ಪ್ರಧಾನಿ ಮೋದಿ ದಿನದ 24 ಗಂಟೆ ಒಬಿಸಿಗಳು ಹಾಗೂ ಅವರ ಗೌರವಿಸುವ ಕುರಿತು ಮಾತನಾಡುತ್ತಾರೆ. ಹಾಗಿದ್ದರೆ ಜಾತಿ ಗಣತಿ ನಡೆಸಲು ಮೋದಿ ಏಕೆ ಹೆದರುತ್ತಿದ್ದಾರೆ’ ಎಂದು ಕಿಡಿಕಾರಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 

ಜೈಪುರ(ಸೆ.24):  ದಿನದ 24 ಗಂಟೆ ಒಬಿಸಿಗಳ (ಹಿಂದುಳಿದ ವರ್ಗ) ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರು ಜಾತಿ ಗಣತಿ ನಡೆಸಲು ಏಕೆ ಹೆದರುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಇಲ್ಲಿ ನಡೆದ ಕಾಂಗ್ರೆಸ್ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್‌ ‘ದೇಶದ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲು ವಿಶೇಷ ಅಧಿವೇಶನ ಕರೆಯಲಾಗಿತ್ತು. ಆದರೆ ಅದರ ಬದಲು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಾಯಿತು. ಈ ಮಸೂದೆಯಲ್ಲಿ ಒಬಿಸಿಗಳಿಗೆ ಒಳಮೀಸಲಾತಿ ನೀಡುವಂತೆ ನಾವು ಒತ್ತಾಯಿಸಿದೆವು. ಆದರೆ ಜಾತಿಗಣತಿ ಮಾಡದೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ದಿನದ 24 ಗಂಟೆ ಒಬಿಸಿಗಳು ಹಾಗೂ ಅವರ ಗೌರವಿಸುವ ಕುರಿತು ಮಾತನಾಡುತ್ತಾರೆ. ಹಾಗಿದ್ದರೆ ಜಾತಿ ಗಣತಿ ನಡೆಸಲು ಮೋದಿ ಏಕೆ ಹೆದರುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಚಕ್ರವಿದ್ದರೂ ನಾಟಕ ಮಾಡಿದ್ದೇಕೆ? ಸೂಟ್‌ಕೇಸ್ ಹೊತ್ತು ಕೂಲಿಯಾದ ರಾಹುಲ್ ಗಾಂಧಿ ಟ್ರೋಲ್!

ಅಲ್ಲದೇ ‘ಮಹಿಳಾ ಮೀಸಲಾತಿ ಇಂದೇ ಜಾರಿಯಾಗಬೇಕೆಂದು ಕಾಂಗ್ರೆಸ್‌ ಬಯಸುತ್ತದೆ. ಅದನ್ನು ಈಗಲೇ ಜಾರಿ ಮಾಡಬಹುದಾಗಿದೆ. ಆದರೆ ಕ್ಷೇತ್ರ ಪುನರ್‌ವಿಂಗಡನೆ ಹಾಗೂ ಜಾತಿ ಜನಗಣತಿ ನೆಪವೊಡ್ಡಿ ಮಸೂದೆಯನ್ನು 10 ವರ್ಷ ಮುಂದೂಡಲು ಬಿಜೆಪಿ ಯೋಜಿಸಿದೆ. ಪ್ರಧಾನಿಯವರೇ ಕಾಂಗ್ರೆಸ್‌ ಜಾತಿಗಣತಿ ಮಾಡಿದೆ ಎಂಬುದನ್ನು ನಿಮ್ಮ ಮುಂದಿನ ಭಾಷಣದಲ್ಲಿ ದೇಶಕ್ಕೆ ತಿಳಿಸಿ. ಜಾತಿ ಗಣತಿ ನಡೆಸಿ’ ಎಂದಿದ್ದಾರೆ.