ಲುಧಿಯಾನಾ(ಮೇ.25): ಲುಧಿಯಾನಾದ ಈ ಮೆಡಿಕಲ್ ಶಾಪ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಈ ಫೋಟೋ ವೈರಲ್ ಆಗುವಂತಹ ವಿಶೇಷತೆ ಏನಿದೆ ಇದರಲ್ಲಿ ಎಂಬ ವಿಚಾರ ಎಲ್ಲರ ಮನದಲ್ಲಿ ಮೂಡುತ್ತದೆ. ಇಲ್ಲಿದೆ ನೋಡಿ ಈ ಫೋಟೋ ಹಿಂದಿನ ಸೀಕ್ರೆಟ್

ಸಾಮಾನ್ಯವಾಗಿ ಅಂಗಡಿ, ಶಾಪ್‌ಗಳ ಹೆಸರಲ್ಲಿ ತಂದೆಯ ಹೆಸರಿನ ಜೊತೆ ಮಗನ ಹೆಸರಿರುತ್ತದೆ. ಆದರೆ  ಪಂಜಾಬ್‌ನ ಲುಧಿಯಾನಾ ನಗರದಲ್ಲಿರುವ ಈ ಮೆಡಿಕಲ್‌ ಶಾಪ್‌ಗೆ ಹಾಕಲಾದ ಬೋರ್ಡ್‌ನಲ್ಲಿ 'ಗುಪ್ತಾ ಆಂಡ್ ಡಾಟರ್ಸ್' ಎಂದು ಬರೆಯಲಾಗಿದೆ. ಅಂದರೆ ತಂದೆಯೊಂದಿಗೆ ಮಗಳ ಹೆಸರಿದೆ. ಶಾಪ್‌ ಹೊರಗೆ ಹಾಕಲಾದ ಬೋರ್ಡ್‌ ಸದ್ಯ ಎಲ್ಲರ ಗಮನ ಸೆಳೆದಿದೆ. ಸದ್ಯ  ಈ ವಿಚಾರವಾಗಿ ಈ ಶಾಪ್‌ ಮಾಲೀಕರನ್ನು ಎಲ್ಲರೂ ಶ್ಲಾಘಿಸಲಾರಂಭಿಸಿದ್ದಾರೆ.

ಈ ಫೋಟೋವನ್ನು ಅಲ್ಲಿನ ಸ್ಥಳೀಯ ವೈದ್ಯ ಅಮನ್ ಕಶ್ಯಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಲಿಂಗ ತಾರತಮ್ಯದ ನಡುವೆ ಶಾಪಪ್ ಮಾಲೀಕ ಇಂತಹ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದು ಬರೆದಿದ್ದಾರೆ.

ಈ ಫೋಟೋಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು,ಇದು ಸ್ತ್ರೀಸಬಲೀಕರಣದೆಡೆ ಒಂದು ಮಹತ್ವದ ಹೆಜ್ಜೆ ಎಂದು ಕಮೆಂಟ್ ಮಾಡಿದ್ದಾರೆ.