ತಿರುವನಂತಪುರಂ(ನ.30): 2018ರಲ್ಲಿ ಗರ್ಭವತಿ ಆಗಿದ್ದಾಗ ಸಿಪಿಎಂ ಮುಖಂಡನೊಬ್ಬನಿಂದ ಹಲ್ಲೆಗೆ ಒಳಗಾಗಿ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡಿದ್ದ ಮಹಿಳೆ ಇದೀಗ ಕಲ್ಲಿಕೋಟೆಯ ಬಾಲುಸ್ಸೆರಿ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಳೆ.

ಜ್ಯೋತ್ಸಾ$್ನ ಜೋಸ್‌ ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದಾಗ ಸಿಪಿಎಂ ಮುಖಂಡ ಥಾಂಬೆ ಎಂಬಾತ ಹೊಟ್ಟೆಯ ಮೇಲೆ ಒದ್ದು ಹಲ್ಲೆ ನಡೆಸಿದ್ದ. ಹೀಗಾಗಿ ಆಕೆಗೆ ಗರ್ಭಪಾತವಾಗಿತ್ತು.

ಸಿಪಿಎಂನ ಕ್ರೂರ ಆಡಳಿತಕ್ಕೆ ಕೊನೆ ಹಾಡುವ ನಿಶ್ಚಯದೊಂದಿಗೆ ಜೋಸ್‌ರನ್ನು ಬಿಜೆಪಿ ಬಾಲುಸ್ಸೆರಿ ಪಂಚಾಯತ್‌ ಚುನಾವಣೆಯಲ್ಲಿ ಕಣಕ್ಕಿಳಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಟ್ವೀಟ್‌ ಮಾಡಿದ್ದಾರೆ.