ರಸ್ತೆ ಬದಿ ಸ್ಟಾಲ್‌ನಲ್ಲಿ ಮೊಮೊಸ್ ತಿಂದ ಮಹಿಳೆ ಮೃತ, 20 ಮಂದಿ ಗಂಭೀರ!

ಆಹಾರ ಸುರಕ್ಷತೆ ಕುರಿತು ಮತ್ತ ಗಂಭೀರ ಪ್ರಶ್ನೆ ಮೂಡಿದೆ. ರಸ್ತೆಯ ಬದಿಯ ಸ್ಟಾಲ್‌ನಲ್ಲಿ ಮೊಮೊಸ್ ತಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರೆ,20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 

Woman dies after eating momos 20 more hospitalized in Hyderabad ckm

ಹೈದರಾಬಾದ್(ಅ.28) ಆಹಾರ ವಿಚಾರದಲ್ಲಿ ನಿರ್ಲಕ್ಷ್ಯ, ಕಳಪೆ ಗುಣಮಟ್ಟ, ಹಳಸಿದ, ಕೆಟ್ಟ ಹೋಗಿರುವ ಆಹಾರಗಳು ಬದುಕನ್ನೇ ಕಸಿದುಕೊಳ್ಳುತ್ತಿದೆ. ಇತ್ತೀಚೆಗೆ ಈ ರೀತಿಯ ಆಹಾರ ಸೇವಿಸಿ ಹಲವರ ಪ್ರಾಣಕ್ಕೆ ಕುತ್ತಾಗಿದೆ. ಇದೀಗ ಮತ್ತೊಂದು ಘಟನೆ ಸೇರಿಕೊಂಡಿದೆ. ಹೈದರಾಬಾದ್‌ನ ಬಂಜಾರ ಹಿಲ್ಸ್ ಬಳಿ ಫುಡ್ ಸ್ಟಾಲ್‌ನಲ್ಲಿ ಮೊಮೊಸ್ ಸವಿದ ಮಹಿಳೆಯೊಬ್ಬರು ಮೃತಪಟ್ಟಿದ್ದರೆ, 20 ಮಂದಿ ಆಸ್ವಸ್ಥಗೊಂಡಿದ್ದಾರೆ. 

ಬಂಜಾರ ಹಿಲ್ಸ್ ಬಳಿಯ ನಂದಿನಗರದಲ್ಲಿನ ಹಲವು ಫುಡ್ ಸ್ಟಾಲ್‌ಗಳಿವೆ. ಈ ಪೈಕಿ ಮೊಮೊಸ್ ಸ್ಟಾಲ್‌ಗೆ ಪ್ರತಿ ದಿನ ಹಲವರು ಭೇಟಿ ನೀಡುತ್ತಾರೆ. ಹೀಗೆ ಮಹಿಳೆಯೊಬ್ಬರು ಶುಕ್ರವಾರ(ಅ.25) ಮೊಮೊಸ್ ಖರೀದಿಸಿ ಸೇವಿಸಿದ್ದಾರೆ. ಮೊಮೊಸ್ ಸೇವನೆ ಬಳಿಕ ಮಹಿಳೆ ಆಸ್ವಸ್ಥರಾಗಿದ್ದಾರೆ. ಹೀಗಾಗಿ ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಅದೇ ದಿನ ಮೊಮೊಸ್ ಸೇವಿಸಿದ 20 ಮಂದಿ ಆರೋಗ್ಯ ಸಮಸ್ಯೆ ಎದುರಿಸಿದ್ದರೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಆಹಾರದಲ್ಲಿನ ವಿಷಕಾರಿ ಅಂಶಗಳಿಂದ ಹಲವರು ಅಸ್ವಸ್ಥರಾಗಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿಗಳು ಬಯಲಾಗಿದೆ.

ಒಳಗೆ ಜೀವಂತ ಹುಳು ತುಂಬಿಸಿ ಮಾಡಿದ ಮೊಮೊಸ್ : ವಾಂತಿ ಬರಿಸುವ ವೀಡಿಯೋ ಸಖತ್ ವೈರಲ್‌

ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಆಸ್ವಸ್ಥಗೊಂಡವರ ಚಿಕಿತ್ಸೆ ಮುಂದುವರಿದಿದೆ. ಇತ್ತ ಮೊಮೊಸ್ ತಿಂದು ಅಸ್ವಸ್ಥಗೊಂಡ ಪೈಕಿ ತರಕಾರಿ ವ್ಯಾಪಾರಿ ಜಕಾತಿ ಆಂಜನೇಯಲು ಇಬ್ಬರು ಪುತ್ರಿಯರು ಹಾಗೂ ಸಂಬಂಧಿಕರು ಸೇರಿದ್ದಾರೆ. ಮೂವರನ್ನು ಆಸ್ಪತ್ರೆ ದಾಖಲಸಲಾಗಿದೆ. ಇತ್ತ ಜಕಾತಿ ಆಂಜನೇಯಲು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಿಸಿದ್ದಾರೆ. 

ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಬಂಜಾರ ಹಿಲ್ಸ್ ಬಳಿಯ ಫುಡ್ ಸ್ಟಾಲ್‌ಗೆ ದಾಳಿ ಮಾಡಿ ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಹೈದರಾಬಾದ್ ಪೊಲೀಸರು ಆಹಾರ ಗುಣಮಟ್ಟದ ಕುರಿತು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಕಳಪೆ ಗುಣಮಟ್ಟದ ಆಹಾರಗಳಿಂದ ಸಮಸ್ಯೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಫುಡ್ ಪಾಯಿಸನ್‌ನಿಂದ ಈ ಸಮಸ್ಯೆ ಎದುರಾಗಿದೆ ಅನ್ನೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಗಂಭೀರವಾಗಿರುವ ಕೆಲವರವನ್ನು ಬಂಜಾರ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯ ಆಹಾರ ಇದೀಗ ಹೈದರಾಬಾದ್‌ನಲ್ಲಿ ಬಾರಿ ಜನಪ್ರಿಯತೆ ಪಡೆದುಕೊಂಡಿದೆ. ಹೈದರಾಬಾದ್ ಐಟಿ ವಲಯದಲ್ಲಿ ಕ್ರಾಂತಿ ಮಾಡಿರುವ ಕಾರಣ ದೇಶದ ಮೂಲ ಮೂಲೆಗಳಿಂದ ಉದ್ಯೋಗದ ಕಾರಣದಿಂದ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಹೀಗಾಗಿ ಮೊಮೊಸ್ ಸೇರಿದಂತೆ ಹಲವು ಆಹಾರಗಳು ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಈ ಪೈಕಿ ಮೊಮೊಸ್ ಸ್ಟಾಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೈದರಾಬಾದ್‌ನಲ್ಲಿ ಪ್ರತಿ ದಿನ ಲಕ್ಷ ಲಕ್ಷ ರೂಪಾಯಿ ಮೊಮೊಸ್ ವಹಿವಾಟು ನಡೆಯುತ್ತಿದೆ. 

ಸ್ನೇಹಿತರಿಂದ ಮೊಮೋಸ್‌ ತಿನ್ನೋ ಚಾಲೆಂಜ್‌, ಬೇಕಾಬಿಟ್ಟಿ ತಿಂದ ಯುವಕ ಸಾವು

 

Latest Videos
Follow Us:
Download App:
  • android
  • ios