* 2.6 ಲಕ್ಷ ಹೊಸ ಕೇಸ್‌, 28 ದಿನಗಳ ಕನಿಷ್ಠ* ದಾಖಲೆಯ 4.2 ಲಕ್ಷ ಜನ ಗುಣಮುಖ* ಕೋವಿಡ್‌ಗೆ ದಾಖಲೆಯ 4329 ಬಲಿ* ಸಕ್ರಿಯ ಕೇಸು ಸಂಖ್ಯೆ 33 ಲಕ್ಷಕ್ಕೆ ಇಳಿಕೆ

ನವದೆಹಲಿ(ಮೇ.19): ಕೊರೋನಾ ಸೋಂಕಿನ 2ನೇ ಅಲೆ ಇಳಿಕೆಯಾಗುತ್ತಿರಬಹುದು ಎಂಬ ಸುಳಿವಿನ ನಡುವೆಯೇ, ಮಂಗಳವಾರ ಹೊಸ ಸೋಂಕಿತರಿಗಿಂತ ಡಬಲ್‌ ಪ್ರಮಾಣದ ಜನರು ಗುಣಮುಖರಾಗಿ ಮನೆಗೆ ತೆರಳುವ ಮೂಲಕ ಶುಭ ಸುದ್ದಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 2,63,533 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದರೆ, 422436 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಸೋಂಕಿತರ ಪ್ರಮಾಣ ಕಳೆದ 28 ದಿನಗಳಲ್ಲೇ ಕನಿಷ್ಠವಾಗಿದೆ. ಜೊತೆಗೆ ಒಂದೇ ದಿನದಲ್ಲಿ ಗುಣಮುಖರಾದವರ ಪ್ರಮಾಣ 4 ಲಕ್ಷ ದಾಟಿದ್ದು ಇದೇ ಮೊದಲು. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 252,28,996ಕ್ಕೆ ತಲುಪಿದ್ದರೆ, ಗುಣಮುಖರಾದವರ ಪ್ರಮಾಣ 2,15,96,512ಕ್ಕೆ ಏರಿದೆ. ಸಕ್ರಿಯ ಸೋಂಕಿತರ ಪ್ರಮಾಣವು 33 ಲಕ್ಷಕ್ಕೆ ಇಳಿಕೆಯಾಗಿದೆ.

ದಾಖಲೆ ಸಾವು: ಈ ನಡುವೆ ಕಳೆದ 24 ಗಂಟೆಯಲ್ಲಿ ದಾಖಲೆಯ 4,329 ಜನರನ್ನು ಬಲಿಪಡೆದಿದೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 2,78,719ಕ್ಕೆ ತಲುಪಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona