ಕೋಲ್ಕತಾ(ಜ.  18)  ಪಶ್ಚಿಬ ಬಂಗಾಳದಲ್ಲಿ ಬಿಜೆಪಿ ಮತ್ತು ಮಮತಾ ಬ್ಯಾನರ್ಜಿ ನಡುವೆ ಜಟಾಪಟಿ ಜೋರಾಗಿದೆ. ಒಬ್ಬರ ಮೇಲೆ ಒಬ್ಬರು ಸವಾಲು ಎಸೆಯುತ್ತಿದ್ದಾರೆ. 

ತಾನೇ ಅಖಾಡಕ್ಕೆ ಇಳಿಯುತ್ತೇನೆ ಎಂದು ಮಮತಾ ಸಾರಿದ್ದರು. ಇದನ್ನು  ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು, ದೀದಿ ವಿರುದ್ಧ ಗೆಲ್ಲುತ್ತೇನೆ. ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಪ್ರತಿ ಸವಾಲು ಎಸೆದಿದ್ದಾರೆ.

ಬಿಜೆಪಿ ರೋಡ್ ಶೋ ನಲ್ಲಿ ಹೇಳಿಕೆ-ಸವಾಲು ಹೊರಗೆ ಬಂದಿದೆ. ನಂದಿಗ್ರಾಮದಿಂದ ನನ್ನನ್ನು ಕಣಕ್ಕಿಳಿಸಿದರೆ, ನಾನು ಮಮತಾ ವಿರುದ್ಧ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಇಲ್ಲದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಾರಿದ್ದಾರೆ.

ಮೂರು ಕಿ.ಮೀ ರೋಡ್ ಶೋ ನಡೆಸಿದ ನಂತರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿ, ಪಕ್ಷ ನನ್ನನ್ನು ಎಲ್ಲಿಂದ ಕಣಕ್ಕಿಳಿಸುತ್ತದೆ ಎಂಬುದು ನನಗೆ ಇನ್ನೂ ಗೊತ್ತಿಲ್ಲ ಎಂದು  ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಈಗಿನಿಂದಲೇ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು. ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು ಎಂಬ ವರದಿಗಳು ಬಂದಿದ್ದವು. ಪಕ್ಷ ತೊರೆದವರ ಬಗ್ಗೆ ಚಿಂತೆ ಮಾಡಲ್ಲ ಎಂದು ಮಮತಾ ಹೇಳಿಕೆ ನೀಡಿದ್ದರು.