿಷ್ಠೆ ನೆರವೇರಿಸಲಿದಿದ್ದಾರೆ. ಈಗಾಗಲೇ ಗಣ್ಯರನ್ನು ಆಹ್ವಾನಿಸುವ ಕೆಲಸ ನಡೆಯುತ್ತಿದೆ. ಸಾಧು ಸಂತರ, ಸ್ವಾಮೀಜಿಗಳು, ಗಣ್ಯರು ಸೇರಿದಂತೆ ಸಾವಿರಾರು ವಿಶೇಷಿತರನ್ನು ಆಹ್ವಾನಿಸಲಾಗಿದೆ.
