Asianet Suvarna News Asianet Suvarna News

ಮೀಸಲಾತಿಯಿಂದ ಲಿಪ್‌ಸ್ಟಿಕ್, ಬಾಬ್ ಕಟ್ ಮಹಿಳೆಯರು ರಾಜಕೀಯಕ್ಕೆ, ಇಂಡಿ ಒಕ್ಕೂಟ ನಾಯಕನ ವಿವಾದ!

ಮೋದಿ ಸರ್ಕಾರ ಮಹಿಳಾ ಮೀಸಲಾತಿ ತಂದಿದೆ. ಇದರಿಂದ ಲಿಪ್‌ಸ್ಟಿಕ್ ಮೆತ್ತಿಕೊಂಡ, ಬಾಬ್ ಕಟ್ ಮಾಡಿದ ಹುಡುಗಿಯರು ರಾಜಕೀಯಕ್ಕೆ ಬರ್ತಾರೆ. ಈ ಮೀಸಲಾತಿ ಬಿಲ್‌ನಿಂದ ಬೇರೇನೂ ಉಪಯೋಗವಿಲ್ಲ ಎಂದು ಇಂಡಿ ಒಕ್ಕೂಟದ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Women reservation bill allow Lipstick bob cut hair girls to politics says RJD leader ckm
Author
First Published Sep 30, 2023, 3:49 PM IST

ಪಾಟ್ನಾ(ಸೆ.30) ಮೋದಿ ಸರ್ಕಾರದ ಮಹಿಳಾ ಮೀಸರಾತಿ ಐತಿಹಾಸಿಕ ಮಸೂದೆ ಇದೀಗ ಕಾನೂನಾಗಿದೆ. ಆದರೆ ಈ ಕಾನೂನಿಗೆ ಮೇಲ್ನೆಟಕ್ಕೆ ಇಂಡಿ ಒಕ್ಕೂಟದ ಬಹುತೇಕ ಪಕ್ಷಗಳು ಸಮ್ಮತಿ ಸೂಚಿಸಿದರೂ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದೆ. ಇದೀಗ ಈ ಅಸಮಾಧಾನ ಸ್ಫೋಟಗೊಂಡಿದೆ. ಮಹಿಳಾ ಮೀಸಲಾತಿ ಕಾನೂನಿನಿಂದ ಲಿಪ್‌ಸ್ಟಿಕ್ ಮೆತ್ತಿಕೊಂಡ ಮಹಿಳಯರು, ಬಾಬ್ ಕಟ್ ಮಾಡಿದ ಹುಡುಗಿಯರು ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ. ಈ ಬಿಲ್ ಮಸೂದೆ ಇಷ್ಟಕ್ಕೆ ಸೀಮಿತ ಎಂದು ಇಂಡಿ ಒಕ್ಕೂಟದ ಮಿತ್ರ ಪಕ್ಷ,ಲಾಲೂ ಪ್ರಸಾದ್ ಯಾದವ್ ಆಪ್ತ ಆರ್‌ಜೆಡಿ ಹಿರಿಯ ನಾಯಕ ಅಬ್ದುಲ್ ಬಾರಿ ಸಿದ್ದಿಕಿ ಹೇಳಿದ್ದಾರೆ.

ಮುಜಾಫುರ್‌ಪುರ್‌ನಲ್ಲಿ ಆರ್‌ಜೆಡಿ ಪಕ್ಷದ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಅಬ್ದುಲ್ ಬಾರಿ ಸಿದ್ದಿಕಿ, ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬಿಲ್ ಮಂಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಮತಕ್ಕಾಗಿ ಬಿಲ್ ಮಂಡಿಸಲಾಗಿದೆ. ಈ ಬಿಲ್‌ನಿಂದ ಪ್ರಯೋಜವೇನು ಇಲ್ಲ. ಕೇವಲ ಲಿಪ್‌ಸ್ಟಿಕ್, ಬಾಬ್ ಕಟ್ ಹುಡುಗಿಯರು ಕೆಲಸಕ್ಕೆ ಬರ್ತಾರೆ ಎಂದು ಅಬ್ದುಲ್ ಬಾರಿ ಸಿದ್ದಿಕಿ ಆರೋಪಿಸಿದ್ದಾರೆ.

 

ಶ್ರಾವಣದಲ್ಲಿ ಅಶ್ಲೀಲ ವಿಡಿಯೋ ನೋಡುದಿಲ್ಲವೇ? ತಿರುಗೇಟು ನೀಡಿ ಪೇಚಿಗೆ ಸಿಲುಕಿದ INDIA ಮೈತ್ರಿ ಪಕ್ಷ!

ಅಬ್ದುಲ್ ಬಾರಿ ಸಿದ್ದಿಕಿ ವಿವಾದಾತ್ಮಕ ಹೇಳಿಕೆಯಿಂದಲೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಯುವ ಸಮೂಹ ವಿದೇಶದಲ್ಲಿ ಅಧ್ಯಯನ ಮಾಡಿ, ವಿದೇಶದಲ್ಲೇ ಕೆಲಸಕ್ಕೆ ಸೇರಿ ಅಲ್ಲೆ ಉಳಿಯಬೇಕು. ಭಾರತಕ್ಕೆ ಹಿಂತಿರುಗಬೇಡಿ ಎಂಬ ಹೇಳಿಕೆ ನೀಡಿದ್ದರು. ದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲ. ಮುಸ್ಲಿಮರು ಬದುಕುವುದೇ ಕಷ್ಟವಾಗಿದೆ. ನನ್ನ ಪುತ್ರ ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಮಗಳು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಒದುತ್ತಿದ್ದಾಳೆ. ಮುಸ್ಲಿಮರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳಿ ಎಂದು ಕರೆ ನೀಡಿದ್ದರು.

ಅಬ್ದುಲ್ ಬಾರಿ ಸಿದ್ದಿಕಿ ಲಾಲೂ ಪ್ರಸಾದ್ ಯಾವದ್ ಅವರ ಆರ್‌ಜೆಡಿ ಪಕ್ಷದ ಹರಿಯ ನಾಯಕ. ಲಾಲೂ ಪ್ರಸಾದ್‌ಗೆ ಆಪ್ತರಾಗಿರುವ ಅಬ್ದುಲ್ ಬಾರಿ ಹೇಳಿಕೆ ಇದೀಗ ಇಂಡಿ ಒಕ್ಕೂಟದ ಮಿತ್ರ ಪಕ್ಷಗಳಿಗೆ ತಲೆನೋವಾಗಿದೆ. ಲೋಕಸಭಾ ಚುನಾವಣೆಗೆ ಇಂಡಿ ಒಕ್ಕೂಟ ಮಾಡಿಕೊಳ್ಳಲಾಗಿದೆ. ಬಿಜೆಪಿ ಮಣಿಸಲು ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಲಾಗಿದೆ. ಆದರೆ ಒಬ್ಬೊಬ್ಬ ನಾಯಕರ ಹೇಳಿಕೆ ಇದೀಗ ಮೈತ್ರಿಗೆ ಸಂಕಷ್ಟ ತರುತ್ತಿದೆ. ಇತ್ತೀಚೆಗೆ ತಮಿಳುನಾಡು ಸಿಎಂ ಪುತ್ರ, ಸಚಿವ ಉದನಿಧಿ ಸ್ಟಾಲಿನ್ ಸನಾತನ ಧರ್ಮ ವನ್ನು ಕೊರೋನಾ ರೀತಿ ನಾಶ ಮಾಡಬೇಕು ಎಂದು ಕರೆಕೊಟ್ಟು ಇಂಡಿ ಒಕ್ಕೂಟಕ್ಕೆ ತೀವ್ರ ತಲೆನೋವು ತಂದಿಟ್ಟಿದ್ದರು. 

'ಇಸ್ರೋ ವಿಜ್ಞಾನಿಗಳು ಮೋದಿಯನ್ನು ಸೂರ್ಯನತ್ತ ಕಳಿಸಬೇಕು' ಇಂಡಿ ಒಕ್ಕೂಟದ ಸಭೆ ಬಳಿಕ ಲಾಲೂ ಪ್ರಸಾದ್‌ ಹೇಳಿಕೆ!
 

Follow Us:
Download App:
  • android
  • ios