Asianet Suvarna News Asianet Suvarna News

ಕೇಂದ್ರ ನೀಡದಿದ್ದರೆ ನಾವೇ ಉಚಿತ ಲಸಿಕೆ ನೀಡುತ್ತೇವೆ: ಕೇಜ್ರಿ!

ಕೊರೋನಾ ಲಸಿಕೆಯನ್ನು ಉಚಿತವಾಗಿ ವಿತರಿಸುವ ಕುರಿತು ಚರ್ಚೆ| ಮಮತಾ ಬೆನ್ನಲ್ಲೇ ಉಚಿತ ಲಸಿಕೆ ಪರ ಕೇಜ್ರೀವಾಲ್ ಧ್ವನಿ| ಕೇಂದ್ರ ನೀಡದಿದ್ದರೆ ನಾವೇ ಉಚಿತ ಲಸಿಕೆ ನೀಡುತ್ತೇವೆ: ಕೇಜ್ರಿ

Will provide Covid 19 vaccine free to people of Delhi if Centre fails to do so says CM Kejriwal pod
Author
Bangalore, First Published Jan 14, 2021, 8:08 AM IST

ನವದೆಹಲಿ: ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾದರೆ, ದೆಹಲಿಯ ಆಮ್‌ ಆದ್ಮಿ ಸರ್ಕಾರವೇ ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆಯನ್ನು ವಿತರಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ಘೋಷಿಸಿದ್ದಾರೆ.

‘ಕೊರೋನಾ ಲಸಿಕೆಯನ್ನು ಉಚಿತವಾಗಿ ವಿತರಿಸುವ ಕುರಿತಂತೆ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ನೋಡೋಣ. ಒಂದು ವೇಳೆ ಕೇಂದ್ರ ಉಚಿತವಾಗಿ ಲಸಿಕೆ ನೀಡದಿದ್ದರೆ ನಾವೇ ಯಾವುದೇ ಶುಲ್ಕವಿಲ್ಲದೆ ಲಸಿಕೆಯನ್ನು ವಿತರಿಸುತ್ತೇವೆ’ ಎಂದು ಹೇಳಿದರು. ಇದೇ ವೇಳೆ ಲಸಿಕೆಯ ದಕ್ಷತೆ ಬಗೆಗಿನ ವದಂತಿಗಳಿಗೆ ಕಿವಿಗೊಡಬೇಡಿ. ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.

ಎಲ್ಲರಿಗೂ ಉಚಿತ ಕೋವಿಡ್‌ ಲಸಿಕೆ: ಮಮತಾ ಘೋಷಣೆ

ಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ಪಶ್ಚಿಮ ಬಂಗಾಳ ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಕೋವಿಡ್‌ ಲಸಿಕೆ ವಿತರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಘೋಷಿಸಿದ್ದಾರೆ.

ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಮಮತಾ ಬ್ಯಾನರ್ಜಿ, ‘ಪೊಲೀಸ್‌ ಸಿಬ್ಬಂದಿ, ಹೋಂ ಗಾರ್ಡ್‌, ವಿಪತ್ತು ನಿರ್ವಹಣಾ ಸಿಬ್ಬಂದಿ ಸೇರಿದಂತೆ ಕೊರೋನಾ ವಾರಿಯರ್‌ಗಳಿಗೆ ಆದ್ಯತೆಯ ಮೇಲೆ ಲಸಿಕೆ ವಿತರಿಸಲಾಗುತ್ತದೆ. ಹಾಗೆಯೇ ರಾಜ್ಯದ ಪ್ರತಿಯೊಬ್ಬರಿಗೂ ಯಾವುದೇ ಶುಲ್ಕ ವಿಧಿಸದೆ ಉಚಿತವಾಗಿ ಲಸಿಕೆ ವಿತರಿಸಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಹ ಉಚಿತ ಲಸಿಕೆ ವಿತರಿಸುವುದಾಗಿ ಘೋಷಿಸಿದ್ದರು. ಭಾರತದಲ್ಲಿ ಜ.16ರಿಂದ ಲಸಿಕೆ ವಿತರಿಸಲು ನಿರ್ಧರಿಸಲಾಗಿದೆ.

Follow Us:
Download App:
  • android
  • ios