ಪುಣೆ[ಜ.12]: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ಇನ್ನೂ ಅಧಿಕೃತ ಬಂಗಲೆ ದೊರೆಯದ ಕಾರಣ, ಸಮಸ್ಯೆ ಹೇಳಿಕೊಂಡು ಬರುವ ಕಾರ್ಯಕರ್ತರನ್ನು ಭೇಟಿ ಆಗಲು ಜಾಗದ ಸಮಸ್ಯೆ ಎದುರಿಸುತ್ತಿದ್ದಾರೆ.

ಮನೆಯ ಡೈನಿಂಗ್‌ ಹಾಲ್‌ನಲ್ಲೇ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಇದು ಪತ್ನಿ ಸುನೇತ್ರಾ ಕೋಪಕ್ಕೆ ಕಾರಣವಾಗಿದೆ. ನೀವು ಕಾರ್ಯಕರ್ತರನ್ನು ಭೇಟಿ ಆಗುವುದಾದರೆ ಸರ್ಕಾರ ಬಂಗಲೆ ಸಿಗುವವರೆಗೂ ತಾನು ಈ ಮನೆಯಲ್ಲಿ ಇರುವುದಿಲ್ಲ ಎಂದು ಸುನೇತ್ರಾ ಹೇಳಿದ್ದಾರಂತೆ.

'ಮಹಾ' ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಪುತ್ರ ಆದಿತ್ಯ ಠಾಕ್ರೆಗೆ ಸಿಕ್ತು ಈ ಖಾತೆ!

ಹೀಗಾಗಿ ತೀರಾ ಅಗತ್ಯದ ಕೆಲಸದ ಹೊರತಾಗಿ ಸಣ್ಣಪುಟ್ಟವಿಷಯಗಳಿಗೆ ನನ್ನನ್ನು ಭೇಟಿ ಆಗಲು ಮುಂಬೈಗೆ ಬರಬೇಡಿ ಎಂದು ಅಜಿತ್‌ ಪವಾರ್‌ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.