ನವದೆಹಲಿ(ಫೆ. 19): ಚೀನಾ ಸೇನೆ ಇರಲಿ, ಪಾಕಿಸ್ತಾನದ ಸೇನೆ ಇರಲಿ ಅವುಗಳಿಗೆ ಅರ್ಥ ಆಗೋದು ಭಾರತದ ಸರ್ಕಾರ ಮತ್ತು ಸೇನೆಯ ಆಕ್ರಮಣಕಾರಿ ವ್ಯಾಕರಣದ ಭಾಷೆ ಒಂದೇ. ಶಾಂತಿ ಮಾತುಕತೆ, ನೆರೆಹೊರೆ ಮೈತ್ರಿ ಯಾವುವೂ ಎರಡೂ ದೇಶಗಳಿಗೆ ಅರ್ಥ ಆಗುವುದಿಲ್ಲ.

10 ತಿಂಗಳ ಹಿಂದೆ ಲಡಾಖ್‌ನ ಪ್ಯಾಂಗಾಂಗ್‌ ಸರೋವರದ ಉತ್ತರ ದಡದಲ್ಲಿ 8ನೇ ಪಾಯಿಂಟ್‌ನಿಂದ 4ನೇ ಪಾಯಿಂಟ್‌ವರೆಗೆ ಮುಂದೆ ಬಂದಿದ್ದ ಚೀನಾ, ಭಾರತದ ಸೇನೆ ದಕ್ಷಿಣ ದಡದಲ್ಲಿ ಇನ್ನೂ ಎತ್ತರದ ಪ್ರದೇಶಗಳನ್ನು ಅಕ್ರಮಿಸಿಕೊಂಡು ಕುಳಿತು ಕಣ್ಣಿಡ ತೊಡಗಿದಾಗ ಏಕಾಏಕಿ 8 ಕಿಲೋಮೀಟರ್‌ ಹಿಂದೆ ಹೋಗಲು ಒಪ್ಪಿಕೊಂಡಿದೆ.

ರೈತರ ಜೊತೆ ನಿಂತ ಮಾತುಕತೆ, ಎಲ್ಲಿಗೆ ಹೋಗಿ ಮುಟ್ಟಲಿದೆ ಹೋರಾಟದ ಕತೆ.?

ಈಗ ಆಗಿರುವ ಒಪ್ಪಂದದ ಪ್ರಕಾರ, ಭಾರತ ಪಾಯಿಂಟ್‌ ಮೂರರ ಧಾನ್‌ಸಿಂಗ್‌ ಥಾಪಾ ಬೇಸ್‌ನ ಮುಂದೆ ಹೋಗುವಂತಿಲ್ಲ, ಚೀನಾ ಫಿಂಗರ್‌ 8ರಿಂದ ಈ ಕಡೆ ಬರುವಂತಿಲ್ಲ. 3ರಿಂದ 8 ಪಾಯಿಂಟ್‌ವರೆಗೆ ಎರಡೂ ಕಡೆ ಸೈನಿಕರಿಗೆ ಪೆಟ್ರೋಲಿಂಗ್‌ ನಿರ್ಬಂಧವಿದೆ. ಇದರಿಂದ ಆಗುವ ತತ್‌ಕ್ಷಣದ ಲಾಭ ಎಂದರೆ ಹೋದ ವರ್ಷ ಆದಂತೆ ಕೈಕೈ ಮಿಸಲಾಯಿಸುವುದು, ಕಲ್ಲು ತೂರಿಕೊಳ್ಳುವುದು ತಪ್ಪುತ್ತದೆ. ಈಗ ಒಂದು ಹೆಜ್ಜೆ ಹಿಂದೆ ಹೋದ ಚೀನಾ ಯಾವಾಗ ಎರಡು ಹೆಜ್ಜೆ ಮುಂದೆ ಇಡುತ್ತದೆ ಗೊತ್ತಿಲ್ಲ. ಹೀಗಾಗಿ ಲಡಾಖ್‌ನಲ್ಲಿ ಭಾರತೀಯ ಸೇನಾ ಜಮಾವಣೆಯೇನೂ ಸದ್ಯಕ್ಕೆ ಕಡಿಮೆ ಆಗುವುದಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ