Asianet Suvarna News Asianet Suvarna News

ತಮಿಳ್ನಾಡು ರಾಜಕೀಯಕ್ಕೆ ನಟ ವಿಜಯ್‌ ಪ್ರವೇಶ?

* ಸ್ಥಳೀಯ ಚುನಾವಣೆಯಲ್ಲಿ ಥಳಪತಿ ಅಭಿಮಾನಿಗಳಿಗೆ ಭಾರೀ ಜಯ

* ತಮಿಳ್ನಾಡು ರಾಜಕೀಯಕ್ಕೆ ನಟ ವಿಜಯ್‌ ಪ್ರವೇಶ?

With Tamil Nadu rural elections actor Vijay makes a silent entry into politics pod
Author
Bangalore, First Published Oct 16, 2021, 10:07 AM IST
  • Facebook
  • Twitter
  • Whatsapp

ಚೆನ್ನೈ(ಅ.16): ತಮಿಳುನಾಡು(Tamil Nadu) ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ(Local Body Elections) ನಟ ವಿಜಯ್‌(Actor Vijay) ಅವರ ಅಭಿಮಾನಿ ಸಂಘಟನೆಗಳು ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿವೆ. ಇದು ಡಿಎಂಕೆ, ಅಣ್ಣಾಡಿಎಂಕೆ(ADMK) ರಾಜಕೀಯ ನಾಯಕರು ಹುಬ್ಬೇರಿಸುವಂತೆ ಮಾಡಿದ್ದಾರೆ. ಜೊತೆಗೆ ಇದು ಮುಂಬರುವ ದಿನಗಳಲ್ಲಿ ವಿಜಯ್‌ ಥಳಪತಿ(Vijay) ರಾಜಕೀಯ ಪ್ರವೇಶದ ಸುಳಿವಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ವಿಜಯ್‌ ಅಭಿಮಾನಿಗಳು ‘ಥಲಪತಿ ವಿಜಯ್‌ ಮಕ್ಕಲ್‌ ಇಯಕ್ಕಮ್‌’ ಸಂಘದ ಅಡಿ ಚುನಾವಣೆಗೆ ಸ್ಪರ್ಧಿಸಿದ್ದರು. ವಿಜಯ್‌ ಕೂಡ ತಮ್ಮ ಭಾವಚಿತ್ರ ಮತ್ತು ಹೆಸರು ಬಳಕೆಗೆ ಅನುಮತಿ ನೀಡಿದ್ದರು. ಅಭಿಮಾನಿಗಳ ಸಂಘದ 115 ಜನ ಗೆಲುವು ಸಾಧಿಸಿದ್ದು, 13 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೆಲುವು ಸಾಧಿಸಿದವರಲ್ಲಿ ರೈತರು, ವಿದ್ಯಾರ್ಥಿಗಳು, ಶಿಕ್ಷಕರು, ವ್ಯಾಪಾರಿಗಳು ಮತ್ತು 45 ಮಂದಿ ಮಹಿಳೆಯರೂ ಸೇರಿದ್ದಾರೆ. ಹೀಗಾಗಿ ವಿಜಯ್‌ ಅಭಿಮಾನಿ ಸಂಘದ ಭರ್ಜರಿ ಗೆಲುವು ತಮಿಳುನಾಡು ರಾಜಕೀಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ವಿಜಯ ಸಕ್ರಿಯ ರಾಜಕಾರಣ ಪ್ರವೇಶಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಜಯ್‌ರ ಹಿಂದಿನ ಚಿತ್ರ ಮರ್ಸೆಲ್‌ನ ಕೆಲ ಡೈಲಾಗ್‌ಗಳು ಅವರ ರಾಜಕೀಯ ಒಲವಿನ ಸುಳಿವು ನೀಡಿತ್ತು. ಆನಾರೋಗ್ಯದ ಕಾರಣದಿಂದ ಈಗಾಗಲೇ ರಜನಿಕಾಂತ್‌ ರಾಜಕೀಯದಿಂದ ಹಿಂದೆ ಸರಿದಿದ್ದು, ಕಮಲ್‌ ಹಾಸನ್‌ ಅವರ ‘ಮಕ್ಕಳ್‌ ನಿಧಿ ಮಯ್ಯಮ್‌’ ಮುಗ್ಗರಿಸಿದೆ. ಹೀಗಾಗಿ ವಿಜಯ್‌ ಮೇಲೆ ಭಾರಿ ನಿರೀಕ್ಷೆ ಮೂಡಿದೆÜ.

Follow Us:
Download App:
  • android
  • ios