ಗೋವಾದ ಮಹದಾಯಿ ನದಿಗೆ ಅಡ್ಡಲಾಗಿ ಜಲ-ವಿದ್ಯುತ್‌ ಘಟಕ| ಕೇಂದ್ರದ ಭರವಸೆ

ಪಣಜಿ[ಡಿ.30]: ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇನ್ನಿತರ ಭಾಗಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ಯೋಜನೆ ಸಂಬಂಧ ಕರ್ನಾಟಕ ಮತ್ತು ಗೋವಾ ಸರ್ಕಾರಗಳ ನಡುವೆ ಅಸಮಾಧಾನ ಏರ್ಪಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೀಗಿರುವಾಗಲೇ ಮಹದಾಯಿ ನದಿಗೆ ಅಡ್ಡಲಾಗಿ ಜಲವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. ಗೋವಾಕ್ಕೆ ಭೇಟಿ ನೀಡಿರುವ ಕೇಂದ್ರ ಇಂಧನ ಖಾತೆ ಸಚಿವ ಆರ್‌.ಕೆ.ಸಿಂಗ್‌. ಜಲವಿದ್ಯುತ್‌ ಉತ್ಪಾದನಾ ಘಟಕ ಆರಂಭಿಸಲು ಗೋವಾ ಸರ್ಕಾರ ಸೂಕ್ತ ಜಾಗ ತೋರಿಸಿದಲ್ಲಿ ಘಟಕ ಆರಂಭಿಸಲು ಕೇಂದ್ರ ಸಿದ್ಧ ಎಂದಿದ್ದಾರೆ.

ಗೋವಾ ತನ್ನ ರಾಜ್ಯದಲ್ಲಿ ಯಾವುದೇ ವಿದ್ಯುತ್‌ ಉತ್ಪಾದನಾ ಘಟಕ ಹೊಂದಿಲ್ಲ. ತನ್ನ ಬೇಡಿಕೆಗೆ ಅದು ಪೂರ್ಣವಾಗಿ ಹೊರ ರಾಜ್ಯಗಳನ್ನು ಅವಲಂಬಿಸಿದೆ.