Asianet Suvarna News Asianet Suvarna News

ಮನೆಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸ್ತೀರಾ? ಎಚ್ಚರ, ಚಿಕ್ಕ ಎಡವಟ್ಟು ಜೀವಕ್ಕೇ ಕುತ್ತು!

* ಮನೆಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುವವರೇ ಎಚ್ಚರ

* ಮಹಿಳೆಯ ಪ್ರಾಣವನ್ನೇ ಕಸಿದ ಆಕ್ಸಿಜನ್ ಕಾನ್ಸಂಟ್ರೇಟರ್

* ಹೇಗೆ? ಏನು? ಇಲ್ಲಿದೆ ವಿವರ

Woman killed husband critical after oxygen concentrator explodes in Rajasthan Gangapur pod
Author
Bangalore, First Published Jul 18, 2021, 3:20 PM IST

ಜೈಪುರ(ಜು.18): ರಾಜಸ್ಥಾನದ ಗಂಗಾಪುರದ ಮನೆಯಲ್ಲಿ ಕೆಟ್ಟು ಹೋದ ಆಕ್ಸಿಜನ್ ಕಾನ್ಸಂಟ್ರೇಟರ್ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಅನ್ವಯ, ಐಎಎಸ್ ಹರ್ ಸಹೈ ಮೀನಾ ಅವರ ಸಹೋದರ ಸುಲ್ತಾನ್ ಸಿಂಗ್ ಕೊರೋನಾದಿಂ ಕಳೆದ ಎರಡು ತಿಂಗಳಿನಿಂದ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಉಸಿರಾಟವಾಡಲು ಸಹಾಯವಾಗಲಿ ಎಂದು ಆಮ್ಲಜನಕ ಸಾಂದ್ರತೆಯನ್ನು ಜೋಡಿಸಲಾಗಿತ್ತು. ಅವರು ಮನೆಯಲ್ಲೇ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುತ್ತಿದ್ದರು. ಅವರ ಪತ್ನಿಯೇ ಸಂತೋಷ್ ಮೀನಾ ಅವರ ಆರೈಕೆ ಮಾಡುತ್ತಿದ್ದರು.

ಲೈಬ್ ಆನ್ ಮಾಡುತ್ತಿದ್ದಂತೆಯೇ ಸ್ಫೋಟಗೊಂಡ ಆಕ್ಸಿಜನ್ ಕಾನ್ಸಂಟ್ರೇಟರ್

ಸಂತೋಷ್ ಮೀನಾ ಶನಿವಾರ ಬೆಳಿಗ್ಗೆ ಲೈಟ್ ಆನ್ ಮಾಡಿದ ಮರುಕ್ಷಣವೇ ಆಕ್ಸಿಜನ್ ಕಾನ್ಸಂಟ್ರೇಟರ್ ಸಿಡಿದಿದೆ. ಯಂತ್ರದಿಂದ ಆಮ್ಲಜನಕ ಸೋರಿಕೆಯಾಗಿದ್ದು, ಲೈಟ್ ಸ್ವಿಚ್ ಆನ್ ಮಾಡಿದ ಮರುಕ್ಷಣವೇ ಬೆಂಕಿ ಹೊತ್ತಿಕೊಂಡು ಮನೆ ಇಡೀ ಆವರಿಸಿದೆ ಎಂದು ವರದಿಗಖು ತಿಳಿಸಿವೆ. 

ದಾರಿ ಮಧ್ಯೆ ಅಸು ನೀಗಿದ ಪತ್ನಿ

ಸ್ಫೋಟದ ಶಬ್ದ ಕೇಳಿ ಸುತ್ತಮುತ್ತಲಿನ ಜನ ಓಡಿ ಬಂದಿದ್ದಾರೆ. ಗಂಡ ಹೆಂಡತಿ ಕಿರುಚುತ್ತಿರುವುದನ್ನು ಕಂಡು ಕೂಡಲೇ ಇಬ್ಬರನ್ನೂ ಹೊರತಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಸಂತೋಷ್ ಮೀನಾ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸುಲ್ತಾನ್ ಸಿಂಗ್ ಅವರನ್ನು ಜೈಪುರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ದುರಂತ ನಡೆಯುವಾಗ ಇಬ್ಬರೂ ಮಕ್ಕಳು ಮನೆಯಲ್ಲಿರಲಿಲ್ಲ

ದಂಪತಿಗೆ 10 ಮತ್ತು 12 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಅಪಘಾತದ ಸಮಯದಲ್ಲಿ ಅವರು ಮನೆಯಿಂದ ಹೊರಗಿದ್ದರು. ಹೀಗಾಗಿ ಸುರಕ್ಷಿತವಾಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ ಪೂರೈಸಿದ ಅಂಗಡಿಯವರ ವಿಚಾರಣೆ ನಡೆಸುತ್ತಿದ್ದಾರೆ. ಈ ಯಂತ್ರವನ್ನು ಚೀನಾದಲ್ಲಿ ತಯಾರಿಸಲಾಗಿದೆ ಎಂದು ದುನಾಂದರ್ ಹೇಳಿಕೊಂಡಿದ್ದಾರೆ. ಸಾಧನದ ಸಂಕೋಚಕ ಸ್ಫೋಟಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ನಿಖರ, ಕಾರಣ ಇನ್ನೂ ತಿಳಿದುಬಂದಿಲ್ಲ.

Follow Us:
Download App:
  • android
  • ios