Asianet Suvarna News Asianet Suvarna News

ಸಿಸಿಎ ಜಾರಿ ಬಳಿಕ ಭಾರತೀಯನನ್ನು ಮದುವೆಯಾಗಿರುವ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್‌ಗೆ ಭಾರತದ ಪೌರತ್ವ ಸಿಗಲಿದೆಯೇ?

ಕಳೆದ ವರ್ಷ ಗೆಳೆಯ ಸಚಿನ್ ಮೀನಾಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿ ಈಗ ಗ್ರೇಟರ್ ನೋಯ್ಡಾದಲ್ಲಿ  ನೆಲೆಸಿರುವ  ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಕೇಂದ್ರದ ಸಿಎಎ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Will Pakistani woman Seema Haider get citizenship after implementation of CAA Rules gow
Author
First Published Mar 12, 2024, 2:45 PM IST

ನವದೆಹಲಿ (ಮಾ.12): ಪೌರತ್ವ ತಿದ್ದುಪಡಿ ಕಾಯ್ದೆ- ಸಿಎಎ ಜಾರಿಗೆ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತದಲ್ಲಿ ನೆಲೆಸಿರುವ  ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಸ್ವಾಗತಿಸಿದ್ದಾರೆ. ಕಳೆದ ವರ್ಷ ಗೆಳೆಯ ಸಚಿನ್ ಮೀನಾಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿ ಈಗ ಗ್ರೇಟರ್ ನೋಯ್ಡಾದಲ್ಲಿ  ನೆಲೆಸಿರುವ  ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಸೋಮವಾರ ಪೌರತ್ವ (ತಿದ್ದುಪಡಿ) ಕಾಯ್ದೆಯ ಅನುಷ್ಠಾನದ ನಿಯಮಗಳನ್ನು ತಿಳಿಸುವ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

 ಹಿಂದೂ ಧರ್ಮವನ್ನು ಅಳವಡಿಸಿಕೊಂಡ ಬಳಿಕ  ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಮೀನಾ ಅವರನ್ನು ವಿವಾಹವಾಗಿರುವ ಹೈದರ್,   CAA ಮೂಲಕ ತಾನು  ಭಾರತೀಯ ಪೌರತ್ವವನ್ನು ಪಡೆಯಲು ಸಹಾಯವಾಗಲಿದೆ ಎಂದಿದ್ದಾಳೆ. 2014ರ ಡಿಸೆಂಬರ್ 31ಕ್ಕೂ ಮುನ್ನ ಮುಸ್ಲಿಂ ಬಾಹುಳ್ಯದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದೇಶಗಳಿಂದ ವಲಸೆ ಬಂದ ಮುಸ್ಲಿಮೇತರ ಹಾಗೂ ದಾಖಲೆರಹಿತ ವ್ಯಕ್ತಿಗಳಿಗೆ ತ್ವರಿತ ಪೌರತ್ವ ಸಿಗಲಿದೆ.

ದಿವಾಳಿಯಾದ ಅಪ್ಪನನ್ನು ಉಳಿಸಿದ ಅನಿಲ್‌ ಅಂಬಾನಿ ಮಕ್ಕಳು ಎಷ್ಟು ಓದಿಕೊಂಡಿದ್ದಾರೆ?

ಆದರೆ ಸೀಮಾ ಪೌರತ್ವ ತಿದ್ದುಪಡಿ ಕಾಯ್ದೆಯ ನೇರ ಫಲಾನುಭವಿಯಾಗಲು ಸಾಧ್ಯವಿಲ್ಲ. ಸಿಕ್ಕಿದರೆ ಅದು ಪತಿ ಪೌರತ್ವದ ಕಾರಣ ಸಿಗಬೇಕು. ಅದಕ್ಕೆ ಅನೇಕ ಅಡೆತಡೆಗಳು ಕೂಡ ಇದೆ. ಯಾಕೆಂದರೆ ಪಾಕಿಸ್ತಾನದಲ್ಲಿರುವ ಸೀಮಾ ಹೈದರ್‌ಳ ಪತಿ ಗುಲಾಂ ಹೈದರ್, ತನ್ನ ನಾಲ್ಕು ಮಕ್ಕಳನ್ನು ವಾಪಸ್ ಸುಪರ್ದಿಗೆ ಪಡೆಯುವ ಸಲುವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ. ಇದಕ್ಕಾಗಿ ಭಾರತೀಯ ವಕೀಲರೊಬ್ಬರನ್ನು ಸಂಪರ್ಕಿಸಿದ್ದಾನೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಕೋಬಾಬಾದ್‌ ಮೂಲದ ಸೀಮಾ, ಕಳೆದ ವರ್ಷದ ಮೇ ತಿಂಗಳಲ್ಲಿ ಕರಾಚಿಯಲ್ಲಿನ ಗಂಡನ ಮನೆ ತೊರೆದು, ನಾಲ್ಕು ಮಕ್ಕಳ ಜತೆ ನೇಪಾಳಕ್ಕೆ ಬಂದಿದ್ದಳು. ಅಲ್ಲಿಂದ ತನ್ನ ಪ್ರಿಯತಮನಿಗಾಗಿ ಭಾರತಕ್ಕೆ ಪ್ರಯಾಣಿಸಿದ್ದಳು. ಆಕೆ ಗ್ರೇಟರ್ ನೋಯ್ಡಾದಲ್ಲಿ ಸಚಿನ್ ಮೀನಾ ಜತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾಳೆ ಎಂದು ಜುಲೈನಲ್ಲಿ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಈ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು.

ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ಕಲ್ಪಿಸಲು ಸಂಸತ್ತು ಅಂಗೀಕರಿಸಿದ CAA ಯ ನೇರ ಫಲಾನುಭವಿ ಹೈದರ್ ಆಗುವುದಿಲ್ಲ.

ಮಾರ್ಚ್ 13ರಂದು ಬಹುಕಾಲದ ಗೆಳೆಯನ ಜತೆ ನಟಿ ಕೃತಿ ಕರಬಂಧ ವಿವಾಹ, ಆಮಂತ್ರಣ ಪತ್ರಿಕೆ ಲೀಕ್

ಭಾರತ ಸರ್ಕಾರ ಇಂದು ನಮ್ಮ ದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತಂದಿದೆ. ನಮಗೆ ತುಂಬಾ ಸಂತೋಷವಾಗಿದೆ ಮತ್ತು ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇವೆ. ನಿಜವಾಗಿ ಹೇಳುವುದಾದರೆ, ಮೋದಿ ಜೀ ಅವರು ವಾಗ್ದಾನ ಮಾಡಿದ್ದನ್ನು ಮಾಡಿದ್ದಾರೆ. ನನ್ನ ಜೀವನದುದ್ದಕ್ಕೂ ಅವರಿಗೆ ಋಣಿಯಾಗಿರುತ್ತೇನೆ ಮತ್ತು ಅವರಿಗೆ ಧನ್ಯವಾದ ಹೇಳುತ್ತಲೇ ಇರುತ್ತೇನೆ ಎಂದು ಹೈದರ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

 ಈ ಸಂತೋಷದ ಸಂದರ್ಭದಲ್ಲಿ, ನನ್ನ ಸಹೋದರ ವಕೀಲ ಎ ಪಿ ಸಿಂಗ್ ಅವರ ಕೆಲಸಕ್ಕಾಗಿ ನಾನು ಅಭಿನಂದಿಸುತ್ತೇನೆ ಏಕೆಂದರೆ ಈಗ ನನ್ನ ಪೌರತ್ವ ಸಂಬಂಧಿತ ಅಡೆತಡೆಗಳು ಈ ಕಾನೂನಿನೊಂದಿಗೆ ನಿವಾರಣೆಯಾಗುತ್ತವೆ" ಎಂದು ಸೀಮಾ ಹೈದರ್‌  ಹೇಳಿದ್ದು, ಸಂದೇಶಕ್ಕೂ ಮುನ್ನ  ಜೈ ಶ್ರೀ ರಾಮ್, ರಾಧೆ ರಾಧೆ ಮತ್ತು ಭಾರತ್ ಮಾತಾ ಕಿ ಜೈ" ಎಂದು ಹೇಳಿದ್ದಾರೆ.

ಇನ್ನು ಸೀಮಾಗೆ ಭಾರತದ ಪೌರತ್ವ ಕೊಡಿಸುವ ಸಲುವಾಗಿ ಕಾನೂನು ಹೋರಾಟ ನಡೆಸಿರುವ ವಕೀಲ ಎಪಿ ಸಿಂಗ್ ಕೂಡ ಕೇಂದ್ರ ಸಿಎಎ ಘೋಷಣೆಯನ್ನು ಸ್ವಾಗತಿಸಿದ್ದಾರೆ. ಭಾರತದಲ್ಲಿ ಪೌರತ್ವ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ವಿಭಿನ್ನ ಧರ್ಮಗಳ ಜನರಿಗೆ ಇದರಿಂದ ಸಹಾಯವಾಗಲಿದೆ ಎಂದಿದ್ದಾರೆ.

Follow Us:
Download App:
  • android
  • ios