* ಸೋಂಕಿನ ಪ್ರಮಾಣ ಅಥವಾ ಪಾಸಿಟಿವಿಟಿ ದರ ಸತತ 14 ದಿನ ಇಳಿಕೆ* 14 ದಿನದಿಂದ ಶೇ.5ಕ್ಕಿಂತ ಕಮ್ಮಿ ಪಾಸಿಟಿವಿಟಿ:ಮುಗಿಯಿತೇ 2ನೇ ಅಲೆ?* 2ನೇ ಅಲೆ ಇನ್ನೂ ಮುಗಿ​ದಿಲ್ಲ. ಅದು ಕೊನೆ​ಗೊ​ಳ್ಳುವುದಕ್ಕೆ ಇನ್ನೂ ​ಸ​ಮ​ಯ​ವಿ​ದೆ ಎಂದ ತಜ್ಞರು

ನವ​ದೆ​ಹ​ಲಿ(ಜೂ.22): ಸೋಂಕಿನ ಪ್ರಮಾಣ ಅಥವಾ ಪಾಸಿಟಿವಿಟಿ ದರ ಸತತ 14 ದಿನ ಇಳಿಕೆ ಹಾದಿಯಲ್ಲಿದ್ದರೆ ಅಥವಾ ನಿಗದಿತ ಮಿತಿಗಿಂತ ಕಡಿಮೆ ಇದ್ದಲ್ಲಿ ಅದು ಸೋಂಕು ಇಳಿಮುಖದಲ್ಲಿರುವ ಸೂಚನೆ ಎಂದೇ ಜನಜನಿತ. ಇದೀಗ ಭಾರತದಲ್ಲೂ ಸತತ 14 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದಾಖಲಾಗಿರುವ ಕಾರಣ 2ನೇ ಅಲೆ ಮುಕ್ತಾಯವಾಗಿರಬಹುದು ಎಂಬ ಮಾತುಗಳು ಕೇಳಿಬಂದಿವೆ.

ಆದರೆ ತಜ್ಞರು ಮಾತ್ರ 2ನೇ ಅಲೆ ಇನ್ನೂ ಮುಗಿ​ದಿಲ್ಲ. ಅದು ಕೊನೆ​ಗೊ​ಳ್ಳುವುದಕ್ಕೆ ಇನ್ನೂ ​ಸ​ಮ​ಯ​ವಿ​ದೆ ಎಂದು ಅಭಿ​ಪ್ರಾ​ಯ​ಪ​ಟ್ಟಿ​ದ್ದಾರೆ. ದೇಶದಲ್ಲಿ ಈಗ ಪಾಸಿ​ಟಿ​ವಿಟಿ ದರ ಶೇ.3.38ಕ್ಕೆ ಇಳಿ​ದಿ​ದ್ದರೂ, ಕೆಲವು ಜಿಲ್ಲೆ​ಗ​ಳಲ್ಲಿ ಈಗಲೂ ಪಾಸಿ​ಟಿ​ವಿಟಿ ದರ 5ಕ್ಕಿಂತಲೂ ಹೆಚ್ಚಿದೆ. ಅಲ್ಲದೇ ಹೊಸ​ದಾಗಿ ಕಂಡು​ಬಂದಿ​ರುವ ಡೆಲ್ಟಾಪ್ಲಸ್‌ ರೂಪಾಂತರಿ ವೈರಸ್‌ ಅಧಿಕ ಪ್ರಸ​ರಣದಲ್ಲಿ ಪ್ರಸ​ರ​ಣ​ಗೊ​ಳ್ಳುವ ಸಾಧ್ಯ​ತೆ​ಯನ್ನು ತಳ್ಳಿ​ಹಾ​ಕು​ವಂತಿಲ್ಲ.

ಹೀಗಾಗಿ ಈಗಲೇ ಕೊರೋನಾ 2ನೇ ಅಲೆ ಮುಕ್ತಾ​ಯಕಂಡಿದೆ ಎಂದು ಹೇಳಲು ಆಗದು ತಂದು ಸ್ಕೂಲ್‌ ಆಫ್‌ ನ್ಯಾಚು​ರಲ್‌ ಸೈನ್ಸ್‌ನ ಪ್ರಾಧ್ಯಾ​ಪ​ಕ ನಾಗ ಸುರೇಶ್‌ ವೀರಾಪು ಅಭಿ​ಪ್ರಾ​ಯ​ಪ​ಟ್ಟಿ​ದ್ದಾರೆ.