ಕೋವಿಡ್‌ 70 ದಿನದ ಕನಿಷ್ಠ: 84,332 ಮಂದಿಗೆ ಸೋಂಕು, 4,002 ಸಾವು!

* ಕೋವಿಡ್‌ 70 ದಿನದ ಕನಿಷ್ಠ 

* 84,332 ಮಂದಿಗೆ ಸೋಂಕು, 4002 ಮಂದಿ ಸಾವು

* ಗುಣಮುಖರ ಪ್ರಮಾಣ ಶೇ.95ಕ್ಕೇರಿಕೆ

* ಸಕ್ರಿಯ ಸೋಂಕಿತರ ಸಂಖ್ಯೆ 10.8ಲಕ್ಷಕ್ಕೆ ಇಳಿಕೆ

With 84332 Covid cases India sees lowest daily rise in 70 days 4002 deaths in 24 hours pod

ನವದೆಹಲಿ(ಜೂ.13): ದೇಶಾದ್ಯಂತ ಶನಿವಾರ 84,332 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಶನಿವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಸತತ 3ನೇ ದಿನವೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಜೊತೆಗೆ ಕಳೆದ 70 ದಿನಗಳ ಸೋಂಕಿತರ ಕನಿಷ್ಠ ಸಂಖ್ಯೆ ಇದಾಗಿದೆ.

ಆದರೆ ಕಳೆದ 24 ಗಂಟೆಗಳ ಅವಧಿಯಲ್ಲಿ 4002 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಆತಂಕಕಾರಿ ಬೆಳವಣಿಗೆ.

ಕೋವಿಡ್‌ ಚಿಕಿತ್ಸೆ, ಲಸಿಕೆಗೆ ಪೇಟೆಂಟ್‌ ಬೇಡ: ಮೋದಿ

ಇದೇ ವೇಳೆ, ಗುಣಮುಖರ ಶೇಕಡಾವಾರು ಪ್ರಮಾಣ ಹೆಚ್ಚುತ್ತಿದ್ದು, ಇದರ ಪ್ರಮಾಣ ಶೇ.95.07ಕ್ಕೆ ಏರಿದೆ. ಸಕ್ರಿಯ ಸೋಂಕಿತರ ಸಂಖ್ಯೆ 10,80,690ಕ್ಕೆ ಇಳಿದಿದೆ. ಸಕ್ರಿಯರ ಸಂಖ್ಯೆ 11 ಲಕ್ಷಕ್ಕಿಂತ ಕೆಳಗೆ ಇಳಿದಿದ್ದು 63 ದಿನದಲ್ಲಿ ಇದೇ ಮೊದಲು.

ಶುಕ್ರವಾರ 91,702 ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿತ್ತು. ಶನಿವಾರ ಇನ್ನಷ್ಟುಇಳಿಕೆ ಆಗುವುದರೊಂದಿಗೆ ಪಾಸಿಟಿವಿಟಿ ದರ ಶೇ.4.39ಕ್ಕೆ ಕುಸಿದಿದೆ. ಪಾಸಿಟಿವಿಟಿ ದರ ಶೇ.10ಕ್ಕಿಂತ ಕಮ್ಮಿ ಇರುವುದು ಇದು ಸತತ 19ನೇ ದಿನ.

30 ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗ

ಒಟ್ಟಾರೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 3,67,081 ಆಗಿದೆ. ಸಾವಿನಲ್ಲಿ ವಿಶ್ವದ ಪಟ್ಟಿಯಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ ನಂತರದ 3ನೇ ಸ್ಥಾನ ಭಾರತಕ್ಕೆ ಪ್ರಾಪ್ತವಾಗಿದೆ. ಇನ್ನು ಒಟ್ಟಾರೆ ಸೋಂಕಿತರ ಸಂಖ್ಯೆ 2,93,59,155 ದೊಂದಿಗೆ 3 ಕೋಟಿಯತ್ತ ದಾಪುಗಾಲು ಹಾಕುತ್ತಿದೆ. 2.80 ಕೋಟಿಯಷ್ಟುಜನ ಕೋವಿಡ್‌ ಜಯಿಸಿದ್ದಾರೆ.

Latest Videos
Follow Us:
Download App:
  • android
  • ios